ಕ್ರೀಡೆ

ಹರ್ಷಲ್ ಪಟೇಲ್ ಗೆ ಹ್ಯಾಟ್ರಿಕ್ ವಿಕೆಟ್..! ಮುಂಬೈ ವಿರುದ್ಧ 55 ರನ್ ಗಳಿಂದ ಗೆದ್ದ RCB

ದುಬೈ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಐಪಿಎಲ್-2021ರ 39ನೇ ಪಂದ್ಯದಲ್ಲಿ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ ತಂಡ ಆರ್​ಸಿಬಿಯನ್ನು 20 ಓವರ್​ಗಳಲ್ಲಿ 165 ರನ್​ ಕಲೆ ಹಾಕುವಂತೆ ಮಾಡಿತ್ತು. ಆರ್​ಸಿಬಿ ಪಡೆ 6 ವಿಕೆಟ್​ ನಷ್ಟಕ್ಕೆ 165 ರನ್​ ಪೇರಿಸಿ,

ಮಾಜಿ ಚಾಂಪಿಯನ್​​​​ ತಂಡಕ್ಕೆ ಸೋಲಿನ ರುಚಿ ತೋರಿಸಿದೆ. ಈ ಮೂಲಕ ಮುಂಬೈನ ಪ್ಲೇ ಆಫ್​​​ ಹಾದಿಯನ್ನ ಕಠಿಣಗೊಳಿಸಿದೆ. ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 51 ರನ್ ಗಳಿಸಿದರೆ, ದೇವದತ್ ಪಡಿಕಲ್ 4 ಎಸೆತ ಎದುರಿಸಿ ರನ್ ಗಳಿಸದೇ ನಿರ್ಗಮಿಸಿದರು. ಆದರೆ, ನಂತರ ಕ್ರೀಸ್​ಗೆ ಆಗಮಿಸಿದ ಶ್ರೀಕರ್ ಭರತ್ 24 ಎಸೆತಗಳಲ್ಲಿ 32 ರನ್ ಗಳಿಸಿ ಚಹಾರ್​ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್​ಗೆ ಹಿಂತಿರುಗಿದರು. ನಂತರ ಗ್ಲೆನ್ ಮ್ಯಾಕ್ಸ್‌ವೆಲ್ 37 ಎಸೆತಗಳಲ್ಲಿ 56 ರನ್​ ಬಾರಿಸುವ ಮೂಲಕ ತಂಡಕ್ಕೆ ನೆರವಾದರು.

ಇನ್ನು ಆರ್​ಸಿಬಿ ನೀಡಿದ್ದ ರನ್ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡ, ಮಧ್ಯಮ ಕೆಳಕ್ರಮಾಂಕದ ಬ್ಯಾಟ್ಸ್​​ಮ್ಯಾನ್​ಗಳು ಎಡವಿದ ಕಾರಣ ಸೋಲು ಕಂಡಿತು. ರೋಹಿತ್ ಶರ್ಮಾ 28 ಎಸೆತಗಳಲ್ಲಿ 43 ರನ್ ಗಳಿಸಿದರೆ, ಕ್ವಿಂಟನ್ ಡಿಕಾಕ್ 23 ಎಸೆತಗಳಲ್ಲಿ 24 ರನ್ ಬಾರಿಸಿದರು. ಉಳಿದಂತೆ ಯಾರೂ ಸಹ ಎರಡು ಅಂಕಿ ರನ್ ಗಳಿಸುವಲ್ಲಿ ಸಫಲರಾಗಿಲ್ಲ. ಇನ್ನು ಮುಂಬೈ ತಂಡ 18.1 ಓವರ್​ಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 111 ರನ್​ ಗಳಿಸಿ ಸೋಲು ಒಪ್ಪಿಕೊಂಡಿತು. ಈ ಮೂಲಕ ಆರ್​ಸಿಬಿ 54 ರನ್​ಗಳ ಭರ್ಜರಿ ಗೆಲುವು ಸಾಧಿಸಿತು.

Related Articles

Leave a Reply

Your email address will not be published. Required fields are marked *

Back to top button