ಹಸ್ತಾಕ್ಷರದ ಪೋಸ್ಟರ್‌ಗಳು ಮತ್ತು ಸಂಗ್ರಹಣೆಗಳನ್ನೊಳಗೊಂಡಿರುವ ಮೆಗಾಸ್ಟಾರ್ ಅಮಿತಾಭ್ ಬಚ್ಚನ್(Amitabh Bachchan) ಅವರ ‘ಮಧುಶಾಲಾ’ NFT ಸಂಗ್ರಹಣೆಗಳು ಬಿಯಾಂಡ್‌ಲೈಫ್.ಕ್ಲಬ್ (Beyondlife.Club) ಆಯೋಜಿಸುತ್ತಿರುವ ಮೊದಲ ದಿನದ ಹರಾಜಿನಲ್ಲಿ 520,000 ಡಾಲರ್ (ಅಂದಾಜು 3.8 ಕೋಟಿ ರೂ) ಮೌಲ್ಯದ ಬಿಡ್‌ಗಳನ್ನು ಸ್ವೀಕರಿಸಿದೆ. ರಿತಿ ಎಂಟರ್‌ಟೈನ್‌ಮೆಂಟ್ ಮತ್ತು ಗಾರ್ಡಿಯನ್‌ಲಿಂಕ್.ಐಒ (Rhiti Entertainment and GuardianLink.io ) ನಡುವಿನ ಸಂಸ್ಥೆಯಾದ Beyondlife.Club ಬಚ್ಚನ್ ತಮ್ಮ NFT (non-fungible token) ಪರಸ್ಪರ ಬದಲಾಯಿಸಲಾಗದ ಸಂಗ್ರಹವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು.
ಎನ್‌ಎಫ್‌ಟಿ (NFT) ಎಂಬುದು ಡಿಜಿಟಲ್ ಲೆಡ್ಜರ್‌ನಲ್ಲಿ ಸಂಗ್ರಹವಾದ ಡೇಟಾದ ಘಟಕವಾಗಿದೆ. ಇದನ್ನು ಬ್ಲಾಕ್‌ಚೈನ್ ಎಂದೂ ಕರೆಯುತ್ತಾರೆ. ಡಿಜಿಟಲ್ ಆಸ್ತಿಯನ್ನು ಅನನ್ಯವಾಗಿಸುತ್ತದೆ. ಹೀಗಾಗಿ ಇದನ್ನು ಪರಸ್ಪರ ಬದಲಾಯಿಸಲಾಗುವುದಿಲ್ಲ ಎಂಬುದಾಗಿ ಪ್ರಮಾಣೀಕರಿಸುತ್ತದೆ. ಫೋಟೋಗಳು, ವಿಡಿಯೋಗಳು, ಆಡಿಯೋ ಹಾಗೂ ಡಿಜಿಟಲ್ ಫೈಲ್‌ಗಳ ಇತರ ಪ್ರಕಾರಗಳನ್ನು ಪ್ರತಿನಿಧಿಸಲು NFT ಗಳನ್ನು ಬಳಸಬಹುದು.
ಭಾರತದಲ್ಲೇ ಅತೀ ಹೆಚ್ಚು ಬಿಡ್ಡಿಂಗ್
ಬಚ್ಚನ್ ಅವರ ಮಧುಶಾಲಾ NFT ಸಂಗ್ರಹಣೆಯು ಹರಾಜಿನ ಒಂದನೇ ದಿನಂದು 420,000 ಡಾಲರ್ (31,309,068.00 ರೂ) ಮೌಲ್ಯ ಪಡೆಯುವ ಮೂಲಕ ಭಾರತದಲ್ಲೇ ಅತಿಹೆಚ್ಚಿನ ಬಿಡ್ಡಿಂಗ್ ಪಡೆದುಕೊಂಡಿದೆ ಎಂಬುದಾಗಿ ಹೇಳಿಕೆಯೊಂದು ತಿಳಿಸಿದೆ.