
ಸಕಲೇಶಪುರ: ಸಕಲೇಶಪುರ ಜನ ಬ್ರಾಹ್ಮಣರಿಗಿಂತ ಸಾಣೆ ಇದ್ದಾರೆ ಎಂದು ವಿದಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.ಸಕಲೇಶಪುರ ಪಟ್ಟಣದ ಹೊರವಲಯದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ನಮಸ್ಕರಿಸಿ ಮಾತನಾಡಿದ ಅವರು ಹಿಂದೆ ವಿಧಾನ ಪರಿಷತ್ ಕೌನ್ಸಿಲ್ ಒಳಗೆ ಸಾಹಿತಿಗಳು. ಚಿತ್ರನಟರು. ಕಲಾವಿದರು. ದೊಡ್ಡ ದೊಡ್ಡ ಕವಿಗಳು ಬರುತ್ತಿದ್ದರು. ಈಗ ಅವರ್ಯಾರು ಇಲ್ಲ. ಎಲ್ಲಾ ರಾಜಕೀಯ ಹಿಂಬಾಲಕರೇ ಬರುತ್ತಿದ್ದಾರೆ. ಆದ್ದರಿಂದ ಇಲ್ಲೂ ಮೌಲ್ಯ ಕಡಿಮೆಯಾಗಿದೆ.ದೇಶದ ಅತ್ಯಂತ ಪ್ರಸಿದ್ಧಿ ಯಾದ 113 ವರ್ಷ ಇತಿಹಾಸ ಇರುವ ಕರ್ನಾಟಕ ವಿಧಾನ ಪರಿಷತ್ ಬೆಸ್ಟ್ ವಿದಾನ ಪರಿಷತ್ ಎಂದು ಹೆಸರುವಾಸಿಯಾಗಿದೆ.ಈ ಪರಿಷತ್ ನಲ್ಲಿ ಈಗ ಬಜೆಟ್ ಮೇಲೆ. ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುವುದಕ್ಕೆ ಟೈಮ್ ಕೊಡುತ್ತೇವೆ. ಮುಖ್ಯ ಮಂತ್ರಿಗಳು ಉತ್ತರ ಹೇಳುವಾಗ ಯಾವುದೋ ಒಂದು ಹನಿಟ್ರಾಪ್ ವಿಷಯ ಹಿಡಿದುಕೊಂಡು ಬಜೆಟ್ ಗಿಂತಲೂ. ರಾಜ್ಯಪಾಲರ ಬಾಷಣಕ್ಕಿಂತಲೂ ಹನಿಟ್ರಾಪ್ ವಿಷಯ ಮುಖ್ಯವೇ ? ಎಂದು ಪ್ರಶ್ನಿಸಿದರು.
ಸಬಾ ನಾಯಕರು. ವಿರೋಧ ಪಕ್ಷದ ನಾಯಕರು. ಚೀಫ್ ಮಿನಿಸ್ಟರ್ . ಜೆಡಿಎಸ್ ನಾಯಕರು. ಎಲ್ಲರನ್ನೂ ಕರೆದು ಹೇಳಿದೆ. ಮುಂದೆ ಬರುವ ದಿನಮಾನಗಳಲ್ಲಿ ನಮ್ಮ ವಿದಾನ ಪರಿಷತ್ ಅನ್ನು ದೇಶಕ್ಕೆ ಮಾದರಿಯಾಗಿ ತೋರಿಸಿಕೊಡಲು ತೀರ್ಮಾನಕ್ಕೆ ಬಂದಿದ್ದೇವೆ. ಎಲ್ಲಾ ನಾಯಕರು ತಿದ್ದಿಕೊಳ್ಳುತ್ತೀವಿ. ಸರಿ ಮಾಡುತ್ತೀವಿ ಎಂದು ತೀರ್ಮಾನಕ್ಕೆ ಬಂದಿದ್ದಾರೆ. ಸರಿ ಮಾಡಿ ಎಲ್ಲಾ ಹೊಸ ಸದಸ್ಯರಿಗೆ ತರಬೇತಿ ನೀಡಿ ಸಬೆ ಉತ್ತಮ ವಾಗಿ ನಡೆಸಿಕೊಂಡು ಹೋಗಲು ಮನವಿ ಮಾಡಿದರು. ನಂತರ ಸಬಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ತಿರ್ಮಾನಿಸಿದ್ದೇನೆ ಎಂದರು.
ದೇಶ ಮತ್ತು ರಾಜ್ಯಗಳ ಬಗ್ಗೆ ಮಾತನಾಡಲು ಮೌಲ್ಯ ಕುಸಿಯುತ್ತಿದೆ ಕೊಶ್ಚನ್ ಮಾಡ್ತಾರೆ. ಮನೆಗೆ ಹೋಕ್ತಾರೆ. ಸಿಹಿ ಮಾಡ್ತಾರೆ. ಮನೆಗೆ ಹೋಗುತ್ತಾರೆ. ಆಸಕ್ತಿ ನೇ ಇರಲ್ಲ. ಬಂದಮೇಲೆ ಸಭೆಯಲ್ಲಿ ಸದನದಲ್ಲಿ ನಡೆಯುವುದನ್ನು ನೋಡಲ್ಲ. ಒಟ್ಟಾರೆ ಹೇಳುವುದಾದರೆ ಮಳೆ ಆಗಿಲ್ಲ. ಬರಗಾಲ ಬರುತ್ತೆ. ಅತಿಮಳೆಯಾಗುತ್ತದೆ. ಆರೋಗ್ಯ ಸಮಸ್ಯೆ ಅನೇಕ ಸಮಸ್ಯೆಗಳಿವೆ. ಇಂಪಾರ್ಡೆಂಟಾದ ವಿಷಯ ಚರ್ಚೆಗೆ ಬರಲ್ಲ. ಅವರು ಇವರನ್ನು ಬೈತಾರೆ. ಇವರು ಅವರನ್ನು ಬೈತಾರೆ . ನೀವಿದ್ದಾಗ ಹಂಗೆ ಮಾಡಿದ್ರಿ. ನೀವಿದ್ದಾಗ ಹಿಂಗೆ ಮಾಡಿದ್ರಿ. ಅಂತ ಬರೀ ಆರೋಪ ಮಾಡುತ್ತಾ ಪರಿಷತ್ ವೇಳೆ ಹಾಳು ಮಾಡುತ್ತಿರುವುದರಿಂದ ನನಗೆ ತುಂಬಾ ಬೆಸರವಾಗಿದೆ ಎಂದರು.ನಾನು ಇಡೀ ದೇಶದಲ್ಲಿ ಸೀನಿಯರ್ ಮೋಸ್ಟ್ ಶಾಸಕ. ಅಸೆಂಬ್ಲಿ. ವಿದಾನ ಪರಿಷತ್ ಯಾರೂ ಇರಲಿಲ್ಲ. ಸೋತವರು. ಗೆದ್ದವರೇ ಇಲ್ಲಿ ಬಂದಿದ್ದಾರೆ. . ನಾನು ಪರಿಷತ್ ಗೆ 8 ಬಾರಿ ಆರಿಸಿ ಬಂದು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಎಂದರು.
ಬದಲಾವಣೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಬದಲಾವಣೆ ಜನ ತಿಳಿದುಕೊಳ್ಳಬೇಕು. ಓಟು ಹಾಕುವ ಪದ್ದತಿ ಎಲ್ಲಿವರಗೆ ಇರುತ್ತದೆಯೋ ಅಲ್ಲಿಯ ವರೆಗೆ ಜನ ತಿಳಿದು ಕೊಳ್ಳಬೇಕು. ಎಂದ ಅವರು ನೈಜ ಘಟನೆ ಒಂದನ್ನು ವಿವರಿಸಿದರು. ನಮ್ಮ ಶಿಕ್ಷಕರ ಕ್ಷೇತ್ರದ ಚುನಾವಣೆ ದುಡ್ಡಿನ ಮೇಲೆ ಚುನಾವಣೆ ನಡೆಯಿತು. ಅಲ್ಲಿ ಒಬ್ಬ ನನ್ನ ಕಡೆ ಬಂದಿದ್ದ ಆಗ ಅವರ ಆಫೀಸರ್ ಗೆ ಹೇಳಿ ಬೈದು ಹೇಳಿ ಯಾಕೋ ಮಾಸ್ತರ್. ಹತ್ತು ಸಾವಿರ ತಗೊಂಡಿಲ್ವಾ. ನಡಿ ಆಕಡೆ ಎಂದು ಬೈದರು. ಶಿಕ್ಷಕರಾದವರೇ ದುಡ್ಡಿಗೆ ನಿಂತರೆ ಏನು ಪ್ರಜಾಪ್ರಭುತ್ವ ದ ಬಗ್ಗೆ ಮಾತನಾಡುತ್ತೀರಿ ? ಎಂದು ಪ್ರಶ್ನೆ ಮಾಡಿದರು. ಈಗಿನ ಸಿಸ್ಟಮ್ ಬದಲಾವಣೆ ಮಾಡೋಕಾಗಲ್ಲ. ಎಲೆಕ್ಟ್ರಾನಿಕ್ ಇತ್ತು ಅದಕ್ಕೂ ಮುಂಚೆ ಚೀಟಿ ಇತ್ತು. ಎಲ್ಲಾ ಹೋದವು. ಸುಧಾರಣೆ ಆಗುತ್ತೆ ಅಂತ ನನಗೆ ಅನಿಸಿಲ್ಲ. ಕಾಲನೇ ಉತ್ತರಕೊಡಬೇಕು ಎಂದರು ನಂತರ ದೇಶಕ್ಕೆ ಕೊಡುಗೆ ನೀಡಿದ ಕೆಂಪೇಗೌಡ. ಬಸವಣ್ಣ. ಅಂಬೇಡ್ಕರ್. ಇಂತಹವರ ಆದರ್ಶ ಬಾಯಿಯಲ್ಲಿ ಮಾತನಾಡಿದ್ದೀವಿ. ಸದನ ದೊಡ್ಡ ದೇವಸ್ಥಾನ ಇದ್ದಂತೆ. ಇಲ್ಲಿ ಹನಿಟ್ರಾಪ್ ವಿಷಯ ಆಡಿದವರೂ ಒಳ್ಳೆಯವರಲ್ಲ. ಆಡಿಸಿಕೊಂಡವರೂ ಒಳ್ಳೆಯವರಲ್ಲ . ಎಂದರು.
ಜನ ಸುದಾರಣೆಯಾಗಿದ್ದಾರಾ? ಪತ್ರಕರ್ತರ ಪ್ರಶ್ನೆಗೆ
ಸುದಾರಣೆಯಾಗಿದ್ದಾರೆ. ಅತಿ ಸುಧಾರಣೆ ಸರಿ ಎನಿಸಲಿಲ್ಲ ಎಂದರು ನಂತರ ಸುಧಾರಣೆ ಆಗಬಾರದು ಎಂದಲ್ಲ ಡೆಮಾಕ್ರಸಿ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವ ತಿಳಿದು ಕೊಳ್ಳಲಿಲ್ಲ ಎಂದರೆ ದುಡ್ಡು ಕೊಟ್ಟು ಆರಿಸಿ ಬರುತ್ತಾರೆ. ಬೆಂಗಳೂರಿನಲ್ಲಿ ದುಡ್ಡು ಮಾಡ್ತಾರೆ. ಮತ್ತದೇ ದುಡ್ಡು ಒಗೀತಾರೆ ಆರಿಸಿ ಬರುತ್ತಾರೆ. ಇವರು ಜನರಿಗೆ ಏನು ಮಾಡುತ್ತಾರೆ ? ಎಂದರು
ಸದನದಲ್ಲಿ ಕಾಲಿಟ್ಟವರೆಲ್ಲಾ ಶಾಸಕರೆ ವಯಸ್ಸಿಗೂ ಇದಕ್ಕೂ ಸಂಬಂಧ ಇಲ್ಲ ದುಡ್ಡು ಜಾತಿ? ಯಾರದೂ ಹೆದರಿಕೆ ಇಲ್ಲ. ವ್ಯವಸ್ಥೆ ಸರಿಯಾಗಬೇಕು ಮುಂದೆ ಬರುವ ಶಶನ್ ನಲ್ಲಿ ಏನು ಮಾಡಬೇಕೋ ಅದನ್ನು ಮಾಡ್ತೀವಿ.ಎಂದರು
ಹಾಸನ ಜಿಲ್ಲೆಯಲ್ಲಿ ಸಕಲೇಶಪುರ ಶ್ರೇಷ್ಠ ನಾಡು.ಕೆಳಗಳಲೆ ಚಂದ್ರಣ್ಣ ಇದ್ದಾಗ ಹೆಚ್ಚು ಸಕಲೇಶಪುರಕ್ಕೆ ಬರುತ್ತಿದ್ದೆ. ಸಕಲೇಶಪುರ ಅಂದ್ರೆ ಪ್ರೀತಿ. ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡ ವಿಗ್ರಹ ಇಷ್ಟೊಂದು ಚನ್ನಾಗಿ ಮಾಡಿದ್ದೀರಿ. ಒಳ್ಳೆಯದಾಗಲಿ.ಎಂದು ಸಕಲೇಶಪುರ ಜನ ಬ್ರಾಹ್ಮಣರಿಗಿಂತ ಸಾಣೆ ಉಳ್ಳವರು ನಯ ವಿನಯ ಮಾತು ಎಲ್ಲದರಲ್ಲೂ ಎಂದರು.
ಬಸವರಾಜ್ ಹೊರಟ್ಟಿ ಸ್ವಾಗತಿಸಿದ ಹೆಚ್ ಎಂ ವಿಶ್ವನಾಥ್
ಸಕಲೇಶಪುರ: ದೇಶದಲ್ಲೇ ಐವತ್ತು ವರ್ಷಗಳ ಕಾಲ ವಿಧಾನ ಪರಿಷತ್ ಗೆ ಗೆದ್ದು ಬಂದಿರುವುದು ರೆಕಾರ್ಡ್ ಆಗಿದೆ. ಗರ್ವ ಇಲ್ಲದ ವ್ಯಕ್ತಿತ್ವ.100% ಸಮಾಜಸೇವೆ ಮಾಡಿದ ವ್ಯಕ್ತಿತ್ವ 100% ರೈತ. ಉಳೋದು ಗೊತ್ತಿದೆ. 150 ವಿವಿದ ತಳಿ ಹಸು ಸಾಕಿದ್ದಾರೆ. ಭೂಮಿ ಮತ್ತು ಬದುಕಿನ ಜೊತೆ ಸಂಬಂಧ ಹೊಂದಿರುವ ವಿಧಾನ ಪರಿಷತ್ ಸಬಾಧ್ಯಕ್ಷ ಬಸವರಾಜ್ ಹೊರಟ್ಟಿ ನಾನು ಸಕಲೇಶಪುರ ಶಾಸಕನಾಗಿದ್ದ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಹೆಚ್ಚು ಸಹಾಯ ಮಾಡಿದ್ದಾರೆ. ಸಾರ್ವಜನಿಕವಾಗಿ ಕರೆದು ಗೌರವಿಸಿಲ್ಲ ಎಂಬ ಕೊರಗಿದೆ. ಹೊರಟ್ಟಿಯವರು ರಾಜ್ಯಕ್ಕೆ ಒಂದು ಐತಿಹಾಸಿಕ ಕಾರ್ಯಕ್ರಮ ಮಾಡಿದ್ರು ಶಿಕ್ಷಣ ಮಂತ್ರ ಆಗಿದ್ದ ಸಮಯದಲ್ಲಿ1039 ಹೈಸ್ಕೂಲ್ ಗಳನ್ನು ರಾಜ್ಯಕ್ಕೆ ಕೊಟ್ಟರು. ಅದರಲ್ಲಿ ಸಕಲೇಶಪುರಕ್ಕೆ 16 ಪೌಡಶಾಲೆ ಮತ್ತು ಹಾಸ್ಟೆಲ್ ಕೊಟ್ಟಿದ್ದಾರೆ ಇಂದಿಗೂ ಸಹ ನಡೆಯುತ್ತಿವೆ. ಇಷ್ಟು ದೊಡ್ಡ ಕೊಡುಗೆ ಸ್ವತಂತ್ರ ಭಾರತದಲ್ಲಿ ಸಕಲೇಶಪುರಕ್ಕೆ ಯಾವತ್ತೂ ಬಂದಿರಲಿಲ್ಲ. ಬರಿ ಕಾಲೇಜು. ಹಾಸ್ಟೆಲ್ ಅಲ್ಲದೆ ಬಿಲ್ಡಿಂಗ್ ಕೂಡ ಕೊಟ್ಟಿದ್ದಾರೆ . ಸಕಲೇಶಪುರ ಮೂಲೆಗಳಾದ ಹೆಗ್ಗದ್ದೆ.ವನಗೂರು. ಹೊಂಗಡಹಳ್ಳ. ದೇವಾಲದಕೆರೆ. ಆನೆ ಸಮಸ್ಯೆ ಹೆಚ್ಚಾಗಿರುವ ಹೊಸಕೋಟೆ ಮುಂತಾದ ಹಲವುಕಡೆ ಪ್ರೌಢಶಾಲೆ ಹಾಗೂ ಹಾಸ್ಟೆಲ್ ಕಟ್ಟಡ ಮಾಡಿಕೊಟ್ಟಿದ್ದಾರೆ ಎಂದರು
ರಾಜಕೀಯ ವ್ಯವಸ್ಥೆ ಕೆಟ್ಟು ಹೋಗಿದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿತ್ವ ಇರುವ ಯೋಗ್ಯರೊಬ್ಬರು ಕೆಲಸ ಮಾಡುತ್ತಿದ್ದಾರೆ ಎಂದರೆ ಬಸವರಾಜ್ ಹೊರಟ್ಟಿ ಯವರು ಅವರು ಸ್ಥಾನ ತೆಜಿಸಲು ಹೊರಟಿರುವುದು ಬೇಸರ ತಂದಿದೆ ಎಂದರು.ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅದ್ಯಕ್ಷರುಗಳಾದ ಆದರ್ಶ. ಕಾಡಪ್ಪ. ಮುಖಂಡರು ಗಳಾದ ಸ.ಬ ಬಾಸ್ಕರ್. ಲೋಕೇಶ್ ಮಡ್ಡನಕೆರೆ. ಜಯರಾಜ್ ಕಾಮನಹಳ್ಳಿ. ಚಂದ್ರಣ್ಣ ಅವರೆಕಾಡು. ಬಸವರಾಜ್ ಹೊರಟ್ಟಿ ಕುಟುಂಬದವರು ಮತ್ತು ಮುಖಂಡರು ಉಪಸ್ಥಿತರಿದ್ದರು.