ಇತ್ತೀಚಿನ ಸುದ್ದಿರಾಜ್ಯಸುದ್ದಿ

ಹಾಸನದ ಅಧಿದೇವತೆ ಹಾಗೂ ವರ್ಷಕ್ಕೊಮ್ಮೆಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ಗರ್ಭಗುಡಿ ಬಾಗಿಲನ್ನು ಮೈಸೂರು ಅರಸು ವಂಶಸ್ಥರಾದ ನಂಜರಾಜ ಅರಸ್ ಅವರು ಬನ್ನಿ ಕಂಬ ಕಡಿದ ಕೂಡಲೇ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಯಿತು.

ಈ ವೇಳೆ ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರು ಮಾತನಾಡಿದ ಹಾಸನದ ಇತಿಹಾಸದಲ್ಲಿ ಇದೊಂದು ಚಿರಸ್ಮರಣೀಯ ಸುದಿನ, ನಮ್ಮೇಲ್ಲರ ಜೀವನದಲ್ಲಿ ನೆನಪಿಟ್ಟುಕೊಳ್ಳುವ ಪುಣ್ಯದ ಸಂದರ್ಭ. ಇದಕ್ಕೆ ಪರಮಪೂಜ್ಯ ಮಠಾಧೀಶರು, ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾಕ್ಷಿಯಾಗಿದ್ದಾರೆ ಈ ವರ್ಷ ಬಹಳ ಕಡಿಮೆ ದಿನ ದೇವಿಯ ದರ್ಶನ ಸಿಗಲಿದ್ದು ವಿಜ್ರಂಭಣೆಯಿಂದ ಜಾತ್ರಾ ಮಹೋತ್ಸವವನ್ನು ನಡೆಸಲು ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ ಎಂದು ತಿಳಿಸಿದರು.

ಕಳೆದ ವರ್ಷ ಹಾಸನಾಂಬೆ, ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ೧೪.೪೦ ಲಕ್ಷ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದರು. ಈ ಬಾರಿ ೨೦ ಲಕ್ಷ ಜನರು ದೇವಿಯ ದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈ ವೇಳೆ ಯಾವುದೇ ಅವ್ಯವಸ್ಥೆ, ಲೋಪ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸುವಂತೆ ಎಂದು ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಸಚಿವರು ನನಗೆ ಹಾಗೂ ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದಾರೆ ಅದರಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಬಂದ ಭಕ್ತರ ಮನಸ್ಸಿಗೆ ತೃಪ್ತಿ ಆಗುವ ರೀತಿಯಲ್ಲಿ ತಾಯಿ ದರ್ಶನ ಸಿಗಬೇಕು ಎಂದು ನಾವು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ. ಹಿಂದಿನ ಸಲ ಆಗಿದ್ದ ಲೋಪದೋಷಗಳನ್ನು ಸರಿಪಡಿಸಿಕೊಂಡಿದ್ದೇವೆ. ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವದ ಸಿದ್ಧತೆ ಜನಮೆಚ್ಚುಗೆ ಗಳಿಸಲು ಕಾರಣೀಭೂತರಾಗಿರುವ ಜಿಲ್ಲಾಡಳಿತಕ್ಕೆ ವಿಶೇಷವಾದ ಅಭಿನಂದನೆಗಳು. ನಮ್ಮ ಮನೆಯ ಹಾಗೂ ಊರಿನ ಕಾರ್ಯಕ್ರಮದ ರೀತಿಯಲ್ಲಿ ಎಲ್ಲರೂ ಶ್ರಮ ಹಾಕಿ ಕೆಲಸ ಮಾಡುತ್ತಿದ್ದಾರೆ ಎಂದರು.

ಮೈಸೂರು ದಸರಾ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇದರ ವೀಕ್ಷಣೆಗೆ ಡಬಲ್ ಡೆಕರ್ ಬಸ್ ಸಹ ಬಂದಿದೆ. ದೇವಿಯ ದರ್ಶನಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸುಪ್ರೀಂ ಕೋರ್ಟ್ನ ನ್ಯಾಯಾಧೀಶರುಗಳು ಹಾಗೂ ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳು ಸೇರಿದಂತೆ ಹೊರ ರಾಜ್ಯಗಳಿಂದಲೂ ಅಪಾರ ಜನರು ಬರುತ್ತಾರೆ. ಅವರಿಗೆ ಮೆಚ್ಚಿಗೆ ಆಗುವ ರೀತಿಯಲ್ಲಿ ನಮ್ಮ ನಡವಳಿಕೆ ಇರಬೇಕು. ಹಾಸನದ ಹಿರಿಮೆ ಹೆಚ್ಚಿಸುವ ರೀತಿ ನಡೆದುಕೊಳ್ಳೋಣ ಎಂದರು.
[9:00 pm, 24/10/2024] +91 81519 32854: ಹಾಸನ: ಜಿಲ್ಲೆಯ ಜನರ ಆರಾದ್ಯ ದೇವತೆ ಹಾಸನಾಂಬ ದರ್ಶನೋತ್ಸವ ಆರಂಭವಾಗಿದ್ದು ಗುರುವಾರ ಮಧ್ಯಾಹ್ನ ೧೨.೧೦ಕ್ಕೆ ಶಾಸ್ತೊçÃಪ್ತವಾಗಿ ದೇವಸ್ಥಾನದ ಗರ್ಭಗುಡಿ ಬಾಗಿಲನ್ನು ತೆರೆಯಲಾಯಿತು

ಆದಿಚುಂಚನಗಿರಿ ಮಹಾ ಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಸಂಸದ ಶ್ರೇಯಸ್ ಎಂ.ಪಟೇಲ್, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಶಾಸಕರಾದ ಸಿಮೆಂಟ್ ಮಂಜು, ಸ್ವರೂಪ್ ಪ್ರಕಾಶ್ ಮೊದಲಾದವರ ಸಮ್ಮುಖದಲ್ಲಿ ಹಾಸನಾಂಬ ದೇವಿಯ ಗರ್ಭಗುಡಿಗೆ ಪೂಜೆ ಸಲ್ಲಿಸಿ ಬಾಗಿಲು ತೆರೆಯಲಾಯಿತು.

ಅದಕ್ಕೂ ಮೊದಲು ರಾಜ ವಂಶಸ್ಥ ನಂಜರಾಜೇ ಅರಸ್ ಅವರು ಸಂಪ್ರದಾಯದಂತೆ ಬಾಳೆಕಂದು ಕತ್ತರಿಸಿದರು. ತಳವಾರ ಸಮುದಾಯದವರು ದೃಷ್ಟಿ ತೆಗೆದರು. ಕತ್ತರಿಸಿದ ಬಾಳೆ ಕಂದು ಹಾಗೂ ಅದಕ್ಕೆ ಮುಡಿಸಲಾಗಿದದ ಹೂವುಗಳನ್ನು ಪ್ರಸಾದವಾಗಿ ಸ್ವೀಕರಿಸಲು ಭಕ್ತರು ಮುಗಿ ಬಿದ್ದರು. ಗರ್ಭಗುಡಿ ಬಾಗಿಲು ತೆರೆಯುತ್ತಿದ್ದಂತೆ ಮಂಗಳ ವಾದ್ಯಗಳನ್ನು ಮೊಳಗಿಸಲಾಯಿತು. ಭಕ್ತರು ಉಘೇ ಹಾಸನಾಂಬೆ ಘೋಷಣೆ ಕೂಗಿದರು. ಹಾಸನಾಂಬ ದೇವಿಗೆ ಜೈ ಎಂಬ ಹಷೋದ್ಗಾರ ಮುಗಿಲು ಮುಟ್ಟುವಂತಿತ್ತು.

ಮೊದಲ ದಿನ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದರು ನೂರಾರು ಸಂಖ್ಯೆಯ ಭಕ್ತರು ದೇವಸ್ಥಾನದೆದುರು ಕಾದಿದ್ದರಿಂದ ಜನಸಂದಣಿ ನಿಯಂತ್ರಿಸಲಾಗದೇ ಮಧ್ಯಾಹ್ನದ ವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಭದ್ರತೆಗಾಗಿ ಸಾವಿರಕ್ಕೂ ಹೆಚ್ಚು ಪೊಲಿಸರನ್ನು ನಿಯೋಜಿಸಲಾಗಿತ್ತು. ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿ ದರ್ಶನೋತ್ಸವದ ಆರಂಭಿಕ ದಿನ ಶಾಂತಿಯುತವಾಗಿತ್ತು. ಸೆ.೨೫ ಶುಕ್ರವಾರ (ಇಂದು) ದಿಂದ ನ.೨ರ ವರೆಗೆ ಸಾರ್ವಜನಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಗರ್ಭಗುಡಿ ಬಾಗಿಲು ಮುಚ್ಚುವ ದಿನ ಬೆಳಗ್ಗೆ ೬ ಗಂಟೆ ನಂತರ ಸಾವಜನಿಕರಿಗೆ ಅವಕಾಶ ಇರುವುದಿಲ್ಲ.

ಹಾಸನಾಂಬ ದರ್ಶನೋತ್ಸವ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಘಿ ನಡೆದ ಸರಳ ಸಮಾರಂಭದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶಿರ್ವಚನ ನೀಡಿ, ವರ್ಷಕ್ಕೊಮ್ಮೆ ಮಾತ್ರ ದೇವಸ್ಥಾನದ ಬಾಗಿಲು ತೆರೆದು ದೇವಿ ದರ್ಶನಕ್ಕೆ ಅವಕಾಶ ಕೊಡುವ ವಿಶೇಷ ಸಂಪ್ರದಾಯ ಹೊಂದಿರುವುದು ಹಾಸನಾಂಬೆ ಮಾತ್ರ. ಇದೊಂದು ವಿಶೇಷ ಹಾಗೂ ಮಹತ್ವದ ಧರ್ಮಕ್ಷೇತ್ರವಾಗಿದೆ. ಆರದ ದೀಪ, ಬಾಡದ ಹೂ ದೇವರ ಮಹಿಮೆಯನ್ನು ಸಾರಿ ಹೇಳುತ್ತದೆ. ಇಂತಹ ವಿಶಿಷ್ಠ ಆಚರಣೆಯ ಉಸ್ತುವಾರಿ ನೋಡಿಕೊಳ್ಳುವ ಭಾಗ್ಯ ಸಚಿವ ರಾಜಣ್ಣ ಅವರಿಗೆ ಲಭಿಸಿರುವುದು ಪುಣ್ಯದ ಫಲ ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ತನ್ನದೇ ಮಹತ್ವವಿದೆ. ಭಾವನೆಗಳನ್ನು ಶುದ್ಧಿಗೊಳಿಸಿಕೊಂಡು ಉತ್ತಮ ಜೀವನ ನಡೆಸಲು ಮನಶಾಂತಿ ಕಾಣಲು ನಾವು ಬಯಸುವುದುಂಡು. ಜನರಿಗೆ ಶಾಂತಿ, ನೆಮ್ಮದಿ, ಸಮಾಧಾನ, ಶಿಸ್ತು, ಸಂಯಮ ಅಗತ್ಯವಿದೆ. ಮನಸ್ಸಿನ ದುಗುಡ ಕಲೆದುಕೊಳ್ಳಲು ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಆನರ ಭಾವನೆಗಳಿಗೆ ಪೂರಕವಾಗಿ ಹಾಸನಾಂಬ ಜಾತ್ರಾ ಮಹೋತ್ಸವ ಸಾಂಗವಾಗಿ ನಡೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಈ ಸಂದರ್ಭ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿAಗೇಗೌಡ, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಬಿ.ಆರ್.ಪೂರ್ಣಿಮಾ, ಉಪವಿಭಾಗಾಧಿಕಾರಿ ಮಾರುತಿ, ನಗರಸಭೆ ಅಧ್ಯಕ್ಷ ಎಂ.ಚAದ್ರೇಗೌಡ, ಆಯುಕ್ತ ನರಸಿಂಹಮೂರ್ತಿ ಇತರರು ಭಾಗವಹಿಸಿದ್ದರು.

ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಅದಮೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಲುಮಠದ ಮಹಾಂತಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕೆಸವತ್ತೂರು ಮಠದ ಸಿದ್ದಲಿಂಗಸ್ವಾಮೀಜಿ, ಶಿಡಿಗಡಲೆ ಮಠದ ಶಿವಲಿಂಗ ಸ್ವಾಮೀಜಿ, ಗಾವಡಗೆರೆ ಮಠದ ನಟರಾಜ ಸ್ವಾಮೀಜಿ, ಗುರುವಣ್ಣ ದೇವರ ಮಠದ ನಂಜAಡ ಸ್ವಾಮೀಜಿ, ರಾಜಪುರಮಠದ ರಾಜೇಶ್ವರಿ ಶಿವಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button