ರಾಜ್ಯ
Trending

ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಂಘಟಿತರಾಗಿ

ಬೇತಮಂಗಲ : ಛಲವಾದಿ ಜನಾಂಗದವರು ಹೊಲೆಯರೆಲ್ಲರೂ ಸಂಘಟಿತರಾಗಿ ಕೇಂದ್ರ – ರಾಜ್ಯ ಸರ್ಕಾರಗಳ ಸವಲತ್ತುಗಳನ್ನು ಪಡೆಯಲು ಒಗ್ಗಟ್ಟಾಗಬೇಕೆಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ನಾರಾಯಣಪ್ಪ ಕರೆ ನೀಡಿದರು.

ಬೇತಮಂಗಲ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಛಲವಾದಿ ಮಹಾಸಭಾ ಕೆಜಿಎಫ್ ಶಾಖಾ ಪದಾಧಿಕಾರಿಗಳ ಆಯ್ಕೆ ಮಾಡಿ ಮಾತನಾಡಿದರು.

ದಿವಂಗತ ಐ.ಎ.ಎಸ್ ಅಧಿಕಾರಿ ಕೆ .ಶಿವರಾಂ ಅವರ ಶ್ರಮದಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಛಲವಾದಿ ಜನಾಂಗಕ್ಕಾಗಿ ಜಮೀನು ಮಂಜೂರು ಮಾಡಿದ್ದಾರೆ. ಇವು ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಇದೆ. ಮುಂದಿನ ದಿನಗಳಲ್ಲಿ ಜನಾಂಗದ ಅರ್ಹರಿಗೆ ಉತ್ತಮ ವಿದ್ಯಾಭ್ಯಾಸ, ಉದ್ಯೋಗ, ಸರ್ಕಾರದ ಸವಲತ್ತುಗಳನ್ನು ದೊರಕಿಸಲು ಮೊದಲು ನಾವು ಒಗ್ಗಟ್ಟಾಗ ಬೇಕೆಂದರು.

ರಾಜ್ಯದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಾವು ದೊಡ್ಡ ಅಲದಮರಗಳಂತೆ ಇದ್ದರು , ಹಲವು ಬೇರುಗಳಂತಿರುವ ಕೆಲವು ಉಪ ಜಾತಿಗಳು ಹೆಚ್ಚಿನ ಮೀಸಲಾತಿ ಪಡೆದುಕೊಳ್ಳುತ್ತಿವೆ. ಮತಗಳಿಗಾಗಿ ಛಿದ್ರಗೊಂಡ ನಮ್ಮ ಹೊಲೆಯ ಜನಾಂಗವು ಒಗ್ಗಟ್ಟಾದರೆ ಇಡೀ ರಾಜ್ಯವೇ ಭಯಗೊಳ್ಳುತ್ತದೆ. ಮತಗಳಿಗಾಗಿ ರಾಜಕೀಯ ವ್ಯಕ್ತಿಗಳು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.

ನೂತನ ಪದಾಧಿಕಾರಿಗಳು: ಕೆಜಿಎಫ್ ತಾಲೂಕು ಘಟಕದ ಅಧ್ಯಕ್ಷರಾಗಿ ಸಾಮ್ರಾಟ್ ಕೃಷ್ಣಮೂರ್ತಿ, ಗೌರವಾಧ್ಯಕ್ಷ ಕೆಂಚಪ್ಪ, ಉಪಾಧ್ಯಕ್ಷ ಮೋಹನ್, ಪ್ರ.ಕಾರ್ಯದರ್ಶಿ ಚಲಪತಿ, ಕಾರ್ಯದರ್ಶಿ ಮಂಜುನಾಥ್, ಜ.ಕಾರ್ಯದರ್ಶಿ ರಾಮಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿ ಚಂದ್ರಯ್ಯ, ಸಲಹಾ ಸಮಿತಿ ಸದಸ್ಯರಾದ ಆನಂದ್, ಕಣ್ಣಪ್ಪ, ರವಿ, ಕಾರ್ಯಕಾರಿ ಸಮಿತಿ ವೆಂಕಟೇಶ್, ಚಲಪತಿ, ಜೀಡಮಾಕನಹಳ್ಳಿ ಆಂಜಿ, ಜಕ್ಕರಸನಕುಪ್ಪ ಕೃಷ್ಣಮೂರ್ತಿ, ಶ್ರೀನಿವಾಸ್, ವೆಂಕಟೇಶ್, ಶಿವರಾಜ್, ಆನಂದ್, ರವಿ, ರವಿಚಂದ್ರನ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಛಲವಾದಿ ಜಿಲ್ಲಾ ಗೌರವಾಧ್ಯಕ್ಷ ಎಸ್.ಮುನಿಯಪ್ಪ, ಭೂ ನ್ಯಾಯ ಮಂಡಲಿ ಸದಸ್ಯ ಮಂಜುಳಾ, ಜಿಲ್ಲಾ ಸಮಿತಿ ನಿರ್ದೇಶಕ ವೆಂಕಟೇಶ್, ಮುನಿವೆಂಕಟಪ್ಪ, ಅಶೋಕ್, ದೊಡ್ಡಕಾರಿ ರಾಧಾಕೃಷ್ಣ, ಕೆ.ವಿ ಸುಬ್ರಮಣಿ ,ನರಸಿಂಹ, ಕೃಷ್ಣಪ್ಪ, ವೆಂಕಟೇಶ್, ರವೀಂದ್ರ ಹಾಗೂ ಅನೇಕ ಛಲವಾದಿ ಮಹಾಸಭಾ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button