ಹಗರಗುಂಡ ಗ್ರಾಮಸ್ಥರಿಂದ ಪಿ ಎಸ್ ಆಯ್ ಘೋರಿಗೆ ಸನ್ಮಾನ
ಮುಂಜಾನೆ ವಾರ್ತೆ ಸುದ್ದಿ ತಾಳಿಕೋಟಿ:ಪಟ್ಟಣದ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಆಗಮಿಸಿದ ಪಿ ಎಸ್ ಆಯ್ ಎಂ.ಡಿ.ಘೋರಿ ಇವರನ್ನು ಹಗರ ಗುಂಡ ಗ್ರಾಮಸ್ಥರು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ಮಾತನಾಡಿದ ಶ್ರೀ ಬೀರಲಿಂಗೇಶ್ವರ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷ ಯಲ್ಲಾಲಿಂಗ ಚಿಗರಿ ಅವರು ನಿಮ್ಮ ಸೇವಾ ಅವಧಿಯಲ್ಲಿ ತಾಳಿಕೋಟಿ ಪಟ್ಟಣ ಹಾಗೂ ಠಾಣೆಯ ವ್ಯಾಪ್ತಿಯ ಗ್ರಾಮಗಳಲ್ಲಿರುವ ಬಡ ಹಾಗೂ ಹಿಂದುಳಿದ ವರ್ಗದವರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಶಾಂತಿಯುತವಾದ ವಾತಾವರಣ ನಿರ್ಮಾಣವಾಗಲು ಪ್ರಯತ್ನಿಸಬೇಕು ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುವುದು ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ ಎಸ್ ಆಯ್ ಘೋರಿ ಅವರು ನಾನು ನನ್ನ ಕರ್ತವ್ಯವನ್ನು ಸಂಪೂರ್ಣ ನಿಷ್ಠೆಯೊಂದಿಗೆ ನಿರ್ವಹಿಸುತ್ತೇನೆ ಯಾವ ಕಾರಣಕ್ಕೂ ನಿರಪರಾಧಿಗಳಿಗೆ ತೊಂದರೆಯಾಗಬಾರದು ಇದು ನನ್ನ ಕೆಲಸದ ಪ್ರಥಮ ಆದ್ಯತೆಯಾಗಿದೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ನನಗೆ ಸಾರ್ವಜನಿಕರ ಸಹಕಾರವೂ ಬೇಕು ಎಂದರು. ಈ ಸಮಯದಲ್ಲಿ ಗಣ್ಯರಾದ ಸೋಮಣ್ಣ ಶಿವಣಗಿ. ಭೀಮಪ್ಪ ಮೇಟಿ. ನಿಂಗಪ್ಪ ಮಾದರ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.