ಇತ್ತೀಚಿನ ಸುದ್ದಿರಾಜ್ಯ
ಶಿಂಡನಪುರ: ಚಿರತೆದಾಳಿವ್ಯಕ್ತಿಗೆ ಗಾಯ
ಗುಂಡ್ಲುಪೇಟೆ:
ತಾಲೂಕಿನ ಶಿಂಡನಪುರ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಗ್ರಾಮಸ್ಥರೊಬ್ಬರನ್ನು ಗಾಯಗೊಳಿಸಿದ ಘಟನೆ ನಡೆದಿದೆ.
ಗ್ರಾಮದ ತಮ್ಮಣ್ಣ(65) ಗಾಯಗೊಂಡವರು.
ಗ್ರಾಮದ ಹೊರವಲಯದಲ್ಲಿ ಮನೆ ಹೊಂದಿರುವ ತಮ್ಮಣ್ಣ ಸಂಜೆ ಮನೆಯಿಂದ ಹೊರ
ಬರುತ್ತಿದ್ದಂತೆ ಸಮೀಪದಲ್ಲಿ ಅಡಗಿದ್ದ ಚಿರತೆ ದಾಳಿ ನಡೆಸಿದೆ. ಮನೆಯವರು ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಚಿರತೆ ಪರಾರಿಯಾಗಿದೆ.
ಕೂಡಲೇ ಗಾಯಾಳುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ ಚಿರತೆ ಕಚ್ಚಿದ್ದರಿಂದ ಕಾಲಿಗೆ ಗಾಯಗಲಾಗಿವೆ.
ತಾವು ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಭೇಟಿನೀಡಿ ಪರಿಶೀಲಿಸಿ ಆರೋಗ್ಯ ವಿಚಾರಿಸಿದ್ದೇವೆ. ಅರಣ್ಯ ಇಲಾಖೆಯ ವತಿಯಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಬಫರ್ ವಲಯದ ಆರ್ ಎಫ್ ಒ ಸತೀಶ್ ಕುಮಾರ್ ತಿಳಿಸಿದ್ದಾರೆ.