ಸುದ್ದಿ

ವಿದ್ಯುತ್ ಶುಲ್ಕ ಬಾಕಿ ಪಾವತಿಸುವಂತೆ ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ಸೂಚನೆ.

ಬೆಂಗಳೂರು: ಬೀದಿ ದೀಪಗಳ ಮತ್ತು ಕುಡಿಯುವ ನೀರಿನ ಸ್ಥಾವರಗಳ ವಿದ್ಯುತ್ ಶುಲ್ಕದ ಬಾಕಿ ಮೊತ್ತ ₹515.16 ಕೋಟಿ ಪಾವತಿಸುವಂತೆ ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ಸೂಚನೆ ನೀಡಿದೆ. ನಗರದಲ್ಲಿ 11,569 ಕುಡಿಯುವ ನೀರಿನ ಸ್ಥಾವರಗಳಿದ್ದು, ಅವುಗಳ ತಿಂಗಳ ವಿದ್ಯುತ್‌ ಶುಲ್ಕಕ್ಕೆ ಸಂಬಂಧಿಸಿ ₹402.36 ಕೋಟಿ ಅಸಲು ಮತ್ತು ₹91.08 ಕೋಟಿ ಬಡ್ಡಿ ಸೇರಿ ₹493.44 ಕೋಟಿ ವಿದ್ಯುತ್‌ ಶುಲ್ಕ ಬಾಕಿ ಇದೆ. ಇದರಲ್ಲಿ ಬಿಬಿಎಂಪಿಯಿಂದ ಜಲಮಂಡಳಿಗೆ ಜಲವಿದ್ಯುತ್‌ ಸ್ಥಾವರಗಳನ್ನು ವರ್ಗಾಯಿ ಸುವುದಕ್ಕೂ ಮುನ್ನ ₹204.59 ಕೋಟಿ ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಂಡಿತ್ತು. ಈ ಮೊತ್ತವನ್ನೂ ಬಿಬಿಎಂಪಿಯೇ ಪಾವತಿ ಸಬೇಕು ಎಂದು ಮುಖ್ಯ ಕಾರ್ಯದರ್ಶಿಯವರು 2020ರ ಜು17 ರಂದು ನಡೆದಿದ್ದ ಸಭೆಯಲ್ಲಿ ಸೂಚಿಸಿದ್ದರು. 21,112 ಬೀದಿ ದೀಪ ಸ್ಥಾವರಗಳ ₹21.72 ಕೋಟಿ ಬಾಕಿ ಸೇರಿ ಒಟ್ಟು ₹515.16 ಕೋಟಿ ಶುಲ್ಕವನ್ನು ಬಿಬಿಎಂ‍ಪಿ ಬಾಕಿ ಉಳಿಸಿಕೊಂಡಿದೆ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಬಿಬಿಎಂಪು ಮುಖ್ಯ ಆಯುಕ್ತರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಬಿಬಿಎಂಪಿ ಮತ್ತು ಜಲಮಂಡಳಿಯ ರಾಜ್ಯ ಹಣಕಾಸು ಆಯೋ ಗದ (ಎಸ್‌ಎಫ್‌ಸಿ) ಅನುದಾನ ಮತ್ತು ಕೇಂದ್ರ ಹಣ ಕಾಸು ಆಯೋಗದ (ಸಿಎಫ್‌ಸಿ) ಅನುದಾನ ಅನುದಾನದಲ್ಲಿ ಶೇ 25 ರಷ್ಟು ಕಡಿತ ಮಾಡಿಕೊಂಡು ಬೆಸ್ಕಾಂಗೆ ಬಿಡುಗಡೆ ಮಾಡು ವಂತೆ ಕೋರಿದ್ದ ಪ್ರಸ್ತಾವ ನೆಯನ್ನು ಆರ್ಥಿಕ ಇಲಾಖೆ ವಾಪಸ್ ಕಳುಹಿಸಿದೆ. ಆದ್ದರಿಂದ ಬಾಕಿ ಮೊತ್ತವನ್ನು ಕೂಡಲೇ ಪಾವತಿಸಬೇಕು ಎಂದು ಸೂಚಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button