ಸಿಎಂ ಬೊಮ್ಮಾಯಿ ಮನೆ ಭದ್ರತೆಯಲ್ಲಿದ್ದ ಇಬ್ಬರು ಪೊಲೀಸ್ರು ಅರೆಸ್ಟ್!
ಬೆಂಗಳೂರು: ಮೋಸ್ಟ್ ವಾಂಟೆಡ್ ಪೆಡ್ಲರ್ಗಳಿಂದ ಗಾಂಜಾ ತರಿಸಿಕೊಂಡು, ಮಾರಾಟ ಮಾಡ್ತಿದ್ದ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಂದಹಾಗೆ ಇವರಿಬ್ಬರೂ ಕಾನ್ಸ್ಟೇಬಲ್ಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಭದ್ರತಾ ಕಾರ್ಯದಲ್ಲಿದ್ದರು. ಶಿವಕುಮಾರ್ ಹಾಗೂ ಸಂತೋಷ್ ಗಾಂಜಾ ತರಿಸಿ ಮಾರಾಟ ಮಾಡ್ತಿದ್ದ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳು. ಇಬ್ಬರೂ ಕಾನ್ಸ್ಟೇಬಲ್ಗಳು ಕೋರಮಂಗಲ ಪೊಲೀಸ್ ಠಾಣೆಯ ಸಿಬ್ಬಂದಿ.
ಶಿವಕುಮಾರ್ ಮತ್ತು ಸಂತೋಷ್ ಕಾನ್ಸ್ಟೇಬಲ್ ಜೋಡಿಯು ಮೋಸ್ಟ್ ವಾಂಟೆಡ್ ಪೆಡ್ಲರ್ ಬಳಿ ಗಾಂಜಾ ಖರೀದಿಸಿ, ಮಾರಾಟಕ್ಕೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಪೊಲೀಸ್ ಸಿಬ್ಬಂದಿಗಳು ಮುಖ್ಯಮಂತ್ರಿಗಳ ಮನೆ ಇರುವ ಆರ್. ಟಿ. ನಗರದ 80 ಅಡಿ ರಸ್ತೆ ಬಳಿ ಡೀಲ್ ಮಾಡುತ್ತಿದ್ದರು. ಸಿಎಂ ಮನೆಯ ಬಳಿ ಗಸ್ತಿನಲ್ಲಿದ್ದ ಹೊಯ್ಸಳ ಸಿಬ್ಬಂದಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ. ಸದ್ಯ ಆರ್.ಟಿ. ನಗರ ಪೊಲೀಸರು ಒಟ್ಟು ನಾಲ್ವರನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.