ಇತ್ತೀಚಿನ ಸುದ್ದಿರಾಜ್ಯ

ಸಮಯಕ್ಕೆ ಸರಿಯಾಗಿ ಬಾರದ ಕೆಎಸ್ ಆರ್ ಟಿ ಸಿ ಬಸ್ಸುಗಳು, ವಿದ್ಯಾರ್ಥಿಗಳಿಂದ ಪ್ರತಿಭಟನೆ ,ಸ್ಥಳಕ್ಕೆ ಶಾಸಕರ ಆಗಮನ ಸಮಸ್ಯೆ ಬಗೆಹರಿಸುವ ಭರವಸೆ .

ಹನೂರು :ಹಲವು ಹಳ್ಳಿಗಳಿಂದ ದಿನನಿತ್ಯ ಪಟ್ಟಣದ ಶಾಲಾ ಕಾಲೇಜುಗಳಿಗೆ ತೆರಳಲು ಕೆ ಎಸ್ ಆರ್ ಟಿ ಸಿ ಬಸ್ಸುಗಳ ಸಂಚಾರವು ಸಮತಕ್ಕೆ ಸರಿಯಾಗಿ ಆಗಮಿಸುವುದಿಲ್ಲವೆಂದು ಕೌದಳ್ಳಿ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದರು .

ಹನೂರು ತಾಲ್ಲೂಕಿನ ಕೌದಳ್ಳಿ ಗ್ರಾಮದ ವೃತ್ತದಲ್ಲಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು ನಮ್ಮ ಸಮಸ್ಯೆಯನ್ನು ಇಥ್ಯಾರ್ತ ಮಾಡದ ವರತು ನಾವುಗಳು
ಶಾಲಾ ಕಾಲೇಜಿಗೆ ತೆರಳುವುದಿಲ್ಲ ಎಂದು ಪ್ರತಿಭಟಿಸಿದರು.
ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಶಾಸಕರು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿ ರಸ್ತೆಯಲ್ಲಿ ಕುಳಿತು ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು…

ಶಾಸಕರ ಭೇಟಿ : ಶಾಸಕ ಎಂಆರ್ ಮಂಜುನಾಥ್ ಕೌದಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ಒಂದಕ್ಕೆ ತೆರಳಿದ ಈ ವೇಳೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿರುವ ಸ್ಥಳಕ್ಕೆ ತೆರಳಿ ಸಾರಿಗೆ ಅಧಿಕಾರಿಗಳಿಗೆ ತಿಳಿಸಿ ಶಾಲಾ-ಕಾಲೇಜಿನ ವೇಳೆಯಲ್ಲಿ ಹೆಚ್ಚಿನ ಬಸ್ ಗಳು ಬಿಡುವಂತೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಈ ಭಾಗದಲ್ಲಿ ಸಂಚರಿಸುವ ವಾಹನಗಳು ಸಹ ನಿಲ್ಲಿಸಿ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು ಅಲ್ಲದೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ವಿದ್ಯಾರ್ಥಿಗಳಿಗೆ ಸಂಜೆ ಮತ್ತು ಬೆಳಿಗ್ಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಇದೇ ಸಮಯದಲ್ಲಿ
ಪೋಷಕರು ಸಹ ಒತ್ತಾಯ ಮಾಡಿದರು : ದಿನನಿತ್ಯದ ಸಮಸ್ಯೆಯಾಗಿತ್ತು ವಿದ್ಯಾರ್ಥಿಗಳು ಕಾಲೇಜಿಗೆ ಹನೂರು ಕೊಳ್ಳೇಗಾಲ ಚಾಮರಾಜನಗರ ಸೇರಿದಂತೆ ವಿವಿಧಡೆ ಹೋಗಿ ಬರಲು ಸಮಸ್ಯೆ ಉಂಟಾಗಿತ್ತು ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ ಮಕ್ಕಳು ನಿಗದಿತ ಸಮಯಕ್ಕೆ ಕಾಲೇಜಿಗೆ ಹೋಗಿ ಬರಲು ಅನುಕೂಲ ಕಲ್ಪಿಸುವಂತೆ ಶಾಸಕರಿಗೆ ವಿವಿಧ ಗ್ರಾಮದ ಪೋಷಕರು ಮುಖಂಡರು ವಿದ್ಯಾರ್ಥಿಗಳು ಒತ್ತಾಯಿಸಿದರು ,ಇದಕ್ಕೆ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ತಕ್ಷಣವೆ ಅಧಿಕಾರಿಗಳಿಗೆ ತಿಳಿಸಿದರು .

Related Articles

Leave a Reply

Your email address will not be published. Required fields are marked *

Back to top button