ಸಂವಿಧಾನ ಜಾಗೃತಿ ಅಭಿಯಾನ l ರಥ ಯಾತ್ರೆಗೆ ಅದ್ದೂರಿ
ಸ್ವಾಗತ ಸಂವಿಧಾನದ ಆಶಯ ಈಡೇರಿಸೋಣ- ಸಿಂದಗೇರಿ
ಮುಂಜಾನೆ ವಾರ್ತೆ ಸುದ್ದಿ ತಾಳಿಕೋಟಿ: ಸಂವಿಧಾನದ ಪ್ರಸ್ತಾವನೆಯ ಆಶಯಗಳನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಬೆಕಿನಾಳ ಸರ್ಕಾರಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ವೈ. ಎಸ್. ಸಿಂದಗೇರಿ ಹೇಳಿದರು. ಸೋಮವಾರ ತಾಲೂಕಿನ ಬೆಕಿನಾಳ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ವಿಜಯಪುರ ತಾಲೂಕು ಪಂಚಾಯತ್ ತಾಳಿಕೋಟಿ ಹಾಗೂ ಗ್ರಾಮ ಪಂಚಾಯತ್ ಬೆಕಿನಾಳ ಇವರ ಸಹಯೋಗದಲ್ಲಿ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಹಮ್ಮಿಕೊಂಡ ವೇದಿಕೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು. ಸಂವಿಧಾನ ದೇಶದ ಬಹುದೊಡ್ಡ ಶಕ್ತಿಯಾಗಿದೆ. ಜನರನ್ನು ಸಶಕ್ತ ಗೊಳಿಸುವಲ್ಲಿ ಸಂವಿಧಾನದ ಪಾತ್ರ ದೊಡ್ಡದಿದೆ ವಿಶ್ವಕ್ಕೆ ಮಾದರಿಯಾದ ಹಾಗೂ ಲಿಖಿತ ಸಂವಿಧಾನ ನೀಡಿದ ಡಾ. ಬಿ.ಆರ್.ಅಂಬೇಡ್ಕರ ಅವರು ದೇಶಕ್ಕೆ ಬಹುದೊಡ್ಡ ಸಂಪತ್ತನ್ನು ನೀಡಿ ಹೋಗಿದ್ದಾರೆ ಅವರನ್ನು ಸ್ಮರಿಸುವ ಕಾರ್ಯ ನಿತ್ಯ ನಿರಂತರ ನಡೆಯಬೇಕಾಗಿದೆ ಎಂದರು. ತಾಪಂ ಮಾಜಿ ಸದಸ್ಯ ಲಕ್ಕಪ್ಪ ಬಡಿಗೇರ ಮಾತನಾಡಿ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಗತಿಸುತ್ತಿರುವ ಈ ಸಂದರ್ಭದಲ್ಲಿ ಸಂವಿಧಾನದ ಮೂಲ ಆಶಯಗಳನ್ನು ತಿಳಿದುಕೊಳ್ಳಲು ಹಾಗೂ ಅದರಂತೆ ನಡೆದುಕೊಳ್ಳಲು ನಾವು ಎಷ್ಟು ಪ್ರಯತ್ನಿಸಿತ್ತೇವೆ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳುವ ಸಮಯ ಇದಾಗಿದೆ ವಿಶ್ವ ಶ್ರೇಷ್ಠವಾದ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲ ಭಾರತೀಯರಿಗೂ ಸಮಾನ ಅವಕಾಶವನ್ನು ನೀಡಿದ್ದಾರೆ ಇಂತಹ ಶ್ರೇಷ್ಠ ಗ್ರಂಥವನ್ನು ತಿಳಿಯುವ ಅಗತ್ಯ ಇದೆ ಎಂದರು. ಗ್ರಾಮ ಪಂಚಾಯತ ಅಧ್ಯಕ್ಷೆ ಭಾಗ್ಯಶ್ರೀ ಸುಧಾಕರ ಹಾಗೂ ದಲಿತ ಚಿಂತಕ ಶ್ರೀಶೈಲ ಜಲವಾದಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಉಮೇಶ ಲಮಾಣಿ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ವೇದಿಕೆ ಕಾರ್ಯಕ್ರಮ ಪೂರ್ವ ಕಲ್ಕೇರಿಯಿಂದ ಆಗಮಿಸಿದ ಸಂವಿಧಾನ ಜಾಥಾ ರಥಕ್ಕೆ ಅದ್ದೂರಿ ಸ್ವಾಗತವನ್ನು ನೀಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳ ಮಹಿಳೆಯರ ಕುಂಭ.ಶಾಲಾ ವಿದ್ಯಾರ್ಥಿಗಳ ಸಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮೆರವಣಿಗೆ ನಡೆಸಲಾಯಿತು. ಈ ಸಮಯದಲ್ಲಿ ವೇದಮೂರ್ತಿ ಮಲ್ಲಿಕಾರ್ಜುನ ಮಠ .ಬೆಕಿನಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ. ಎಂ.ಸಾಗರ. ಗ್ರಾಪಂ ಉಪಾಧ್ಯಕ್ಷೆ ಶರಣಮ್ಮ ಮೋಪಗಾರ. ಸಾಹೇಬ್ ಗೌಡ ಬಿರಾದಾರ. ಶಾಂತಯ್ಯ ಮಠ. ಗ್ರಾಮಪಂ ಸದಸ್ಯರಾದ ಹುಸೇನ್ ಬಾಷಾ ಆಲ್ಗೂರ. ಪ್ರಕಾಶ ನಾಟಿಕರ. ಮರಿನಿಂಗ ನಾಟಿಕಾರ. ವಿಜುಗೌಡ ಚೌದರಿ ರಾಮನಗೌಡ ಚಳಗಿ ವೀರಗಂಟೆಪ್ಪ ಬ್ಯಾಕೋಡ. ಮಹಮ್ಮದ್ ರಫೀಕ .ಎಲ್ಲಾ ಶಾಲೆಗಳ ಎಸ್ಡಿಎಂಸಿ ಅಧ್ಯಕ್ಷರು ಸಿಆರ್ಸಿ. ಮುಖ್ಯ ಶಿಕ್ಷಕ ಶಿಕ್ಷಕಿಯರು ದಲಿತ ಹಾಗೂ ಕನ್ನಡಪರ ಸಂಘಟನೆಗಳ ಮುಖ್ಯಸ್ಥರು ಗ್ರಾಮದ ಗಣ್ಯರು ಇದ್ದರು. ಪತ್ರಕರ್ತ ಕಾಂಬಳೆ ಕಾರ್ಯಕ್ರಮ ನಿರೂಪಿಸಿದರು.
ವರದಿ ಸುನೀಲ್ ಎಲ್ ತಳವಾರ ಮುಂಜಾನೆ ವಾರ್ತೆ ತಾಳಿಕೋಟಿ