ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರಿಗೆ ಅಪಮಾನ ಭೀಮಪುತ್ರಿ ಬ್ರಿಗೇಡ್ ನಿಂದ ಪ್ರತಿಭಟನೆ
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ: ಶೇಷಾದ್ರಿಪುರಂ ಮೊದಲನೇಯ ಮುಖ್ಯರಸ್ತೆಯಲ್ಲಿ 500ವಿಸ್ತಿರ್ಣದಲ್ಲಿ ಭೀಮಪುತ್ರಿ ಬ್ರಿಗೇಡ್ ಸಂಘಟನೆಯ ಶಾಖೆ ಕಛೇರಿ ಮತ್ತು ಮಹಿಳೆಯರ ಸ್ವಾವಲಂಭಿ ಜೀವನಕ್ಕೆ ಸ್ವಯಂ ಉದ್ಯೋಗಕ್ಕೆ ಉದ್ಯೋಗ ಕೇಂದ್ರ ಸ್ಥಾಪಿಸಲು ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರ ಬಾವಚಿತ್ರವಿರುವ ನಾಮಫಲಕ ಆಳವಡಿಸಲಾಗಿತ್ತು.
ಸ್ಥಳೀಯ ಪುಡಿರೌಡಿಗಳು ಪಡೆ ಸ್ಥಳಕ್ಕೆ ಆಗಮಿಸಿ, ಭೀಮಪುತ್ರಿ ಬ್ರಿಗೇಡ್ ಸಂಘಟನೆಯವರಿಗೆ ಬೆದರಿಕೆ ಹಾಕಿ, ನಾಮಫಲಕ ಕಿತ್ತು ಹಾಕುವ ಪ್ರಯತ್ನ ಮಾಡಿ,ನಂತರ ಕಪ್ಪು ಬಣ್ಣದ ಬಟ್ಟೆಯಿಂದ ಮುಚ್ಚಿಹಾಕಿದ್ದಾರೆ.
ರೌಡಿ ಅಟ್ಟಹಾಸ, ಭೂಕಬಳಿಕೆದಾರರ ವಿರುದ್ದ ಭೀಮಪುತ್ರಿ ಬ್ರಿಗೇಡ್ ಸಂಸ್ಥಾಪಕಿ ಅಧ್ಯಕ್ಷೆ ರೇವತಿರಾಜ್ ರವರು ಮತ್ತು ವಿವಿಧ ದಲಿತ ಸಂಘಟನೆಗಳು ಪ್ರತಿಭಟನೆ ಮಾಡಿದರು
ಇದೇ ಸಂದರ್ಭದಲ್ಲಿ ರೇವತಿರಾಜ್ ರವರು ಮಾತನಾಡಿ ನಾರಾಯಣಸ್ವಾಮಿರವರ ಕುಟುಂಬದವರು ನಮ್ಮ ಸಂಘಟನೆಯ ಸೇವೆ ಗುರುತಿಸಿ, 500ಅಡಿ ಜಾಗದಲ್ಲಿ ಮಹಿಳೆಯರ ಸ್ವಾವಲಂಭಿ ಜೀವನಕ್ಕೆ ಅನುಕೂಲವಾಗಲಿ ಎಂದು ದಾನವಾಗಿ ನೀಡಿದ್ದಾರೆ.
ಈ ಜಾಗ ಖಾತೆಯು ನಾರಾಯಣಸ್ವಾಮಿರವರ ತಾತನ ಹೆಸರಿನಲ್ಲಿ ಇದೆ.
ಕೆಲವು ಭೂಕಬಳಿದಾರರು, ಪುಡಿರೌಡಿಗಳು ಈ ಜಾಗವನ್ನು ವಶಪಡಿಸಿಕೊಳ್ಳಲು ನಮಗೆ ಬೆದರಿಕೆ ಹಾಕುತ್ತಿದ್ದಾರೆ.
ಇಂದು ದಲಿತ ಸಮುದಾಯದ ಶಾಂತಿಯುತ ಜೀವನ ಮಾಡಲು ಬೀಡುತ್ತಿಲ್ಲ.
ಡಾ||ಬಿ.ಆರ್.ಅಂಬೇಡ್ಕರ್ ರವರು ಸಾಮಾಜಿಕ ನ್ಯಾಯ ಮತ್ತು ಮಹಿಳೆಯರು ಸರಿಸಮಾನವಾಗಿ ಬದುಕಲು ಸಂವಿಧಾನದಲ್ಲಿ ಅವಕಾಶ ನೀಡಿದರು.
ಇಂದು ಸಹ ಮೇಲ್ವರ್ಗ ಜನರ ದೌರ್ಜನ್ಯದಿಂದ ದಲಿತ ಸಮುದಾಯ ನರಳುತ್ತಿದೆ.
ನಮಗೆ ನ್ಯಾಯ ಸಿಗುವರಗೆ ನಮ್ಮ ಹೋರಾಟ ಬೀಡುವುದಿಲ್ಲ, ದಲಿತ ಮಹಿಳೆಯರಿಗೆ ರಕ್ಷಣೆ ನೀಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.