ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್(National Fertilizers Limited- NFL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಕ್ಟೋಬರ್ 20, 2021ರಂದು ನೇಮಕಾತಿ ಅಧಿಸೂಚನೆ(Notification)ಯನ್ನು ಬಿಡುಗಡೆ ಮಾಡಿದೆ. 183 ನಾನ್-ಎಕ್ಸಿಕ್ಯುಟಿವ್(Non-Executive) ಹುದ್ದೆಗಳಿಗೆ ಆನ್ಲೈನ್(Online) ಅರ್ಜಿ ಪ್ರಕ್ರಿಯೆ ಇಂದು ಆರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎನ್ಎಫ್ಎಲ್(NFL)ನ ಅಧಿಕೃತ ವೆಬ್ಸೈಟ್, nationalfertilizers.com ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ನೋಂದಣಿ(Registration) ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕ ನವೆಂಬರ್ 10, 2021.

ಸದ್ಯ ಖಾಲಿ ಇರುವ ಹುದ್ದೆಗಳ ಸಂಖ್ಯೆಯು ತಾತ್ಕಾಲಿಕವಾಗಿದೆ. NFLನ ವಿವೇಚನೆಯಿಂದ ಮತ್ತು ಅಧ್ಯಕ್ಷೀಯ ನಿರ್ದೇಶನಗಳ ಅನುಸಾರವಾಗಿ ಹುದ್ದೆಗಳ ಸಂಖ್ಯೆಯು ಬದಲಾಗಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ |
ಹುದ್ದೆಯ ಹೆಸರು | ನಾನ್-ಎಕ್ಸಿಕ್ಯುಟಿವ್ ಹುದ್ದೆಗಳು |
ಹುದ್ದೆಗಳ ಸಂಖ್ಯೆ | 183 |
ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ | 21/10/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 10/11/2021 |
ಸಂಬಳ | ಮಾಸಿಕ ₹ 20,000-50,000 |
ವಿದ್ಯಾರ್ಹತೆ | ಪದವಿ, ITI, Diploma |