ಇತ್ತೀಚಿನ ಸುದ್ದಿಕ್ರೀಡೆ
ಸಿಎಸ್ಕೆ ಗೆಲುವಿಗಾಗಿ ಜೀವಾ ಧೋನಿ ಪ್ರಾರ್ಥನೆ: ನೆಟ್ಟಿಗರಿಂದ ಪ್ರೀತಿಯ ಸುರಿಮಳೆ..!
ಸೋಮವಾರ ಸಿಎಸ್ಕೆ ಮತ್ತು ಡೆಲ್ಲಿ ಕ್ಯಾಪಿಟಲ್ ನಡುವಿನ ರೋಚಕ ಪಂದ್ಯದಲ್ಲಿ ಡೆಲ್ಲಿ ಅಂತಿಮವಾಗಿ ಗೆಲುವು ಸಾಧಿಸಿತ್ತು. ಆದರೆ, ಸೋಲುವ ಹಂತದಲ್ಲಿದ್ದ ಸಿಎಸ್ಕೆ ಮತ್ತು ತನ್ನ ತಂದೆಯ ತಂಡದ ಗೆಲುವಿಗಾಗಿ ಮಹೇಂದ್ರ ಸಿಂಗ್ ಧೋನಿ ಮಗಳು ಜೀವಾ ಧೋನಿ ಕ್ರೀಡಾಂಗಣದಲ್ಲಿ ಪ್ರಾರ್ಥಿಸಿದ್ದ ಪೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ತನ್ನ ತಾಯಿ ಸಾಕ್ಷಿ ಧೋನಿಯೊಂದಿಗೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದಾಗ ಜೀವಾ, ಡೆಲ್ಲಿ ಕ್ಯಾಪಿಟಲ್ ಗೆಲುವಿಗೆ 3 ಓವರ್‌ಗಳಲ್ಲಿ 28 ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ ಜೀವಾ ಧೋನಿ ತಂದೆಯ ಗೆಲುವಿಗಾಗಿ ದೇವರ ಮೊರೆ ಹೋಗಿದ್ದರು. ಸತತ ದೇವರ ಪ್ರಾರ್ಥನೆಯಲ್ಲಿ ತೊಡಗಿದ್ದರು. ಈ ಪಂದ್ಯದಲ್ಲಿ ಡೆಲ್ಲಿ ಗೆಲುವು ಸಾಧಿಸಿದ್ದರೂ ಸಹ ಜೀವಾ ಧೋನಿ ಅವರ ಮುಗ್ಧತೆ ಕ್ರಿಕೆಟ್ ಅಭಿಮಾನಿಗಳನ್ನು ಗೆದ್ದಿದೆ. ಅವರ ಮುದ್ದಾದ ಪೋಟೋವನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರು ಇದೀಗ ಪ್ರೀತಿಯ ಮಳೆಗೆರೆದಿದ್ದಾರೆ.