ಕ್ರೀಡೆ

ವಾಂಖೆಡೆ ಕ್ರೀಡಾಂಗಣದಲ್ಲಿ ಸಿಕ್ಸರ್‌ಗಳ ಸುರಿಮಳೆ..

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತದ ಬ್ಯಾಟ್ಸ್‍ಮನ್‍ಗಳು ಸಿಕ್ಸರ್‍ಗಳ ಸುರಿಮಳೆ ಸುರಿಸುವ ಮೂಲಕ ತಂಡದ ಮೊತ್ತವನ್ನು 500 ರನ್‍ಗಳ ಗಡಿಯತ್ತ ಮುಟ್ಟಿಸುವತ್ತ ಹೊರಟಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ 2ನೆ ಟೆಸ್ಟ್‍ನ 2ನೆ ದಿನದಾಟದ ಅಂತ್ಯಕ್ಕೆ ಭಾರತದ ಆರಂಭಿಕ ಆಟಗಾರರಾದ ಕನ್ನಡಿಗ ಮಯಾಂಕ್ ಅಗರ್‍ವಾಲ್ ಹಾಗೂ ಚೇತೇಶ್ವರ ಪೂಜಾರ ಅವರು ಇಂದು ತಮ್ಮ ಬ್ಯಾಟಿಂಗ್ ವೈಭವವನ್ನು ಮುಂದುವರೆಸಿದರು.

ನಿನ್ನೆ ದಿನದಾಟದ ಅಂತ್ಯಕ್ಕೆ ಪೂಜಾರ 29 ರನ್ ಗಳಿಸಿದ್ದರೆ, ಅಗರ್‍ವಾಲ್ 38 ರನ್‍ಗಳನ್ನು ಬಾರಿಸಿದ್ದರು, ಇಂದು ಆರಂಭಿಕ ಪಾಳೆಯದಿಂದಲೂ ನ್ಯೂಜಿಲ್ಯಾಂಡ್‍ನ ವೇಗ ಹಾಗೂ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿಯು ಮೊದಲ ವಿಕೆಟ್‍ಗೆ 107 ರನ್ ಗಳಿಸಿದ್ದರು.

ಈ ನಡುವೆ ಮೊದಲ ಇನ್ನಿಂಗ್ಸ್‍ನಲ್ಲಿ ಆಕರ್ಷಕ ಶತಕ (150 ರನ್, 17 ಬೌಂಡರಿ, 4 ಸಿಕ್ಸರ್) ಸಿಡಿಸಿದ್ದ ಕನ್ನಡಿಗ ಮಯಾಂಕ್ ಅಗರ್‍ವಾಲ್ ಅವರು ಅರ್ಧಶತಕ ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದಾಗಲೇ ಮೊದಲ ಇನ್ನಿಂಗ್ಸ್‍ನಲ್ಲಿ 10 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದ ಇಜಾಜ್ ಪಟೇಲ್ ಬೌಲಿಂಗ್‍ನಲ್ಲಿ ಯಂಗ್‍ಗೆ ಕ್ಯಾಚ್ ನೀಡಿ ಔಟಾಗುವ ಮುನ್ನ 9 ಬೌಂಡರಿ, 1 ಸಿಕ್ಸರ್ ಸಹಿತ 62 ರನ್ ಗಳಿಸಿದ್ದರು.

ಅರ್ಧಶತಕ ವಂಚಿತ ಚೇತೇಶ್ವರ ಪೂಜಾರ, ಗಿಲ್:
ಮಯಾಂಕ್ ವಿಕೆಟ್ ಕಳೆದುಕೊಂಡ ಭಾರತ ಡ್ರಿಂಕ್ಸ್ ವೇಳೆಗೆ 113 ರನ್ ಗಳಿಸಿತ್ತು. ಈ ನಡುವೆ 47 ರನ್ ಗಳಿಸಿದ್ದ ಪೂಜಾರ ಕೂಡ ಪಟೇಲ್‍ಗೆ ವಿಕೆಟ್ ಒಪ್ಪಿಸಿ ಅರ್ಧಶತಕ ವಂಚಿತರಾದರು. ಪೂಜಾರ ಇನ್ನಿಂಗ್ಸ್‍ನಲ್ಲಿ6 ಬೌಂಡರಿ, 1 ಸಿಕ್ಸರ್ ಇತ್ತು. ಗಾಯಗೊಂಡರೂ ಕೂಡ ಸೋಟಕ ಬ್ಯಾಟಿಂಗ್ ನಡೆಸಿದ ಶುಭಮನ್ ಗಿಲ್ 4 ಬೌಂಡರಿ, 1 ಸಿಕ್ಸರ್ ಸಹಿತ 47 ರನ್ ಬಾರಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದಾಗ ರವಿಂದ್ರಾರ ಬೌಲಿಂಗ್‍ನಲ್ಲಿ ಲಾಥಮ್‍ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ನಂತರ ಬಂದ ಮೊದಲ ಟೆಸ್ಟ್‍ನ ಶತಕ ವೀರ ಶ್ರೇಯಸ್ ಅಯ್ಯರ್ ಕೂಡ ಆಕ್ರಮಣಕಾರಿ ಆಟ ಆಡಿ ಅಜಾಜ್ ಪಟೇಲ್ ವಿಕೆಟ್ ಒಪ್ಪಿಸುವ ಮುನ್ನ 8 ಎಸೆತಗಳಲ್ಲೇ 2 ಸಿಕ್ಸರ್‍ಗಳ ಸಹಿತ 14 ರನ್ ಗಳಿಸಿದ್ದರು.

ಈ ನಡುವೆ ನಾಯಕ ವಿರಾಟ್ ಕೊಹ್ಲಿ (1 ಬೌಂಡರಿ, 1 ಸಿಕ್ಸ್)ಕೂಡ ರವೀಂದ್ರಾರ ಬೌಲಿಂಗ್‍ನ ಗತಿಯನ್ನು ಅರಿಯದೆ ಕ್ಲೀನ್ ಬೌಲ್ಡಾದರು.
ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಭಾರತ ತಂಡವು 64 ಓವರ್‍ಗಳಲ್ಲಿ 225 ರನ್‍ಗಳನ್ನು ಗಳಿಸಿದ್ದು ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ (9 ರನ್, 1 ಬೌಂಡರಿ) ಹಾಗೂ ಮೊದಲ ಇನ್ನಿಂಗ್ಸ್‍ನಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದ ಅಕ್ಷರ್‍ಪಟೇಲ್ ಅವರು ಕ್ರೀಸ್‍ನಲ್ಲಿದ್ದರು.

Related Articles

Leave a Reply

Your email address will not be published. Required fields are marked *

Back to top button