ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಿಸಿದ ತಹಸಿಲ್ದಾರ್ ಜಯಪ್ರಕಾಶ್ ರವರು
ಯಳಂದೂರು.ತಾಲ್ಲೂಕು
ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, 29 ನಿರ್ದೇಶಕರು ಇರುವ ಸರ್ಕಾರಿ ನೌಕರರ ಸಂಘದಲ್ಲಿ 19 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಉಳಿದ ಹತ್ತು ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರದ 4 ಸ್ಥಾನಗಳಿಗೆ 8 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಇದರಲ್ಲಿ ಮಹೇಶ. ಎಂ. 153, ಮಂಜುನಾಥ್. ವೈ.ಎಂ 137, ರಾಜು ಎಂ. 120, ಬಸವಣ್ಣ 107 ಮತಗಳನ್ನು ಪಡೆದು ಜಯಗಳಿಸಿದ್ದಾರೆ,
ಪ್ರೌಢಶಾಲಾ ಶಿಕ್ಷಕರ ವಿಭಾಗದ ಒಂದು ಸ್ಥಾನಕ್ಕೆ ಎರಡು ಮಂದಿ ಸ್ಪರ್ಧಿಸಿದ್ದು ಎದುರಾಳಿ ಮಹದೇವಸ್ವಾಮಿ ವಿರುದ್ಧ ರವಿಕುಮಾರ್ 35 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಕಂದಾಯ ಇಲಾಖೆಯ ಗ್ರಾಮ ಆಡಳಿತ ವಿಭಾಗದಲ್ಲಿ ನಂದಕುಮಾರ್ 27, ಮತಗಳನ್ನು ಪಡೆದು ಜಯಗಳಿಸಿದರು ಕಂದಾಯ ಇಲಾಖೆಯ ಆಡಳಿತ ಕಚೇರಿ ವಿಭಾಗದಲ್ಲಿ ಬಿಸಲ್ಲಯ್ಯ 32, ಯದುಗಿರಿ 27, ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
ಆರ್.ಡಿ.ಪಿ.ಆರ್. ವಿಭಾಗದಲ್ಲಿ ನಿರಂಜನ್ ರವರು 15 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
ಅರಣ್ಯ ಇಲಾಖೆ ವಿಭಾಗದಲ್ಲಿ ಗೋವರ್ಧನ್ ರವರು 17 ಮತ ಗಳನ್ನು ಪಡೆದು ಜಯ ಗಳಿಸಿದ್ದಾರೆ. ಇವರಿಗೆ ತಾಲ್ಲೂಕಿನ ಸರ್ಕಾರಿ ನೌಕರರ ಬಂಧುಗಳು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘ ಮತ್ತು ವಿವಿಧ ಇಲಾಖೆಯ ನೌಕರರು ಅಭಿನಂದಿಸಿ ಶುಭ ಕೋರಿದರು.