ವಿದ್ಯಾರ್ಥಿಯ ಅನುಮಾನಸ್ಪದ ಸಾವಿನ ತನಿಖೆಗೆ ಪೋಷಕರ ಒತ್ತಾಯ….
ಕೊರಟಗೆರೆ :- ಏಕಲವ್ಯ ವಸತಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡ ಘಟನೆಯೊಂದು ಕೊರಟಗೆರೆ ತಾಲೂಕಿನಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ಹಂಚಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಜ್ಜನಹಳ್ಳಿ ಬಳಿಯ ಏಕಲವ್ಯ ವಸತಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದ ಅಭಿಷೇಕ್ (14 ವರ್ಷ) ನಿಗೂಢ ರೀತಿಯಲ್ಲಿ ಸಾವಿಗೀಡಾದ ದುರ್ದೈವಿ ಯಾಗಿದ್ದಾನೆ.
ಮೃತ ವಿದ್ಯಾರ್ಥಿ ಅಭಿಷೇಕ್ ವಿದ್ಯಾರ್ಥಿನಿಲಯದಲ್ಲಿ ಬೆಳಿಗ್ಗೆ ತಿಂಡಿ ತಿಂದು ಶಾಲೆಗೆ ಹೋದವನು ಮಧ್ಯಾಹ್ನ 1; 50ರ ನಂತರ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಲು ಹೋಗಿ ಹಾಸಿಗೆ ಮೇಲೆ ಮಲಗಿದ್ದವನು ಬಹಳಷ್ಟು ಸಮಯವಾದರೂ ಹೇಳದ ಕಾರಣ ಸ್ನೇಹಿತರು ಬಂಧು ನೋಡಲಾಗಿ ರಕ್ತ ಮಿಶ್ರೀತಾ ನೂರೇ ಬಾಯಿಂದ ಹೊರ ಬರುತ್ತಿರುವುದು ಕಂಡು ಗಾಬರಿಗೂಂಡು ವಿದ್ಯಾರ್ಥಿಗಳ ಸಹಕಾರದೊಂದಿಗೆ ಕೊಠಡಿಯಿಂದ ತರಲಾಗಿ ನಂತರ ನರ್ಸ್ ಸಹಕಾರದೊಂದಿಗೆ ಆಸ್ಪತ್ರೆಗೆ ಸಾಗಿಸುತ್ತರಾದರೂ ಕೊಠಡಿಯಲ್ಲಿಯೇ ವಿದ್ಯಾರ್ಥಿ ಸಾವಿಗಿಡಾಗಿದ್ದ ಎನ್ನಲಾಗಿದೆ.
ಮೃತ ಅಭಿಷೇಕ್ ತಂದೆ ರಮೇಶ್ ಹಾಗೂ ತಾಯಿ ಮಂಜುಳಾ ಜೀವನ ಕಟ್ಟಿಕೊಳ್ಳುವ ದೃಷ್ಟಿಯಿಂದ ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು ಮೂಲತಃ ಕೊರಟಗೆರೆ ತಾಲೂಕಿನ ಶಕುನಿ ತಿಮ್ಮನಹಳ್ಳಿ ಗ್ರಾಮದವರಾಗಿದ್ದರು, ಹೆಣ್ಣು ಮಗುವನ್ನು ತುಮಕೂರಿನ ಹಾಸ್ಟೆಲ್ ವೂಂದರಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದರೆ ಮಗ ಅಭಿಷೇಕ್ ಬಜ್ಜನಹಳ್ಳಿಯ ಏಕಲವ್ಯ ವಸತಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು ಈಗ ಮಗ ಅಭಿಷೇಕ್ ಇದ್ದಕ್ಕಿದ್ದಂತೆ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.
ಏಕಲವ್ಯ ಶಾಲೆಯ ನಿರ್ಲಕ್ಷದಿಂದ ವಿದ್ಯಾರ್ಥಿ ಸಾವು
ಮೃತ ಅಭಿಷೇಕ್ ಏಕಲವ್ಯ ವಸತಿ ಶಾಲೆಯಲ್ಲಿ ಮಧ್ಯಾಹ್ನ 1:50 ರ ನಂತರ ಶಾಲೆ ಬಿಟ್ಟಾಗ ಹೋಗಿ ಕೊಠಡಿ ಸೇರಿದ್ದವನು ಅನಾರೋಗ್ಯದಿಂದ ಮಲಗಿದವರನ್ನು ಆಸ್ಪತ್ರೆಗೆ ಕರದೊಯ್ದಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು ಎನ್ನಲಾಗುತ್ತಿತ್ತು, 2-3 ಗಂಟೆಗಳ ಕಾಲ ಏಕಲವ್ಯ ವಸತಿ ಶಾಲೆಯ ಆಡಳಿತ ವರ್ಗ ನೌಕರರು ವಿದ್ಯಾರ್ಥಿಯನ್ನು ಸಮರ್ಪಕವಾಗಿ ನೋಡಿಕೊಳ್ಳದ ಕಾರಣ 2 ಗಂಟೆ ತಡವಾಗಿ ಆಸ್ಪತ್ರೆಗೆ ದಾಖಲಾಗಿ ಆಸ್ಪತ್ರೆಗೆ ಸಾಗಿಸುವ ಮುಂಚೆಯೇ ಕೊಠಡಿಯಲ್ಲಿ ಸಾವಿಗೀಡಾದ ಕಾರಣ ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ವಿದ್ಯಾರ್ಥಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
*ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ಭೇಟಿ
ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿ ನಿಲಯವನ್ನು ಕೂಲಂಕುಶವಾಗಿ ಪರಿಶೀಲಿಸಿ, ವಾರ್ಡನ್ ಹಾಗೂ ಪ್ರಾಂಶುಪಾಲರು ಒಟ್ಟೊಟ್ಟಿಗೆ ಹಬ್ಬದ ದಿನದಲ್ಲಿ ರಜಾ ತೆಗೆದುಕೊಂಡವರು ಈವರೆಗೂ ಇಂದಿರಾಗದಿರುವುದು ಕಂಡುಬಂದಿದ್ದು ಜೊತೆಗೆ ವಿದ್ಯಾರ್ಥಿ ನಿಲಯ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಬಡ ವಿದ್ಯಾರ್ಥಿಗಳು ಓದುವಂತಹ ಸ್ಥಳ ಸರ್ಕಾರ ಏನೆಲ್ಲ ಸವಲತ್ತು ನೀಡಿದರು ದುರುಪಯೋಗ ಪಡಿಸಿಕೊಂಡು ನೌಕರರು ಇಷ್ಟಾನುಸಾರ ಕೆಲಸ ಮಾಡುತ್ತಿರುವುದು ಬೇಸರ ವಿಚಾರವಾಗಿದ್ದು ತತಕ್ಷಣ ವಿದ್ಯಾರ್ಥಿ ನಿಲಯವನ್ನ ಇಲ್ಲಿನ ವಾತಾವರಣವನ್ನು ಬದಲಿಸುವಂತೆ ಎಚ್ಚರಿಕೆ ನೀಡಿದರು.
ವಾರ್ಡನ್ ಪ್ರಿನ್ಸಿಪಲ್ ಅಮಾನತ್ತಿಗೆ ಆದೇಶ
ಏಕಲವ್ಯ ವಸತಿ ನಿಲಯದ ವಾರ್ಡನ್ ಮಂಜುನಾಥ್ ಹಾಗೂ ಪ್ರಿನ್ಸಿಪಾಲ್ ವಿನೋದ್ ಯಾದವ್ ಎಂಬುವರು ರಜೆ ಮೇಲೆ ತೆರಳಲಾಗಿ, ಇಷ್ಟೆಲ್ಲಾ ಘಟನೆ ನಡೆದರೂ ಯಾರೊಬ್ಬರೂ ಆಸ್ಪತ್ರೆಗೆ ಬಂದು ವಿದ್ಯಾರ್ಥಿಯ ಚಿಕಿತ್ಸೆಗೆ ಅನುವು ಮಾಡಿಕೊಡದ ಪ್ರಿನ್ಸಿಪಾಲ್ ಹಾಗೂ ವಾರ್ಡನ್ ವಿರುದ್ಧ ಜಿಲ್ಲಾಧಿಕಾರಿ ಸ್ಥಳದಲ್ಲಿ ಅಮಾನತುಗೊಳಿಸಿರುವುದಾಗಿ ಶುಭ ಕಲ್ಯಾಣ್ ಪರಿಶಿಷ್ಟ ಜಾತಿಯ ಜಿಲ್ಲಾ ಕಲ್ಯಾಣ ಅಧಿಕಾರಿ ತ್ಯಾಗರಾಜ್ ಅವರಿಗೆ ಸೂಚನೆ ನೀಡಿದರು.
ತಾಯಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ 2 ಲಕ್ಷ ಸಹಾಯಧನ
ಮೃತ ಅಭಿಷೇಕ್ ತಾಯಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ವಿದ್ಯಾರ್ಥಿಯ ಅಂತ್ಯಕ್ರಿಯೆ ನಂತರ ಡಾ ಜಿ ಪರಮೇಶ್ವರ್ ಅವರ ವಿಶೇಷ ಅಧಿಕಾರಿ ನಾಗಣ್ಣ, ಕೊರಟಗೆರೆ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ್, ತಹಶೀಲ್ದಾರ್ ಮಂಜುನಾಥ್, ಸಿಪಿಐ ಅನಿಲ್, ತಾಲೂಕ್ ಪಂಚಾಯತಿ ಈ ಓ ಅಪೂರ್ವ ಅನಂತರಾಮು, ಪಿಎಸ್ಐ ಚೇತನ್ ಗೌಡ, ಯೋಗೇಶ್ , ಮಂಜುನಾಥ್ , ತಾ .ಪಂ ಮಧುಸೂದನ್ ಮುಖೇನ ಅವರ ಸ್ವಗ್ರಾಮದಲ್ಲಿ ನೀಡಲಾಯಿತು.