ಇತ್ತೀಚಿನ ಸುದ್ದಿ
Trending

ಶಾಲಾ ಶುಲ್ಕವಾಯ್ತು, ಇದೀಗ ಶಾಲಾ ವಾಹನ ಶುಲ್ಕ ಏರಿಕೆ ಸರದಿ

ಬೆಂಗಳೂರು, ಏಪ್ರಿಲ್​ 10: ಕರ್ನಾಟಕದಲ್ಲಿ ನಂದಿನಿ ಹಾಲು ಸೇರಿದಂತೆ ಮೆಟ್ರೋ, ವಿದ್ಯುತ್, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಬೆನ್ನಲೆ ಇದೀಗ ಖಾಸಗಿ ಶಾಲೆಗಳ (Private Schools) ಬಸ್ ದರ ಏರಿಕೆಗೆ ಮುಂದಾಗಿದ್ದು, ಪೋಷಕರ (Parents) ಪರದಾಟಕ್ಕೆ ಕಾರಣವಾಗಿದೆ. ಈಗಾಗಲೇ ಖಾಸಗಿ ಶಾಲೆಗಳಲ್ಲಿ 15 ರಿಂದ 20% ಫೀಸ್ ಏರಿಕೆ ಮಾಡಲಾಗಿದೆ.  ಡೀಸೆಲ್‌ ಬೆಲೆ ಹೆಚ್ಚಳದಿಂದಾಗಿ ಪ್ರತಿ ವಿದ್ಯಾರ್ಥಿಗೆ 500 ರಿಂದು 600 ರೂ. ಹೆಚ್ಚುವರಿ ಹೊರೆಯಾಗಲಿದ್ದು, ಶಾಲಾ ಬೆಲೆ ಏರಿಕೆ ವಿರುದ್ಧ ಪೋಷಕರು ಗರಂ ಆಗಿದ್ದಾರೆ.ಸುನಾಮಿಯೇ ಬರಲಿ ಖಾಸಗಿ ಶಾಲೆಗಳು ಮಾತ್ರ ಶುಲ್ಕದ ವಿಚಾರದಲ್ಲಿ ಸುಮ್ಮನೆ ಕೂರುವುದಿಲ್ಲ. ಒಂದಲ್ಲ ಒಂದು ರಣತಂತ್ರಗಳ ಮೂಲಕ ಪೋಷಕರಿಗೆ ಹೊರೆಯಾಗುವಂತೆ ಮಾಡುತ್ತಾರೆ. ಈ ವರ್ಷವೂ ಖಾಸಗಿ ಶಾಲೆಗಳ ವಾಹನಗಳ ಮಾಲೀಕರು ದರ ಹೆಚ್ಚಳಕ್ಕೆ ಮುಂದಾಗಿದ್ದಾರೆ. ಪೆಟ್ರೋಲ್, ಡೀಸೆಲ್‌ ಬೆಲೆ ಮುಂದಿಟ್ಟುಕೊಂಡು ಶಾಲಾ ವಾಹನಗಳ ದರ ಹೆಚ್ಚಳಕ್ಕೆ ಮುಂದಾಗಿದ್ದು, ಇದು ಪೋಷಕರ ಸಂಕಷ್ಟಕ್ಕೆ ಕಾರಣವಾಗಿದೆ.ಹೌದು! ಡಿಸೇಲ್ ಹೆಚ್ಚಳ ಹಿನ್ನಲೆ ಶಾಲಾ ವಾಹನದ ಶುಲ್ಕ ಹೆಚ್ಚಳಕ್ಕೆ ಖಾಸಗಿ ಶಾಲಾ ಬಸ್ ಸಂಘಟನೆ ಮುಂದಾಗಿದೆ. ರಾಜ್ಯ ಹಾಗೂ ಕೇಂದ್ರದಿಂದ ಲೀಟರ್​ಗೆ ತಲಾ 2 ಏರಿಕೆ ಇದರಿಂದ ಶಾಲಾ ವಾಹನದ ಶುಲ್ಕ ಹೆಚ್ಚಿಸಲು ಖಾಸಗಿ ಶಾಲಾ ವಾಹನ ಸಂಘ ಮುಂದಾಗಿದೆ. ಇದರಿಂದ ಪ್ರತೀ ಕುಟುಂಬಕ್ಕೆ ತಿಂಗಳಿಗೆ 500 ರಿಂದ 600 ರೂ ಹೆಚ್ಚುವರಿ ಹೊರೆಯಾಗುವ ಆತಂಕ ಎದುರಾಗಿದೆ. ಸದ್ಯ ತಿಂಗಳಿಗೆ 2000 ದಿಂದ 2100 ರೂ ಇರುವ ಶುಲ್ಕ 2500 ರಿಂದ 3000 ರೂ ಆಗುವ ಸಾಧ್ಯತೆಯಿದೆ. ಆ ಮೂಲಕ ಶಾಲಾ ವಾಹನದಲ್ಲಿ ಓಡಾಡುವುದು ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಕಷ್ಟವಾಗಲಿದೆ.

ಇನ್ನು ಇದೇ ವರ್ಷದಿಂದ ನೂತನ ದರ ಜಾರಿಯಾಗಲಿದೆ. ಸದ್ಯ ಬೆಂಗಳೂರಲ್ಲಿ 7000 ಶಾಲಾ ವಾಹನಗಳು ಇದ್ದು, ಈ ಬಗ್ಗೆ ಮಾತನಾಡಿರುವ ಖಾಸಗಿ ಅನುದಾರಹಿತ ಶಾಲಾ ಬಸ್ ಸಂಘಟನೆಯ ಅಧ್ಯಕ್ಷ ಷಣ್ಮುಗಮ್, ಸರ್ಕಾರದ ನೀತಿಗಳಿಂದ ದರ ಹೆಚ್ಚಳ ಅನಿವಾರ್ಯವಾಗಿದೆ. ರಾಜ್ಯ ಮತ್ತು ಕೇಂದ್ರದಿಂದ ಲೀಟರ್​ಗೆ ತಲಾ 2 ರೂ. ಏರಿಕೆಯಾಗಿದೆ. ಬಸ್ ಬಿಡಿ ಬಾಗಗಳ ದರ ಹೆಚ್ಚಾಗಿದೆ. ಇನ್ಶೂರೆನ್ಸ್ ಕೂಡ ಹೆಚ್ಚಾಗಿದೆ. ಹೀಗಾಗಿ ಶಾಲಾ ವಾಹನದ ಶುಲ್ಕ ಹೆಚ್ಚಿಸುವುದು ಅನಿವಾರ್ಯ. ಆದರೆ ಎಷ್ಟು ಹೆಚ್ಚಳ ಮಾಡಬೇಕು ಅಂತಾ ಇನ್ನೂ ಚರ್ಚೆ ಮಾಡಬೇಕು. ಪೋಷಕರಿಗೆ ಹೊರೆ ಮಾಡುವುದು ನಮ್ಮ ಉದ್ಸೇಶವಲ್ಲ. ಪೋಷಕರಿಗೆ ಹೊರೆಯಾಗದ ರೀತಿ ಹೆಚ್ಚಳ ಮಾಡಲು ಚಿತಂನೆ ಇದೆ ಎಂದಿದ್ದಾರೆ.

ಇನ್ನು ಶಾಲಾ ವಾಹನದ ಶುಲ್ಕ ಹೆಚ್ಚಳಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ಶಾಲಾ ಶುಲ್ಕ ಆಯ್ತು, ಬುಕ್ಸ್ ದರ ಏರಿಕೆ ಆಯ್ತು, ಈಗ ಶಾಲಾ ವಾಹನದ ಶುಲ್ಕ ಏರಿಕೆ ಯಾಕೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಪೋಷಕರಿಗೆ ಇದು ಆರ್ಥಿಕ ಹೊರೆಯಾಗುತ್ತದೆ. ಈಗಾಗಲೇ ಸಾಕಷ್ಟು ಸಮಸ್ಯೆ ಇದೆ. ಈ ನಡುವೆ ಶಾಲಾ ವಾಹನಗಳ ಶುಲ್ಕ ಏರಿಕೆ ಸರಿಯಾದ ಕ್ರಮವಲ್ಲ ಎಂದು ಪೋಷಕರಾದ ಶೀತಲ್​ ಎಂಬುವವರು ಹೇಳಿದ್ದಾರೆ. ಒಂದಡೇ ಖಾಸಗಿ ಶಾಲೆಗಳಿಂದ ಶಾಲ್ಕ ಹೆಚ್ಚಳ, ಮತ್ತೊಂದೆಡೆ ಪೆಟ್ರೋಲ್ ಡಿಸೇಲ್ ನೆಪವೊಡ್ಡಿ ಶಾಲಾವಾಹನ ಶುಲ್ಕ ಏರಿಕೆಯ ಹೊರ ಪೋಷರಿಗೆ ತಟ್ಟಿದ್ದು, ಪೋಷಕರು ಪರದಾಡುವ ಸ್ಥಿತಿ ಎದುರಾಗಿದೆ.

Related Articles

Leave a Reply

Your email address will not be published. Required fields are marked *

Back to top button