ಮೈಸೂರು: ಉತ್ತಮ ಮಳೆಯಿಂದಾಗಿ ರಾಜ್ಯದ ಬಹುತೇಕ ಅಣೆಕಟ್ಟೆಗಳು(Dams) ಭರ್ತಿಯಾಗಿವೆ. ಹೀಗಾಗಿ ಬಸವರಾಜ ಬೊಮ್ಮಾಯಿ ಸಿಎಂ (CM Basavaraj Bommai) ಆದ ಬಳಿಕ ಇದೇ ಮೊದಲ ಬಾರಿಗೆ ನಾಡಿನ ಜೀವನಾಡಿ ಕಾವೇರಿ ಹಾಗೂ ಕಪಿಲೆಗೆ ಬಾಗೀನ(Bagina) ಸಮರ್ಪಣೆ ಮಾಡಿದರು. (ವರದಿ: ದಿವ್ಯೇಶ್ ಜಿವಿ)
ಬಾಗೀನ ಸಮರ್ಪಣೆ ಹಿನ್ನೆಲೆ ಕಬಿನಿ ಜಲಾಶಯ, KRS ಜಲಾಶಯ ವಿವಿಧ ಹೂಗಳಿಂದ ಅಲಂಕಾರಗೊಂಡು ಕಂಗೊಳಿಸುತ್ತಿದ್ವು. ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿಂದು ಸಂಭ್ರಮ ಮನೆ ಮಾಡಿತ್ತು. ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಬಿನಿ ಜಲಾಶಯ ಪುಷ್ಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.
ಸಿಎಂ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲಬಾರಿಗೆ ಕಬಿನಿ ಜಲಾಶಯಕ್ಕೆ ಬಾಗೀನ ಸಮರ್ಪಣೆ ಮಾಡಿದ್ರು. ರಾಜ್ಯದಲ್ಲೇ ಮೊದಲು ತುಂಬುವ ಅಣೆಕಟ್ಟು ಎಂಬ ಹೆಗ್ಗಳಿಕೆ ಇರುವ ಕಬಿನಿ ನದಿಗೆ ಇಂದು ಬಾಗಿನ ಅರ್ಪಿಸಲಾಯಿತು.