shikshanaಇತ್ತೀಚಿನ ಸುದ್ದಿರಾಜ್ಯಸುದ್ದಿ

ಶಾಲಾ ಮಕ್ಕಳ ಶೂ, ಸಾಕ್ಸ್ ವಿವಾದ: 132 ಕೋಟಿ ಅನುಮೋದನೆ ಕೊಟ್ಟು ಸಿಎಂ ಬೊಮ್ಮಾಯಿ

ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಒದಗಿಸುವ ಸಂಬಂಧ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಶಾಲಾ ಮಕ್ಕಳು ವಿದ್ಯೆ ಕಲಿಯಲು ಬರುತ್ತಾರೆ ಹೊರತು ಶೂ ಸಾಕ್ಸ್‌ಗೆ ಅಲ್ಲ ಎಂದು ಹೇಳಿದ್ದರು. ಇದು ಪ್ರತಿಪಕ್ಷ ಮತ್ತು ಶಿಕ್ಷಣ ತಜ್ಞರನ್ನು ಕೆರಳಿಸಿ ಸರ್ಕಾರದ ವಿರುದ್ಧ ಕೆಂಡ ಕಾರಿದ್ದರು. ಕೂಡಲೇ ಎಚ್ಚೆತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

“ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಹಂಚಿಕೆಗೆ 132 ಕೋಟಿ ರೂ.ಗಳನ್ನು ಒದಗಿಸಿ ಅನುಮೋದನೆ ನೀಡಲಾಗಿದೆ,” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಸಮವಸ್ತ್ರದ ವಿಚಾರದಲ್ಲಿ ಸರ್ಕಾರ ಈಗಾಗಲೇ ಸಮವಸ್ತ್ರಕ್ಕೆ ಅನುಮೋದನೆ ನೀಡಿದೆ. ಸಮವಸ್ತ್ರ ತಯಾರಾಗಲು ಸ್ವಲ್ಪ ಸಮಯ ಹಿಡಿಯುತ್ತದೆ. ನಂತರ ವಿತರಣೆಯಾಗಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, “ಈ ಹಿಂದೆ ಕೋವಿಡ್ ಸಮಯದಲ್ಲಿ ಭಿಕ್ಷೆ ಬೇಡಿ ಜನರಿಗೆ ಕೊಡುತ್ತೇವೆ ಎಂದು ಅವರು ಹೇಳಿದ್ದರು‌. ಆ ಹಣ ಎಲ್ಲಿ ಎಂದು ಕೇಳಿದ ಸಿಎಂ, ಎಂದಿನಂತೆಯೇ ಇದು ಕೂಡ,” ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಗೌರವಯುತ ಕಲಿಕಾ ವಾತಾವರಣ:

“ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ 2022-23 ನೇ ಸಾಲಿಗೆ ಶೂ ಮತ್ತು ಸಾಕ್ಸ್ ನ್ನು ಖರೀದಿಸಲು 132 ಕೋಟಿ ಹಣವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದ ಸರಕಾರದ , ಅದರಲ್ಲೂ ವಿಶೇಶವಾಗಿ ಮುಖ್ಯಮಂತ್ರಿಯವರ ತೀರ್ಮಾನವನ್ನು ಎಸ್‌ಡಿಎಂಸಿ ಸಮನ್ವಯ ವೇದಿಕೆ ತುಂಬು ಹೃದಯದಿಂದ ಸ್ವಾಗತಿಸುತ್ತದೆ,” ಎಂದು ವೇದಿಕೆಯ ಮಹಾ ಪೋಷಕ ವಿ.ಪಿ. ನಿರಂಜನಾರಾಧ್ಯ ಹೇಳಿದ್ದಾರೆ.

ಈ ಮೂಲಕ ಕನ್ನಡ ಶಾಲೆಗಳಲ್ಲಿನ ಮಕ್ಕಳು ಉಳಿದ ಖಾಸಗಿ ಶಾಲೆಗಳ ಮಕ್ಕಳಂತೆಯೇ ಸ್ವಾಭಿಮಾನದ ಗೌರವಯುತ ಕಲಿಕಾ ವಾತಾವರಣದಲ್ಲಿ ಕಲಿಯುವ ಭೂಮಿಕೆಯನ್ನು ಹಾಗು ಸಂವಿಧಾನದ ಮೂಲಭೂತ ಹಕ್ಕನ್ನು ಎತ್ತಿಹಿಡಿದಂತಾಗಿದೆ. ಇದೇ ಸಂದರ್ಭದಲ್ಲಿ ಈ ಹಣವನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಗುಣಮಟ್ಟದ ಶೂ ಮತ್ತು ಸಾಕ್ಸ್ ನೀಡಲು ಎಸ್‌ಡಿಎಂಸಿಗಳು ಕ್ರಮವಹಿಸಬೇಕೆಂದು ಶಾಲಾ ಹಂತದ ಎಸ್‌ಡಿಎಂಸಿಗಳಿಗೆ ಸಮನ್ವಯ ವೇದಿಕೆ ಕರೆ ನೀಡುತ್ತದೆ ಕರೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button