ವನ್ಯಜೀವಿಗಳ ನೆರವಿಗೆ 57 ಸೋಲಾರ್ ಬೋರ್‌ವೆಲ್ ಹಾಗೂ ಆರಣ್ಯದೊಳಗಿರುವ ಮಂಗಲ ಡ್ಯಾಂ ನೆರವಿಗೆ ಬಂದಿದೆ.
ಗುಂಡ್ಲುಪೇಟೆ:
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆರೆಗಳಲ್ಲಿ ನೀರಿನ ಪ್ರಮಾಣ ಗಣನೀಯ ಪ್ರಮಾಣ ದಲ್ಲಿ ಕುಸಿತ ಕಂಡಿದ್ದು, ವನ್ಯಜೀವಿಗಳ ನೆರವಿಗೆ 57 ಸೋಲಾರ್ ಬೋರ್‌ವೆಲ್ ಹಾಗೂ ಆರಣ್ಯದೊಳಗಿರುವ ಮಂಗಲ ಡ್ಯಾಂ ನೆರವಿಗೆ ಬಂದಿದೆ.
ಹಲವು ವರ್ಷದಿಂದ ಬಂಡೀಪುರ ಭಾಗದಲ್ಲಿ ವಾಡಿಕೆ ಮಳೆ ಯಾಗದ ಹಿನ್ನೆಲೆಯಲ್ಲಿ ಈ ವರ್ಷ ಬರ ಗಾಲದ ಛಾಯೆ ತೀವ್ರಗೊಂಡಿದ್ದು, ಅದರ ಪ್ರಭಾವ ವನ್ಯಜೀವಿಗಳ ಮೇಲೂ ಬೀರುವ ಹಂತ ತಲುಪಿಸಿದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸೋಲಾರ್ ಬೋರ್‌ವೆಲ್‌ಗಳು ಹಾಗೂ ಕಳೆದ ಮೂರು ವರ್ಷದಿಂದ ನೀರನ್ನು ಕಾಯ್ದುಕೊಂಡಿ ರುವ ಮಂಗಲ ಡ್ಯಾಂ ವನ್ಯಜೀವಿಗಳಿಗೆ ವರದಾನವಾಗಿ ಪರಿಣಮಿಸಿದೆ.
1036 ಚ.ಕಿ.ಮೀ. ವ್ಯಾಪ್ತಿಯ ಬಂಡೀ ಪುರ ಹುಲಿ ಸಂರಕ್ಷಿತ ಪ್ರದೇಶವನ್ನು 13 ವಲಯಗಳಾಗಿ ವಿಂಗಡಿಸಲಾಗಿದ್ದು ಈಗಾಗಲೇ ವಿವಿಧ ವಲಯಗಳಲ್ಲಿ ವನ್ಯ ಜೀವಿಗಳಿಗೆ ಕುಡಿಯಲು ನೀರು ಒದಗಿದೆ 57 ಕೆರೆಗಳಿಗೆ ಕೆಲ ವರ್ಷದ ಹಿಂದೆ ಬೋರ್‌ವೆಲ್ ಕೊರೆಸಿ ಸೋಲಾರ್ ಶಕ್ತಿಯಿಂದ ಚಾಲನೆ ಗೊಳ್ಳುವ ಮೋಟಾರ್ ಅಳವಡಿಸಲಾ ಗಿತ್ತು. 2022ರವರೆಗೆ ನಿಗದಿತ ಪ್ರಮಾಣ ದಲ್ಲಿ ಅರಣ್ಯ ಭಾಗದಲ್ಲಿ ಮಳೆಯಾಗಿ ದ್ದರಿಂದ ಬಂಡೀಪುರ ಅಭಯಾರಣ್ಯ ದಲ್ಲಿ ಎಲ್ಲಾ ಕೆರೆಗಳು ತುಂಬಿದ್ದವು. ಕೆರೆಗಳು ಕೋಡಿ ಬಿದ್ದ ಪರಿಣಾಮ ಬಂಡೀಪುರ ಅರಣ್ಯದ ನಡುವೆ ಇರುವ ಮಂಗಲ ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಈ ನಡುವೆ ಸೋಲಾರ್ ಬೋರ್‌ವೆಲ್ ಗಳು ಕಾರ್ಯ ನಿರ್ವಹಣೆ ಅವಶ್ಯಕತೆ ಕ್ಷೀಣಿಸಿತ್ತು. ಆದರೆ ಈ ಬಾರಿ ಬರಗಾಲದ ಹಿನ್ನೆಲೆ
ತಮಿಳುನಾಡಿನ ಊಟಿ, ಗೊಡಲೂರು, ಮಧುಮಲೈ ಅರಣ್ಯ ಹಾಗೂ ಬಂಡೀಪುರ ವ್ಯಾಪ್ತಿಯಲ್ಲಿ ಫೆಬ್ರ ವರಿ ತಿಂಗಳ ಎರಡನೇ ವಾರದಲ್ಲಿ ವಾಡಿಕೆ ಮಳೆ ಬೀಳಬೇಕಾಗಿತ್ತು. ಆದರೆ ಈ ಬಾರಿ ಫೆಬ್ರವರಿ ತಿಂಗಳ ವಾಡಿಕೆ ಮಳೆ ಬಂದಿಲ್ಲದ ಕಾರಣ ಸಮಸ್ಯೆ ಬಿಗಡಾಯಿಸುವ ಹಂತಕ್ಕೆ ತಲುಪಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೋಲಾರ್ ಬೋರ್‌ವೆಲ್ ಗಳು ಪ್ರಾಣಿಗಳ ಹಿತ ಕಾಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಬಂಡೀಪುರ ಅರಣ್ಯ ದಲ್ಲಿ ಪ್ರಾಣಿಗಳು ಹೆಚ್ಚು ಅವಲಂಬಿಸಿ ರುವ 57 ಕೆರೆಗಳಿಗೆ ಸೋಲಾರ್ ಬೋರ್‌ವೆಲ್ ಅಳವಡಿಸ
ಲಾಗಿತ್ತು ಅವು ಗಳಲ್ಲಿ ಈ ಬಾರಿ 20 ಸೋಲಾರ್ ಬೋರ್‌ವೆಲ್‌ಗಳು ಕೆಟ್ಟಿದ್ದವು. ಇದರಿಂದಸಾಧ್ಯವಾಗದೇ ಸಮಸ್ಯೆ ಉಲ್ಬಣವಾಗುವುದನ್ನು ಗಮನಿ ಸಿದ ಅಧಿಕಾರಿಗಳು ಕೆಟ್ಟಿದ್ದ ಬೋರ್ ವೆಲ್‌ಗಳನ್ನು ಮರಸ್ತಿಪಡಿಸಲು ಕ್ರಮ ಕೈಗೊಂಡಿದ್ದಾರೆ. 15 ಬೋರ್‌ವೆಲ್ ಗಳನ್ನು ದುರಸ್ತಿ ಮಾಡಲಾಗಿದ್ದು, ಕೆರೆಗೆ ನೀರುಣಿಸುವ ಪ್ರಕ್ರಿಯೆ ಪುನರಾರಂಭಿಸಿ ಲಾಗಿದೆ. ಉಳಿದ ಬೋರ್‌ವೆಲ್‌ಗಳಲ್ಲಿ ಇನ್ನೆರಡು ದಿನದಲ್ಲಿ ದುರಸ್ತಿ ಮಾಡಲಾಗು ತ್ತಿದೆ. ಮಾರ್ಚ್ ಆರಂಭದ ವೇಳೆಗೆ ಎಲ್ಲಾ ಸೋಲಾರ್ ಬೋರ್‌ವೆಲ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡ ಲಿದ್ದು, ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ಕೊರತೆ ನೀಗಿಸುವಲ್ಲಿ ಸಹಕಾರಿಯಾಗಲಿದೆ. ಮಂಗಲ ಡ್ಯಾಂ: ಅರಣ್ಯ ಪ್ರದೇಶದಲ್ಲಿ ರುವ ಮಂಗಲ ಡ್ಯಾಂನಲ್ಲಿ ನೀರಿನ ಸಂಗ್ರಹ ಹೆಚ್ಚಾಗಿರುವುದರಿಂದ ಆನೆ
ಬೇಸಿಗೆಯಲ್ಲಿ ಆನೆಗಳ ಹಿಂಡು ನುಗು ಹಾಗೂ ಕಬಿನಿ ಹಿನ್ನೀರಿನತ್ತ ವಲಸೆ ಹೋಗುವುದು ಸಂಪ್ರದಾಯ. ಆದರೆ ಚಿಕ್ಕ ಚಿಕ್ಕ ಮರಿಗಳನ್ನು ಹೊಂದಿರುವ ಆನೆಗಳು ಅಷ್ಟು ದೂರ ಮರಿಗಳನ್ನು ಕರೆದುಕೊಂಡು ಹೋಗಲು ಸಾಧ್ಯವಾಗು ವುದಿಲ್ಲ. ಬೇಸಿಗೆಯ ಬೇಗೆಯಲ್ಲಿ ಹೆಚ್ಚು ದೂರ ಮರಿಗಳು ಕ್ರಮಿಸಿದರೆ ಅವುಗಳು ದೇಹದಲ್ಲಿ ನೀರಿನ ಅಂಶದ ಕೊರತೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನೀರು ಇರುವ ಕೆರೆಗಳ ಸುತ್ತಮುತ್ತಲಿನಲ್ಲೇ ಮರಿ ಗಳೊಂದಿಗೆ ವಾಸಿಸುತ್ತವೆ. ಈ ಹಿನ್ನೆಲೆ ಯಲ್ಲಿ ಮಂಗಲ ಡ್ಯಾಂ ಆನೆ ಸೇರಿದಂತೆ ಸಸ್ಯಾಹಾರಿ ಪ್ರಾಣಿಗಳಿಗೆ ವರದಾನವಾಗಿ ಪರಿಣಮಿಸಿದೆ.
ಬೋರ್‌ವೆಲ್ ಗಳನ್ನು ದುರಸ್ತಿ ಮಾಡಿ ಕೆರೆಗಳಿಗೆ ನೀರುಣಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಉಳಿದ 5 ಬೋರ್‌ವೆಲ್‌ಗಳನ್ನು ದುರಸ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವೇ ಎಲ್ಲಾ 57 ಸೋಲಾರ್ ಬೋರ್‌ವೆಲ್‌ಗಳು ಕೆರೆಗಳಿಗೆ ನೀರು ಸರಬರಾಜು ಮಾಡುವ ಕಾರ್ಯ ಆರಂಭಿಸಲಿದೆ. ಬಂಡೀಪುರ ಅರಣ್ಯದಲ್ಲಿರುವ ಹಲವು ಕೆರೆಗಳಲ್ಲಿ ಇನ್ನೂ ನೀರು ಇರುವುದರಿಂದ ಈ ಬಾರಿ ಪ್ರಾಣಿಗಳಿಗೆ ನೀರಿನ ಕೊರತೆ ಉಂಟಾಗುವುದಿಲ್ಲ ಎಂಬ ಭಾವನೆ ನಮ್ಮಲ್ಲಿದೆ. ಮಂಗಲ ಡ್ಯಾಂ. ನುಗು ಹಾಗೂ ಕಬಿನಿ ಡ್ಯಾಂನ ಹಿನ್ನೀರಿನ ಪ್ರದೇಶವನ್ನು ಆನೆ ಸೇರಿದಂತೆ ಇತರ ಪ್ರಾಣಿಗಳು ಅವಲಂಬಿಸಿರುವುದರಿಂದ ನೀರಿನ ಕೊರತೆ ಉಂಟಾಗುವುದಿಲ್ಲ ಎಂದು -ಡಾ.ಪಿ.ರಮೇಶ್ ಕುಮಾರ್, ನಿರ್ದೇಶಕ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ತಿಳಿಸಿದ್ದಾರೆ