ರಾಜ್ಯದಲ್ಲಿ ಹೆಚ್ಚು ಸಕ್ಕರೆ ಕಾರ್ಖಾನೆ(Sugar Factory) ಇರೋ ಜಿಲ್ಲೆ ಬೆಳಗಾವಿ(Belgaum) ಜಿಲ್ಲೆಯ ಇಡೀ ರಾಜಕಾರಣ ನಿರ್ಧಾರವಾಗೊದು ಸಕ್ಕರೆ ಲಾಭಿ ಇಂದಲೇ. ಇದು ಹಲವು ಸಂದರ್ಭಗಳಲ್ಲಿ ಸಾಬೀತು ಸಹ ಆಗಿದೆ. ಇಲ್ಲಿನ ಬಹುತೇಕ ರಾಜಕೀಯ ನಾಯಕರು ಸಕ್ಕರೆ ಕಾರ್ಖಾನೆ ಹೊಂದಿದ್ದಾರೆ.
ಜಿಲ್ಲೆಯ 25 ಸಕ್ಕರೆ ಕಾರ್ಖಾನೆಗಳು ಪ್ರತಿ ವರ್ಷ ಕಬ್ಬು ನುರಿಸುತ್ತವೇ,ಸದ್ಯ ಪ್ರಸಕ್ತ ಹಂಗಾಮು ಆರಂಭವಾಗಿದೆ. ಒಂದು ಕಾರ್ಖಾನೆ ಇದ್ದವರು ಮತ್ತೊಂದು ಸಕ್ಕರೆ ಕಾರ್ಖಾನೆಯನ್ನು ಕೆಲವೇ ವರ್ಷಗಳಲ್ಲಿ ನಿರ್ಮಾಣ ಮಾಡಿದ್ದಾರೆ. ಆದರೇ ಕಾರ್ಖಾನೆಯ ಕಬ್ಬು ಕಳುಹಿಸುವ ರೈತನಿಗೆ ಮಾತ್ರ ಸಂಕಷ್ಟ ತಪ್ಪಿಲ್ಲ. ಜಿಲ್ಲೆಯಲ್ಲಿ ಕಾರ್ಖಾನೆ ಹಾಗೂ ರೈತರ ನಡುವೆ ನಿರಂತರ ಸಂಘರ್ಷ ನಡೆಯುತ್ತಲೇ ಇರುತ್ತದೆ.
ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ನಿರಂತರ ನಡೆಯುತ್ತದೆ. ಪ್ರತಿ ವರ್ಷ ಕಾರ್ಖಾನೆಗಳ ವಿರುದ್ಧ ಹೋರಾಟ ಅನಿವಾರ್ಯ ಆಗಿದೆ. ವರ್ಷವಿಡೀ ಕಷ್ಟಪಟ್ಟು ಕಬ್ಬು ಬೆಳೆದು ಕಾರ್ಖಾನೆಗೆ ಸಾಗಾಟ.ನಂತರ ಹಣಕ್ಕಾಗಿ ಹೋರಾಟ ನಡೆಸುವುದು ಜಿಲ್ಲೆಯಲ್ಲಿ ಅನಿವಾರ್ಯವಾಗಿದೆ. ಸರ್ಕಾರ ಕಬ್ಬು ಕಾರ್ಖಾನೆಗೆ ಕಳುಹಿಸಿದ 14 ದಿನಗಳಲ್ಲಿ ಹಣ ಪಾವತಿ ಮಾಡಬೇಕು ಎಂದು ನಿಯಮ ಮಾಡಿದೆ. ಎಸ್ ಎಪಿ ಕಾನೂನು ಯಾವೊಬ್ಬ ಕಾರ್ಖಾನೆಗಳ ಮಾಲೀಕರು ಪಾಲಿಸಲ್ಲ.