ವಿಷ್ಣುವರ್ಧನ್ ಎವರ್ ಗ್ರೀನ್ ಸಿನಿಮಾ ‘ಬಂಧನ’ ಸೀಕ್ವೆಲ್ ನಲ್ಲಿ ಆದಿತ್ಯ; ಮಗನ ಚಿತ್ರಕ್ಕೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ
ನಟ ವಿಷ್ಣುವರ್ಧನ್ ಅಭಿನಯದ ದಿ ಬೆಸ್ಟ್ ಸಿನಿಮಾ ಬಂಧನ. 1984 ರಲ್ಲಿ ತೆರೆಕಂಡ ಈ ಸಿನಿಮಾವನ್ನು ಜನರು ಇಂದಿಗೂ ಆಸಕ್ತಿಯಿಂದ ವೀಕ್ಷಿಸುತ್ತಾರೆ.
ಸ್ಯಾಂಡಲ್ ವುಡ್ ನಲ್ಲಿ ಬಂಧನ ಸಿನಿಮಾ ಅತಿ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾವಾಗಿತ್ತು, ಅದರಲ್ಲಿನ ಪ್ರೇಮಕಥೆ ಮನಮುಟ್ಟುವಂತಿದೆ. ಕೌಟುಂಬಿಕ ಪ್ರೇಕ್ಷಕರನ್ನು ಭರಪೂರ ಸೆಳೆದುಕೊಂಡ ಆ ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆ ಸುಹಾಸಿನಿ, ಜೈ ಜಗದೀಶ್ ಮೊದಲಾದವರು ನಟಿಸಿದ್ದರು. ಅಂದು ‘ಬಂಧನ’ ನಿರ್ದೇಶಿಸಿದ್ದ ಎಸ್.ವಿ. ರಾಜೇಂದ್ರ ಸಿಂಗ್ ಬಾಬು
ಅವರೇ ಈಗ ‘ಬಂಧನ 2’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.
ಚಂದನವನದಲ್ಲಿ ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿ, ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ಅಣಜಿ ನಾಗರಾಜ್ ಅವರು ‘ಬಂಧನ 2’ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.
ಬಂಧನ ಸೀಕ್ವೆಲ್ ಮಾಡುವುದು ನನ್ನ ಮೇಲೆ ಅತಿ ಹೆಚ್ಚು ಜವಾಬ್ದಾರಿಯಿದೆ, ಬಂಧನ ಸಿನಿಮಾ ಉಷಾ ನವರತ್ನರಾಮ್ ಅವರ ಕಾದಂಬರಿ ಆಧಾರಿತ ಸಿನಿಮಾವಾಗಿದೆ. 19985 ರಲ್ಲಿ ಇದಕ್ಕೆ ಉತ್ತಮ ಸಿನಿಮಾ ಎಂಬ ಕಾರಣಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿತ್ತು. ಕನ್ನಡ ಸಿನಿಮಾ ರಂಗದಲ್ಲಿ ಇದೊಂದು ಮೈಲಿಗಲ್ಲಾಗಿತ್ತು. ಅದಾದ ನಂತರ ತಮಿಳಿಗು ಸಿನಿಮಾ ರಿಮೇಕ್ ಆಗಿತ್ತು.
ಬಂಧನ 2 ಸಿನಿಮಾದಲ್ಲಿ ನಂದಿನಿ ಪಾತ್ರ ಮುಂದುವರಿಯಲಿದೆ, ನಾಯಕನಾಗಿ ಆದಿತ್ಯ ನಟಿಸುತ್ತಿದ್ದು, ಸುಹಾಸಿನಿ ಮತ್ತು ಜೈ ಜಗದೀಶ್ ಈ ಸಿನಿಮಾದಲ್ಲಿಯೂ ಅಭಿನಯಿಸಲಿದ್ದಾರೆ. ಉಳಿದ ಪಾತ್ರವರ್ಗವನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.
ಚಿತ್ರದ ಶೂಟಿಂಗ್ ವೇಳಾಪಟ್ಟಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಾಬು, ನಾನು ಪ್ರಸ್ತುತ ನನ್ನ ಕಂಬಳ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಏಕಕಾಲದಲ್ಲಿ ಬಂಧನ ಸೀಕ್ವೆಲ್‌ನ ಕೆಲಸಗಳನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದೇನೆ ಅಕ್ಟೋಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.
ರಾಜೇಂದ್ರ ಸಿಂಗ್ ಬಾಬು ದರ್ಶನ್ ನಟನೆಯ ರಾಜಾ ವೀರಮದಕರಿ ನಾಯಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ.