ಇತ್ತೀಚಿನ ಸುದ್ದಿರಾಜ್ಯ
ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ವಿಶೇಷ ಪೂಜೆ
ಮಾಲೂರು:
ಶ್ರೀ ಸೋಮೇಶ್ವರ ಸ್ವಾಮಿಯ ದೇವಾಲಯದಲ್ಲಿ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಸ್ವಾಮಿಗೆ ವಿವಿಧ ರೀತಿಯ ದೈವಿಕ ಕೈಂಕರ್ಯಗಳು ನಡೆದವು. ಈ ಎಲ್ಲಾ ಪೂಜಾ ಕಾರ್ಯಗಳನ್ನು ಅರ್ಚಕರಾದ ಸಿದ್ದಲಿಂಗ ಶಾಸ್ತ್ರಿಗಳು ಅದ್ದೂರಿಯಾಗಿ ನೆರವೇರಿಸಿದರು.
ತೊರ್ನಹಳ್ಳಿ ಸಮೀಪದ ಮುಗಬಾಳ ಗ್ರಾಮದಲ್ಲಿ ನೆಲೆಸಿರುವ ಶ್ರೀ ಸೋಮೇಶ್ವರ ಸ್ವಾಮಿಗೆ ಬೆಳಿಗ್ಗೆಯಿಂದಲೇ ವಿಶೇಷ ಅಲಂಕಾರ, ಅಭಿಷೇಕ, ಪೂಜೆ, ಹೋಮ, ಹವನ ನಡೆದವು. ಈ ಸಂದರ್ಭದಲ್ಲಿ ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಐ ಎ ಎಸ್ ಅಧಿಕಾರಿಗಳಾದ ಡಾ. ಸಿ.ಸೋಮಶೇಖರ್, ದೇವಾಲಯದ ಅಧ್ಯಕ್ಷರಾದ ಮಂಜುನಾಥ್ ಶರೀಫ್, ಕಾರ್ಯದರ್ಶಿ ವೀರಸ್ವಾಮಿ ಗೌಡ, ಖಜಾಂಚಿ ಜ್ಞಾನಮೂರ್ತಿಗಳು ಹಾಗೂ ಎಲ್ಲಾ ನಿರ್ದೇಶಕರುಗಳು ಇದ್ದರು.