ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ ಸಿರಿಧಾನ್ಯ ಬೆಳೆಯಲು ಒಂದು ಸಾವಿರ ಸಹಾಯಧನ: ಮಧುರಾಜ್
ಮಾಲೂರು:
ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ ಸಿರಿಧಾನ್ಯ ಬೆಳೆಯಲು ಒಂದು ಸಾವಿರ ಸಹಾಯಧನ ಸಂಘದ ಸದಸ್ಯರಿಗೆ ವಿತರಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತದೆ ಎಂದು ತಾಲ್ಲೂಕು ಧರ್ಮಸ್ಥಳದ ಕೃಷಿ ಅಧಿಕಾರಿ ಮಧುರಾಜ್ ಹೇಳಿದರು.
ತಾಲೂಕಿನ ಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ( ರಿ) ಮತ್ತು ಕೃಷಿ ವಿಜ್ಞಾನ ಕೇಂದ್ರ ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಚಿನ್ನಯ್ಯ ರೈತರ ಜಮೀನಿನಲ್ಲಿ ರೈತ ಕ್ಷೇತ್ರ ಪಾಠಶಾಲಾ ತರಬೇತಿಯಲ್ಲಿ ಸಿರಿಧಾನ್ಯ ಬೆಳೆಯಾದ ಕೊರಲೆ ಬೆಳೆಯನ್ನು ಬೆಳೆದು ಉತ್ತಮ ಇಳುವರಿ ಬರಲು ಮತ್ತು ಯಾವುದೇ ರೋಗ ಬಾರದಂತೆ ತಡೆಗಟ್ಟುವ ವಿಧಾನಗಳ ಬಗ್ಗೆ ಕೋಲಾರದ ಕೃಷಿ ವಿಜ್ಞಾನಿಗಳಾದ ಡಾ.ಚಿಕ್ಕಣ್ಣನವರು ಮಾಹಿತಿ ನೀಡಿದರು .
ಸಿರಿಧಾನ್ಯ ಕೊರಲೆ ಬೆಳೆ ಕಡಿಮೆ ನೀರಿನಲ್ಲಿ ಯಾವುದೇ ಗೊಬ್ಬರ ಹಾಕದೆ ಬೆಳೆಯಬಹುದು ಸಿರಿಧಾನ್ಯ ನಾರಿನಾಂಶ ಇರುವ ಕಾರಣ ಸೇವನೆ ಮಾಡುವುದರಿಂದ ಶುಗರ್, ಬಿಪಿ ನಮ್ಮ ಮೂಳೆ ಮತ್ತು ಸಾವಿರಾರು ಕಾಯಿಲೆಗಳನ್ನು ಗುಣಪಡಿಸಲು ಉತ್ತಮವಾದ ಆಹಾರ. ಈ ಕೊರಲೆ ಸಿರಿಧಾನ್ಯವನ್ನು ಬಾಸುಮತಿ ಅಕ್ಕಿ ಸಮಾನವಾಗಿ ಕನಿಷ್ಠ 100 ರಿಂದ 200 ರೂ ಒಂದು ಕೆಜಿಗೆ ಬೇಡಿಕೆ ಇರುತ್ತದೆ, ಇದನ್ನು ಅತಿ ಹೆಚ್ಚು ಅಮೆರಿಕಾದಲ್ಲಿ ಬಳಸುತ್ತಾರೆ. ನಮ್ಮ ರೈತರು ಹೆಚ್ಚಾಗಿ ಕೊರಲೆ ಬೆಳೆ ಬೆಳೆದರೆ ಪ್ರತಿಯೊಬ್ಬರು ಉತ್ತಮವಾಗಿ ನಮ್ಮಆರೋಗ್ಯ ಸಹ ಕಾಪಡಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿಗ ಡಾ.ಶಶಿಧರ್ ಹಾಗೂ ಲಕ್ಕೂರು ವಲಯದ ಪುರುಷೋತ್ತಮ್, ಸೇವಾ ಪ್ರತಿನಿಧಿಗಳಾದ ಪುಷ್ಪ, ಮಂಜುಳಾ, ರೈತರು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.