ಕಪ್ಪು ಜೀರಿಗೆ (Black Cumin)ಎಂದು ಕರೆಯಲ್ಪಡುವ ಕಲೋಂಜಿ(Kalonji) ಹೂವಿನ ಗಿಡಗಳು ಬಟರ್‌ಕಪ್ ಕುಟುಂಬಕ್ಕೆ ಸೇರಿದೆ. ಇದು ಬೀಜಗಳನ್ನು ಹೊಂದಿರುವ ಹಣ್ಣುಗಳನ್ನು ಉತ್ಪಾದಿಸುತ್ತದೆ,ಇದನ್ನು ಅನೇಕ ಆಹಾರಗಳಲ್ಲಿ(Food) ಸುವಾಸನೆಯ ಮಸಾಲೆಯಾಗಿ ಬಳಸಲಾಗುತ್ತದೆ.ಅದರ ಅಡುಗೆಯ ಬಳಕೆಯ ಜೊತೆಗೆ, ಕಲೋಂಜಿ ಔಷಧೀಯ(Medicinal Plant) ಗುಣಗಳಿಗೆ ಹೆಸರುವಾಸಿಯಾಗಿದೆ. ಇದನ್ನೂ ಹಲವಾರು ವರ್ಷಗಳಿಂದ ಔಷಧೀಯ ಗುಣಗಳಿಗಾಗಿ ಬಳಕೆ ಮಾಡಲಾಗುತ್ತಿದೆ.
ಕಲೋಂಜಿ ಆರೋಗ್ಯ ಪ್ರಯೋಜನಗಳೇನು ಎಂಬುದು ಇಲ್ಲಿದೆ
ಆ್ಯಂಟಿ ಆಕ್ಸಿಡೆಂಟ್ಗಳಿಂದ ಸಮೃದ್ದವಾಗಿದೆ
ಆ್ಯಂಟಿ ಆಕ್ಸಿಡೆಂಟ್ಗಳು ಹಾನಿಕಾರಕ ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸುವ ಮತ್ತು ಜೀವಕೋಶಗಳಿಗೆ ಆಕ್ಸಿಡೇಟಿವ್ ಹಾನಿಯನ್ನು ತಡೆಯುವ ಅತ್ಯುತ್ತಮ ಪದಾರ್ಥವಾಗಿದೆ. ಆ್ಯಂಟಿ ಆಕ್ಸಿಡೆಂಟ್ಗಳು ಆರೋಗ್ಯ ಮತ್ತು ದೀರ್ಘ ಕಾಲದಿಂದ ಕಾಡುವ ರೋಗಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಸಂಶೋಧನೆಗಳು ಸಾಬೀತು ಮಾಡಿವೆ.
ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿಮಗೆ ಸ್ವಲ್ಪ ಕೊಲೆಸ್ಟ್ರಾಲ್ ಅಗತ್ಯವಿದ್ದರೂ, ಹೆಚ್ಚಿನ ಹೃದ್ರೋಗ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಲೋಂಜಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ವಿಶೇಷವಾಗಿ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಕಲೋಂಜಿಯನ್ನು ಬಳಕೆ ಮಾಡುವುದು ಕೆಟ್ಟ ಅಥವಾ ಎಲ್‌ಡಿಎಲ್ ಕೊಲೆಸ್ಟ್ರಾಲ್ ಮತ್ತು ರಕ್ತ ಟ್ರೈಗ್ಲಿಸರೈಡ್‌ಗಳಲ್ಲಿ ಗಮನಾರ್ಹ ಇಳಿಕೆಗೆ ಸಹಾಯ ಮಾಡುತ್ತದೆ.