ಆರೋಗ್ಯಇತ್ತೀಚಿನ ಸುದ್ದಿ

ಹೃದಯದ ಆರೋಗ್ಯದಿಂದ ಜೀರ್ಣಕ್ರಿಯೆವರೆಗೆ; ನಿಮ್ಮ ಡಯೆಟ್​ನಲ್ಲಿ ಎಪ್ರಿಕಾಟ್ ಪಾತ್ರವೇನು?

ಒಂದು ಕಪ್ ಎಪ್ರಿಕಾಟ್ ಸುಮಾರು 3 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಇದು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಎಪ್ರಿಕಾಟ್​ ಹಣ್ಣನ್ನು ಡಯೆಟ್​ನಲ್ಲಿ ಸೇರಿಸಿಕೊಳ್ಳುವುದರಿಂದ ಇನ್ನೂ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ನಮ್ಮ ದೇಹಕ್ಕೆ ಡ್ರೈ ಫ್ರೂಟ್​ಗಳು ಬಹಳ ಪ್ರಯೋಜನಕಾರಿಯಾಗಿವೆ. ದಿನವೂ ನಮ್ಮ ಡಯೆಟ್​ನಲ್ಲಿ ಹಣ್ಣುಗಳು ಮತ್ತು ಡ್ರೈಫ್ರೂಟ್​ಗಳನ್ನು ಸೇರಿಸಿಕೊಂಡರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು. ಆ ರೀತಿಯ ಡ್ರೈಫ್ರೂಟ್​ನಲ್ಲಿ ಎಪ್ರಿಕಾಟ್​ ಕೂಡ ಒಂದು. ಎಪ್ರಿಕಾಟ್​ ಹಣ್ಣನ್ನು ಹಸಿಯಾಗಿಯೂ ಸೇವಿಸಬಹುದು. ಆದರೆ, ಇದಕ್ಕೆ ವಿಶೇಷವಾದ ರುಚಿ ಇರುವುದಿಲ್ಲ.

ಎಪ್ರಿಕಾಟ್‌ ಸಣ್ಣ, ದುಂಡಗಿನ ಮತ್ತು ಚಿನ್ನದ ಬಣ್ಣದ ಹಣ್ಣುಗಳಾಗಿವೆ. ಇದು ಪ್ರುನಸ್ ಕುಟುಂಬದ ಭಾಗವಾಗಿದೆ. ಇದು ರುಚಿಕರವಾದ ಸಿಹಿ ಮತ್ತು ಕಟುವಾದ ರುಚಿಯನ್ನು ಹೊಂದಿರುತ್ತದೆ. ಮಧ್ಯಪ್ರಾಚ್ಯ, ಏಷ್ಯಾ ಮತ್ತು ಯುರೋಪಿನ ಭಾಗಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಕಂಡುಬರುತ್ತವೆ. ಅವುಗಳ ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಅವುಗಳನ್ನು ಸೂಪರ್‌ಫುಡ್ ಎಂದು ಪರಿಗಣಿಸಲಾಗುತ್ತದೆ.

ಹೀಗಾಗಿ, ಒಣಗಿಸಿದ ಎಪ್ರಿಕಾಟ್ ಹಣ್ಣನ್ನು ಹೆಚ್ಚು ಬಳಸಲಾಗುತ್ತದೆ. ಎಪ್ರಿಕಾಟ್ ಹಣ್ಣಿನಲ್ಲಿ ಅಧಿಕ ಫೈಬರ್ ಅಂಶವಿರುತ್ತದೆ. ಫೈಬರ್ ಜೊತೆಗೆ, ವಿಟಮಿನ್ ಮತ್ತು ಆಂಟಿಆಕ್ಸಿಡೆಂಟ್ ಅಂಶಗಳನ್ನು ಹೊಂದಿರುವ ಎಪ್ರಿಕಾಟ್ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಇದು ಜೀರ್ಣಕಾರಿ ಮತ್ತು ಒಟ್ಟಾರೆ ಆರೋಗ್ಯಕ್ಕೆ ಮುಖ್ಯವಾಗಿದೆ.

ಎಪ್ರಿಕಾಟ್​ ಹಣ್ಣಿ​ನಲ್ಲಿರುವ ಕರಗುವ ಫೈಬರ್ ಮಲವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಎಪ್ರಿಕಾಟ್​ನಲ್ಲಿರುವ ಫೈಬರ್ ಅಂಶ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.

ಎಪ್ರಿಕಾಟ್​ನಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೇ, ಚರ್ಮದ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಎಪ್ರಿಕಾಟ್ ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಎಪ್ರಿಕಾಟ್‌ಗಳು ವಿಟಮಿನ್ ಎಯ ಉತ್ತಮ ಮೂಲವಾಗಿದೆ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

ಎಪ್ರಿಕಾಟ್ ವಿಟಮಿನ್ ಸಿ, ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಸೇರಿದಂತೆ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಈ ಉತ್ಕರ್ಷಣ ನಿರೋಧಕವು ಕ್ಯಾನ್ಸರ್ ಮತ್ತು ಹೃದಯ ರಕ್ತನಾಳದ ಕಾಯಿಲೆಗಳನ್ನು ನಿಯಂತ್ರಿಸುತ್ತದೆ. ಎಪ್ರಿಕಾಟ್‌ ಸುಮಾರು 85% ನೀರಿನ ಅಂಶವನ್ನು ಹೊಂದಿರುತ್ತವೆ. ಹೀಗಾಗಿ, ಇದು ನಿಮ್ಮ ದೇಹವನ್ನು ಹೈಡ್ರೇಟ್ ಮಾಡುತ್ತದೆ.

ಕಬ್ಬಿಣದ ಅಂಶವನ್ನು ಹೊಂದಿರುವ ಎಪ್ರಿಕಾಟ್ ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಕೆ ಆರೋಗ್ಯಕರ ಪ್ಲೇಟ್‌ಲೆಟ್ ಕೌಂಟ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ.ಎಪ್ರಿಕಾಟ್ ನಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಮುಖವಾದ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿವೆ. ಅವು ಪೊಟ್ಯಾಸಿಯಮ್, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಖನಿಜಗಳ ಜೊತೆಗೆ ವಿಟಮಿನ್ ಎ, ಸಿ, ಇ ಮತ್ತು ಕೆಗಳ ಉತ್ತಮ ಮೂಲವಾಗಿದೆ. ಈ ಪೋಷಕಾಂಶಗಳು ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಎಪ್ರಿಕಾಟ್‌ಗಳು ಆಹಾರದ ಫೈಬರ್‌ನ ಅತ್ಯುತ್ತಮ ಮೂಲವಾಗಿದೆ, ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ಒಂದು ಕಪ್ ಎಪ್ರಿಕಾಟ್ ಸುಮಾರು 3 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಇದು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಫೈಬರ್ ನಮ್ಮ ಕರುಳಿನ ಬ್ಯಾಕ್ಟೀರಿಯಾವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ, ಇದು ಒಟ್ಟಾರೆ ಜೀರ್ಣಕಾರಿ ಆರೋಗ್ಯಕ್ಕೆ ನಿರ್ಣಾಯಕವಾಗಿದೆ.

ಎಪ್ರಿಕಾಟ್‌ ಹೆಚ್ಚಿನ ಪೊಟ್ಯಾಸಿಯಮ್ ಅಂಶದಿಂದಾಗಿ ಹೃದಯ-ಆರೋಗ್ಯಕರ ಹಣ್ಣಾಗಿದೆ. ಪೊಟ್ಯಾಸಿಯಮ್ ಒಂದು ಖನಿಜವಾಗಿದ್ದು ಅದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಆರೋಗ್ಯಕರ ಹೃದಯ ಬಡಿತವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪಾರ್ಶ್ವವಾಯು ಮತ್ತು ಇತರ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವಲ್ಲಿ ಇದು ಪಾತ್ರವನ್ನು ವಹಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button