Travelಇತ್ತೀಚಿನ ಸುದ್ದಿ

ಶಿವಮೊಗ್ಗ-ತಿರುಪತಿ ವಿಮಾನ ಹಾರಾಟ ರದ್ದು, ಕಾದುಕಾದು ಸುಸ್ತಾದ ಪ್ರಯಾಣಿಕರು

ಶಿವಮೊಗ್ಗ, ಜನವರಿ 03: ತಾಂತ್ರಿಕ ಕಾರಣ ನೀಡಿ ಶಿವಮೊಗ್ಗ-ತಿರುಪತಿ  ನಡುವಿನ ವಿಮಾನ ಹಾರಾಟ ರದ್ದು ಮಾಡಲಾಗಿದ್ದು, ಸುಮಾರು 3 ಗಂಟೆ ಪ್ರಯಾಣಿಕರು ಕಾದುಕಾದು ಸುಸ್ತಾಗಿದ್ದಾರೆ. ತಾಂತ್ರಿಕ ಕಾರಣ ನೀಡಿ ಸ್ಟಾರ್ ಏರ್​​ಲೈನ್ಸ್ ಸಂಸ್ಥೆ ಫ್ಲೈಟ್​ ಕ್ಯಾನ್ಸಲ್​ ಮಾಡಿದೆ. ಇತ್ತ ಫ್ಲೈಟ್​ ರದ್ದಾಗಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇಪದೆ ಶಿವಮೊಗ್ಗ-ತಿರುಪತಿ ವಿಮಾನ ರದ್ದಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯಾಣಿಕರು ಒತ್ತಾಯ ಮಾಡಿದ್ದಾರೆ.

ಪ್ರಯಾಣಿಕರು ತಿರುಪತಿಯಲ್ಲಿ ದರ್ಶನಕ್ಕೆ ಆನ್ ಲೈನ್ ಮೂಲಕ ಬುಕ್ ಮಾಡಿದ್ದರು. ಆದರೆ ತಿರುಪತಿ ಹೋಗಲು ಆಗದೆ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಹವಾಮಾನ ವೈಪರೀತ್ಯ ಹಿನ್ನೆಲೆ ಜಿಲ್ಲೆಯಿಂದ ಹೈದರಾಬಾದ್​ಗೆ ತೆರಳಬೇಕಿದ್ದ ಸ್ಟಾರ್ ಏರ್​ಲೈನ್ಸ್​ ವಿಮಾನ ಹಾರಾಟ ರದ್ದುಗೊಳಿಸಿತ್ತು. ಸಂಜೆ 4.30ಕ್ಕೆ ಶಿವಮೊಗ್ಗದಿಂದ ಹೈದರಾಬಾದ್​ಗೆ ಈ ವಿಮಾನ ತೆರಳಬೇಕಿತ್ತು.

ಶಿವಮೊಗ್ಗದಿಂದ ಹೈದರಾಬಾದ್​ಗೆ ಸ್ಟಾರ್ ಏರ್​ಲೈನ್ಸ್ ವಿಮಾನದಲ್ಲಿ ಸುಮಾರು 70 ಪ್ರಯಾಣಿಕರು ಪ್ರಯಾಣ ಕೈಗೊಳ್ಳಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹಾರಾಟ ರದ್ದುಗೊಂಡ ಹಿನ್ನೆಲೆ ಸುಮಾರು 3 ಗಂಟೆ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಪರದಾಟ ನಡೆಸಿದ್ದರು. ವಿಮಾನ ಹಾರಾಟಕ್ಕಾಗಿ ಕಾದು ಸುಸ್ತಾಗಿ, ಸ್ಟಾರ್ ಏರ್​ಲೈನ್ಸ್ ಸಂಸ್ಥೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button