ವಿದೇಶ

ಸಿಂಗಪುರ: ಬೂಸ್ಟರ್ ಡೋಸ್ ಪಡೆದವರಿಗೂ ಓಮಿಕ್ರಾನ್ ಸೋಂಕು.!

ಸಿಂಗಪುರ, ಡಿಸೆಂಬರ್ 10: ಸಿಂಗಾಪುರದಲ್ಲಿ ದಕ್ಷಿಣ ಆಫ್ರಿಕಾದಂತೆಯೇ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಿಂಗಪುರದಲ್ಲಿ ಕೋವಿಡ್‌ನ ಎರಡು ಲಸಿಕೆಗಳ ಜತೆಗೆ ಬೂಸ್ಟರ್ ಲಸಿಕೆಯನ್ನೂ ಪಡೆದಿದ್ದ ಇಬ್ಬರಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಕೋವಿಡ್ ವಿರುದ್ಧ ಮೂರನೇ ಡೋಸ್ ಲಸಿಕೆ ನೀಡಬಹುದಾದ ರಕ್ಷಣೆಯ ಬಗ್ಗೆ ಅನುಮಾನಗಳು ಮೂಡಿವೆ.

ಓಮಿಕ್ರಾನ್ ರೂಪಾಂತರವನ್ನು ತಟಸ್ಥಗೊಳಿಸಲು ಲಸಿಕೆಯ ಮೂರನೇ ಡೋಸ್ ಅಗತ್ಯವೆಂಬುದು ಅಧ್ಯಯನದಿಂದ ತಿಳಿದುಬಂದಿದೆ. ಫೈಜರ್ ಹಾಗೂ ಬಯೋ ಎನ್‌ಟೆಕ್ ಈ ಮೊದಲು ಹೇಳಿದ್ದವು. ಎರಡು ಲಸಿಕೆಗಳು ನೀಡುವ ರಕ್ಷಣೆಗೆ ಹೋಲಿಸಿದರೆ, ಬೂಸ್ಟರ್ ಲಸಿಕೆಯಿಂದ ಸಿಗುವ ರಕ್ಷಣೆ ಅಧಿಕ ಎಂದು ಸಂಸ್ಥೆಗಳು ಹೇಳಿಕೊಂಡಿದ್ದವು.

ವಿಮಾನ ನಿಲ್ದಾಣವೊಂದರಲ್ಲಿ ಪ್ರಯಾಣಿಕ-ಸೇವಾ ವಿಭಾಗದಲ್ಲಿ ಕೆಲಸ ಮಾಡುವ 24 ವರ್ಷದ ಮಹಿಳೆಗೆ ಓಮಿಕ್ರಾನ್ ಇರುವುದು ಪತ್ತೆಯಾಗಿದೆ. ಇದು ಸಿಂಗಪುರದ ಒಳನಾಡಿನಲ್ಲಿ ಪತ್ತೆಯಾದ ಮೊದಲ ಓಮಿಕ್ರಾನ್ ಎಂದು ಪರಿಗಣಿಸಲಾಗಿದೆ.

ಜರ್ಮನಿಯಿಂದ ಸಿಂಗಾಪುರಕ್ಕೆ ಬಂದ ವ್ಯಕ್ತಿಯಿಬ್ಬರಲ್ಲಿಯೂ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಇವರಿಬ್ಬರು ಲಸಿಕೆ ಪೂರ್ಣ ಡೋಸ್‌ನ ಜತೆಗೆ ಬೂಸ್ಟರ್ ಡೋಸ್ ಕೂಡಾ ಪಡೆದಿದ್ದರು ಎಂದು ಬ್ಲೂಂಬರ್ಗ್ ಸುದ್ದಿ ಸಂಸ್ಥೆ ಹೇಳಿದೆ.

ಸದ್ಯ ಬೂಸ್ಟರ್ ಡೋಸ್ ಪಡೆದರೂ ಓಮಿಕ್ರಾನ್ ಸೋಂಕಿಗೆ ಒಳಗಾಗಿರುವ ಇಬ್ಬರನ್ನೂ ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ಸಂಪರ್ಕಕ್ಕೆ ಬಂದವರನ್ನೆಲ್ಲ ಗುರುತಿಸಿ ಅವರನ್ನು 10 ದಿನಗಳ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ತನ್ನ ಪ್ರಸರಣ ಶಕ್ತಿಯಿಂದ ಪ್ರಪಂಚದ ಅನೇಕ ಭಾಗಗಳಿಗೆ ಹರಡಿರುವ ಓಮಿಕ್ರಾನ್ ನಮ್ಮ ದೇಶದಲ್ಲೂ ಹಬ್ಬುತ್ತಿದ್ದು, ಹೆಚ್ಚಿನ ಪ್ರಕರಣಗಳು ವರದಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಜೋಹನ್ಸ್‌ಬರ್ಗ್‌ನಿಂದ ಪ್ರಯಾಣಿಸಿದ್ದ ಇಬ್ಬರಲ್ಲಿ ಓಮಿಕ್ರಾನ್‌ ಪತ್ತೆಯಾಗಿರುವುದು ಪ್ರಾಥಮಿಕ ಪರೀಕ್ಷೆಯಿಂದ ದೃಢಪಟ್ಟಿದೆ. ಅವರನ್ನು ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ ಎಂದು ಸಿಂಗಪುರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸೋಂಕಿತರು ಪ್ರಯಾಣಿಸಿದ್ದ ವಿಮಾನದಲ್ಲೇ 19 ಮಂದಿ ಪ್ರಯಾಣ ಬೆಳೆಸಿದ್ದರು. ಅವರನ್ನೂ ಪರೀಕ್ಷೆ ಒಳಪಡಿಸಲಾಗಿದ್ದು, ಕೋವಿಡ್‌ ನೆಗೆಟಿವ್‌ ಬಂದಿದೆ. ಆದಾಗ್ಯೂ ಎಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಓಮಿಕ್ರಾನ್‌ ಸೋಂಕಿತರು ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಕೆಮ್ಮು ಮತ್ತು ಗಂಟಲು ಕೆರೆತದ ಸೌಮ್ಯ ಲಕ್ಷಣಗಳು ಇದ್ದ ಕಾರಣ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸೋಂಕಿತರಲ್ಲಿ ಒಬ್ಬರು 44 ವಯಸ್ಸಿನ (ಪುರುಷ) ಸಿಂಗಪುರ ಮೂಲದವರೇ ಆಗಿದ್ದಾರೆ. ಅವರು ಮೊಜಾಂಬಿಕ್‌ ಮೂಲಕ ಜೋಹಾನ್ಸ್‌ಬರ್ಗ್‌ಗೆ ತೆರಳಿದ್ದರು. ನ.29ರಂದು ಅವರು ಮೆಜಾಂಬಿಕ್‌ನಿಂದ ತೆರಳುವಾಗ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್‌ ನೆಗೆಟಿವ್‌ ಬಂದಿತ್ತು. ಮತ್ತೊಬ್ಬರು 41 ವಯಸ್ಸಿನ ಮಹಿಳೆ ಸಿಂಗಾಪುರದವರೇ ಆಗಿದ್ದು, ದಕ್ಷಿಣ ಆಫ್ರಿಕಾದಿಂದ ನೇರವಾಗಿ ಆಗಮಿಸಿದ್ದರು ಎಂದು ಸಚಿವಾಲಯವು ಮಾಹಿತಿ ನೀಡಿದೆ.

ಸಿಂಗಪುರ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್‌ ಲಸಿಕೆ ನೀಡಿರುವ ದೇಶವಾಗಿದೆ. ದೇಶದಲ್ಲಿ ಒಟ್ಟು ಜನಸಂಖ್ಯೆ ಶೇ. 96 ಮಂದಿ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ. ಆರಂಭಿಕ ಎರಡು ಡೋಸ್‌ಗಳು ಗಮನಾರ್ಹವಾಗಿ ಕಡಿಮೆ ಪರಿಣಾಮಕಾರಿಯಾಗಿ ಕಂಡುಬಂದರೂ ಸಹ ತನ್ನ ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ಹೊಸ ಓಮಿಕ್ರಾನ್ ರೂಪಾಂತರದಿಂದ ರಕ್ಷಿಸಬಹುದು ಎಂದು ಫೈಜರ್ ಹೇಳಿದೆ.

ಫೈಜರ್ ಮತ್ತು ಅದರ ಪಾಲುದಾರ ಬಯೋಎನ್‌ಟೆಕ್ ಲ್ಯಾಬ್ ಪರೀಕ್ಷೆಗಳು ಬೂಸ್ಟರ್ ಡೋಸ್ ಓಮಿಕ್ರಾನ್ ವೈರಸ್ ಅನ್ನು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಸೃಷ್ಟಿಸುವ ಮಟ್ಟವನ್ನು 25 ಪಟ್ಟು ಹೆಚ್ಚಿಸಿದೆ ಎಂದು ತೋರಿಸಿದೆ. ಫೈಜರ್ ಪ್ರಾಥಮಿಕ ಪ್ರಯೋಗಾಲಯದ ಡೇಟಾವನ್ನು ಪತ್ರಿಕಾ ಪ್ರಕಟಣೆ ನೀಡಿದೆ. ಆದರೆ ಇದು ಇನ್ನೂ ವೈಜ್ಞಾನಿಕ ಪರಿಶೀಲನೆಗೆ ಒಳಪಟ್ಟಿಲ್ಲ. ಕಂಪನಿಗಳು ಈಗಾಗಲೇ ಅಗತ್ಯವಿದ್ದಲ್ಲಿ ಓಮಿಕ್ರಾನ್-ನಿರ್ದಿಷ್ಟ ಲಸಿಕೆಯನ್ನು ಕಂಡುಹಿಡಿಯುವ ಕೆಲಸದಲ್ಲಿ ತೊಡಗಿದೆ.

Related Articles

Leave a Reply

Your email address will not be published. Required fields are marked *

Back to top button