ಸುದ್ದಿ
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಭೂಕಂಪನದ ಅನುಭವ : ತಡರಾತ್ರಿ ಭೂಮಿಯಿಂದ ಕೇಳಿಬಂತು ಭಾರಿ ಶಬ್ಧ!
ವಿಜಯಪುರ : ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹಲವೆಡೆ ತಡರಾತ್ರಿ ಭೂಮಿ ಕಂಪಿಸಿರುವ ಅನುಭವಾಗಿರುವ ಘಟನೆ ನಡೆದಿದೆ. ಭೂಮಿಯಿಂದ 3-4 ಬಾರಿ ಭಾರೀ ಶಬ್ದ ಕೇಳಿಬಂದಿದೆ.
ತಡರಾತ್ರಿ ಸಿಂದಗಿ ಪಟ್ಟಣದ ಬಂದಾಳ ರಸ್ತೆ, ಜ್ಯೋತಿನಗರ, ಶಾಂತವೀರ ನಗರ ಸೇರಿದಂತೆ ಹಲವೆಡೆ 3-4 ಬಾರಿ ಭೂಮಿ ಕಂಪಿಸಿರುವ ಅನುಭವವಾಗಿದೆ. ಭೂಮಿಯಿಂದ ಭಾರೀ ಶಬ್ಬ ಕೇಳಿ ಬಂದ ಹಿನ್ನೆಲೆಯಲ್ಲಿ ಜನರು ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.