ದೇಶ
Trending

ಹಣದಾಸೆಗಾಗಿ ಪಾಕಿಸ್ತಾನ ಪರ ಬೇಹುಗಾರಿಕೆ

ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಗುಪ್ತರಚರ ಸಂಸ್ಥೆ ಐಎಸ್‌ಐಗೆ ರಹಸ್ಯ ಮಾಹಿತಿ ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ದೆಹಲಿಯ ನೌಕಾಪಡೆಯ ಪ್ರಧಾನ ಕಚೇರಿಯಿಂದ ಜೈಪುರದಲ್ಲಿ ರಾಜಸ್ಥಾನ ಪೊಲೀಸರು ನೌಕಾ ಪ್ರಧಾನ ಕಚೇರಿಯ ಉದ್ಯೋಗಿ ವಿಶಾಲ್ ಯಾದವ್ ಎಂಬಾತನನ್ನು ಬಂಧಿಸಲಾಗಿದೆ.ನೌಕಾ ಪ್ರಧಾನ ಕಚೇರಿಯಲ್ಲಿ ಗುಮಾಸ್ತನಾಗಿದ್ದ ವಿಶಾಲ್ ಯಾದವ್ ಹರಿಯಾಣದ ರೇವಾರಿ ಜಿಲ್ಲೆಯ ಪುನ್ಸಿಕಾ ಗ್ರಾಮದ ನಿವಾಸಿ. ಭಾರತದ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ಹಣದ ಆಸೆಗಾಗಿ ಪಾಕಿಸ್ತಾನದೊಂದಿಗೆ ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ 1923ರ ಅಧಿಕೃತ ರಹಸ್ಯ ಕಾಯ್ದೆಯಡಿ ಈತನನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿ ವಿಷ್ಣು ಗುಪ್ತಾ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶಾಲ್‌ ಯಾದವ್‌ ಆತ ಸೋಶಿಯಲ್‌ ಮೀಡಿಯಾದಲ್ಲಿ ಪ್ರಿಯಾ ಶರ್ಮಾ ಎಂಬ ಪಾಕಿಸ್ತಾನಿ ಮಹಿಳೆ ಜೊತೆ ಮಾತನಾಡುತ್ತಿದ್ದ. ಈತನಿಗೆ ಹಣದ ಅವಶ್ಯಕತೆ ಇರರುವ ಮಾಹಿತಿ ಹೊಂದಿದ್ದ ಆಕೆ ನೌಕಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಳು. ನಂತರ ಆತನಿಗೆ ಹಣವನ್ನು ಕ್ರಿಪ್ಟೋಕರೆನ್ಸಿ ವ್ಯಾಲೆಟ್ (USDT) ಮತ್ತು ಬ್ಯಾಂಕ್ ಖಾತೆಗಳಿಗೆ ಹಾಕಲಾಗುತ್ತಿತ್ತು ಎನ್ನಲಾಗಿದೆ.ವಿಶಾಲ್‌ ಯಾದವ್‌ ಡಿಜಿಟಲ್ ಕರೆನ್ಸಿಗಳ ಬಳಕೆಯ ಬಗ್ಗೆ ಗೂಢಚಾರ ಜಾಲದಲ್ಲಿ ಅನುಮಾನ ಮೂಡಿಸಿದೆ. ಆನಂತರ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹಿರಿಯ ಅಧಿಕಾರಿ ವಿಷ್ಣು ಗುಪ್ತಾ ಮಾಹಿತಿ ಹಂಚಿಕೊಂಡಿದ್ದಾರೆ.ಪಾಕಿಸ್ತಾನಕ್ಕೆ ಮಾಹಿತಿ ಹಂಚಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಹೊಂದಿದ್ದ ಗುಪ್ತಚರ ಇಲಾಖೆ(CID)ತಂಡವು ಬಹುದಿನಗಳಿಂದ ಆತನ ಮೇಲೆ ನಿಗಾ ಇಟ್ಟಿತ್ತು. ಜೊತೆಗೆ ಪಹಲ್ಗಾಮ್‌ ದಾಳಿ ನಂತರ ಪಾಕಿಸ್ತಾನಕ್ಕೆ ಸಂಬಂಧಿಸಿದ ಗೂಢಚಾರ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕುವ ಬಗ್ಗೆ ಹೆಚ್ಚಿನ ನಿಗಾವಹಿಸಿದೆ ಎನ್ನಲಾಗಿದೆ.

ವಿಶಾಲ್‌ ಯಾದವ್‌ ಆನ್‌ಲೈನ್ ಗೇಮಿಂಗ್‌ಗೆ ದಾಸನಾಗಿದ್ದ. ಹೀಗಾಗಿ ಆನ್‌ಲೈನ್‌ನಲ್ಲಿ ಸೋತಾಗ ಹಣ ಹೊಂದಿಸಲು ಹೆಣಗಾಡುತ್ತಿದ್ದ. ಹೀಗಾಗಿ ಹಣದ ದುರಾಸೆಗಾಗಿ ಭಾರತ ಸೇನೆಯ ರಹಸ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ. ಆತನ ಮೊಬೈಲ್‌ ಪರಿಶೀಲಿಸಿದಾಗ ರಹಸ್ಯ ಮಾಹಿತಿ ರವಾನಿಸಿ, ಹಣ ಪಡೆಯುತ್ತಿದ್ದ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತಿಕಾರವಾಗಿ ಭಾರತ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿತ್ತು. ಅಂದಿನ ರಹಸ್ಯ ಮಾಹಿತಿಯನ್ನು ವಿಶಾಲ್‌ ಯಾದವ್‌ ಸೋರಿಕೆ ಮಾಡಿದ್ದ. ಇದರಿಂದ ಆತ ಬಹಳ ದಿನಗಳಿಂದ ಐಎಸ್‌ಐನೊಂದಿಗೆ ಗೂಢಚಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ತಿಳಿದುಬಂದಿದೆ.ಸದ್ಯ ಆರೋಪಿ ವಿಶಾಲ್‌ ಯಾದವ್‌ ವಿಚಾರಣೆ ಜೈಪುರದ ಸುರಕ್ಷಿತ ಸ್ಥಳದಲ್ಲಿ ಮುಂದುವರೆದಿದೆ. ಜೊತೆಗೆ ಈತನಲ್ಲದೆ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚುವತ್ತ ತನಿಖಾ ಸಂಸ್ಥೆ ಕಾರ್ಯಾಚರಣೆ ಚುರುಕುಗೊಳಿಸಿದೆ.

ಇಲ್ಲಿಯವರೆಗೂ ತನಿಖಾ ಸಂಸ್ಥೆ (NIA) ಯೂಟ್ಯೂಬರ್‌ ಜ್ಯೂತಿ ಮಲ್ಹೋತ್ರಾ, ದೇವೇಂದ್ರ ಸಿಂಗ್‌ ಧಿಲ್ಲೋನ್‌, ಕ್ಯೂರಿಟಿ ಗಾರ್ಡ್‌ ನೌಮನ್ ಇಲಾಹಿ ಎಂಬುವವರನ್ನು ಬಧಿಸಿದ್ದಾರೆ.


Related Articles

Leave a Reply

Your email address will not be published. Required fields are marked *

Back to top button