ವಿದೇಶ

ಸೆ. 28ಕ್ಕೆ ಇಂದಿರಾ ನೂಯಿ ಜೀವನದ ಮೇಲೆ ಬೆಳಕು ಚೆಲ್ಲುವ ಪುಸ್ತಕ ಬಿಡುಗಡೆ; 2009ರ ಘಟನೆ ಮೆಲಕು!

ವಾಷಿಂಗ್ಟನ್: ಪೆಪ್ಸಿ ಕೋ ಮಾಜಿ ಅಧ್ಯಕ್ಷೆ ಮತ್ತು ಸಿಇಒ, ಅನಿವಾಸಿ ಭಾರತೀಯ ಇಂದಿರಾ ನೂಯಿ 2009ರಲ್ಲಿ ನಡೆದಿದ್ದ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ನಡುವಣ ಸಭೆಯೊಂದನ್ನು ಈಗಲೂ ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ. ಆ ಸಭೆಯಲ್ಲಿ ಉಭಯ ನಾಯಕರು, ಇಂದಿರಾ ನೂಯಿ ನಮ್ಮಲ್ಲಿ ಒಬ್ಬರು ಎಂದಿದ್ದರು.

ನಾನು ಎರಡೂ ರಾಷ್ಟ್ರಗಳಿಗೂ ಸೇರಿದವಳು ಎಂದು ಚೆನ್ನೈನಲ್ಲಿ ಹುಟ್ಟಿದ್ದ ಇಂದಿರಾ ನೂಯಿ ತನ್ನ ಹೂಸ ಪುಸ್ತಕ ‘ ಮೈ ಲೈಪ್ ಇನ್ ಫುಲ್; ವರ್ಕ್ , ಪ್ಯಾಮಿಲಿ ಅಂಡ್ ಅವರ್ ಪ್ಯುಚರ್ ‘ ನಲ್ಲಿ ನವೆಂಬರ್ 2009ರಲ್ಲಿ ಮನ್ ಮೋಹನ್ ಸಿಂಗ್ ಅವರಿಗೆ ಒಬಾಮಾ ಆಯೋಜಿಸಿದ್ದ ಆತಿಥ್ಯವನ್ನು ಪುನರ್ ನೆನಪಿಸಿಕೊಂಡಿದ್ದಾರೆ.

ಇಂದಿರಾ ನೂಯಿ ಅವರ ಪುಸ್ತಕ ಬರುವ ಮಂಗಳವಾರ ವಿಶ್ವದಾದ್ಯಂತ ಮಾರುಕಟ್ಟೆಗೆ ಲಗ್ಗೆ ಹಾಕಲಿದೆ. ಬಾಲ್ಯದಿಂದಲೂ ಪೆಪ್ಸಿಕೋ ಸಿಇಒ ಆಗುವವರೆಗೂ ತನ್ನ ಜೀವನವನ್ನು ರೂಪಿಸಿದ ಘಟನೆಗಳನ್ನು ನೂಯಿ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. 2018ರಲ್ಲಿ ಪೆಪ್ಸಿಕೋ ಸಿಇಒ ಹುದ್ದೆಯಿಂದ ಅವರು ನಿವೃತ್ತರಾಗಿದ್ದಾರೆ.

ನವೆಂಬರ್ 2009 ರಲ್ಲಿ ವಾಷಿಂಗ್ಟನ್ ಡಿಸಿ ಯಲ್ಲಿ ಎರಡು ಡಜನ್ ಅಮೆರಿಕ ಹಾಗೂ ಭಾರತೀಯ ವ್ಯಾಪಾರ ಕಾರ್ಯನಿರ್ವಾಹಕರೊಂದಿಗೆ ಕೆಲ ತಾಸುಗಳ ಸಭೆ ಬಳಿಕ ಅಮೆರಿಕ ಅಧ್ಯಕ್ಷರು ಹಾಗೂ ಭಾರತದ ಪ್ರಧಾನ ಮಂತ್ರಿಯ ನಡುವೆ ನಿಂತಿದ್ದಾಗಿ ಅವರು 300 ಪುಟಗಳಿಗಿಂತ ಹೆಚ್ಚಾಗಿರುವ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಬರಾಕ್ ಒಬಾಮ ಅಮೆರಿಕ ತಂಡವನ್ನು ಮನ್ ಮೋಹನ್ ಸಿಂಗ್ ಅವರಿಗೆ ಪರಿಚಯಿಸುತ್ತಾ ನನ್ನನ್ನು ಪೆಪ್ಸಿ ಕೋ ಸಿಇಒ ಎಂದಾಗ “ಓಹ್! ಅವರು ನಮ್ಮವರಲ್ಲಿ ಒಬ್ಬರು ಎಂದು ಮನ್ ಮೋಹನ್ ಸಿಂಗ್ ಉದ್ಗಾರಿಸಿದ್ದರು. ಒಬಾಮಾ ಕೂಡಾ ದೊಡ್ಡ ಮುಗುಳ್ನಗೆಯೊಂದಿಗೆ, ನೂಯಿ ನಮ್ಮಲ್ಲಿ ಒಬ್ಬರು ಎಂದಿದ್ದರು. ಆ ಕ್ಷಣವನ್ನು ಮೆರೆಯಲು ಸಾಧ್ಯವಿಲ್ಲ ಎಂದು ಇಂದಿರಾ ನೂಯಿ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button