ಇತ್ತೀಚಿನ ಸುದ್ದಿ
Trending

ಲೋಕಸರ ನಾಲೆ *ಭಾಗದ ರೈತರು ಮುಂಗಾರು ಕೃಷಿ ಚಟುವಟಿಕೆಯನ್ನು ಮುಂದಿನ ತಿಂಗಳ ನಂತರ ಆರಂಭಿಸಿ ಶಾಸಕ ಕೆ.ಎಂ ಉದಯ್

ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿನ ಲೋಕಸರ ನಾಲಾ ಭಾಗದ ರೈತರ ಅನುಕೂಲಕ್ಕಾಗಿ ನಾಲೆಗೆ ಹೊಸ ಸ್ಪರ್ಷ ನೀಡಿ ಆಧುನೀಕರಣಗೊಳಿಸುವ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಈಗಾಗಲೇ ಆರಂಭಿಸಿದ್ದು ಕಾಮಗರಿಯೂ ಪ್ರಗತಿಯಲ್ಲಿದ್ದು ಈ ಭಾಗದ ರೈತರು ಮುಂಗಾರು ಕೃಷಿ ಚಟುವಟಿಕೆಯನ್ನು ಒಂದು ತಿಂಗಳ ನಂತರ ಆರಂಭಿಸಿದರೆ ರೈತರಿಗೆ ಸುಗಮವಾಗಿ ನೀರು ಸರಬರಾಜಾಗಿ ಬೆಳೆಗಳನ್ನು ಬೆಳೆಯಲು ಅನುಕೂಲವಾಗುತ್ತದೆ ಎಂದು ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ ಉದಯ್ ರವರು ತಿಳಿಸಿದರು.

ಚಿಕ್ಕರಸಿಕೆರೆ ಹೋಬಳಿಯ ಸಬ್ಬನಹಳ್ಳಿ ಮತ್ತು ಯಡಗನಹಳ್ಳಿ ಗ್ರಾಮಗಳ ಹತ್ತಿರದ ನಾಲೆ ಅಭಿವೃದ್ಧಿ ಕಾವೇರಿ ನೀರಾವರಿ ನಿಗಮ ನಿಯಮಿತದ ಲೋಕಸರ ಶಾಖಾ ನಾಲೆಯ ಅಡಿಯಲ್ಲಿ ಬರುವ 6.15 ಕಿ.ಮೀ. ರಿಂದ 10.60 ಕಿ.ಮೀ. ವರೆಗೆ (ಸುಮಾರು 4.5 ಕಿ.ಮೀ.) ಕಾಮಗಾರಿ ನಡೆಯುವ ಸ್ಥಳಕ್ಕೆ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೆ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಂ ಉದಯ್ ರವರು ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರದಿಂದ ಸುಮಾರು 22 ಕೋಟಿ ವೆಚ್ಚದ ಯೋಜನೆಯಡಿಯಲ್ಲಿ ನಾಲೆಯ ಕಾಮಗಾರಿಯನ್ನು ಆರಂಭಿಸಿದ್ದು ಕಾಮಗಾರಿಯಲ್ಲಿ ಕಟ್ ಅಂಡ್ ಕವರ್ ಪದ್ದತಿಯ ಕಾಲುವೆ ನಿರ್ಮಾಣ, ಆರ್‌ಸಿಸಿ ಟ್ರಫ್, ಮತ್ತು ಅಡ್ಡಮೋರಿ ನಿರ್ಮಾಣ ಕಾರ್ಯಗಳು ತೀವ್ರ ಗತಿಯಲ್ಲಿ ನಡೆಯುತ್ತಿದ್ದು,ರೈತರಿಗೆ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ತ್ವರಿತವಾಗಿ ಸುಮಾರು ಎರಡು ತಿಂಗಳ ಅವಧಿಯಲ್ಲಿ ನಾಲಾ ಕಾಮಗಾರಿಯನ್ನು ಪೂರ್ಣಗೊಳಿಸುವ ಭರವಸೆಯನ್ನು ನೀಡಿದರು.

ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆಧಾರನ ಜೊತೆಗೂಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲನೆ ನಡೆಸಿ ಗುಣಮಟ್ಟ ಹಾಗೂ ತಾಂತ್ರಿಕ ಅಡಚಣೆಗಳ ಕುರಿತು ಚರ್ಚೆ ನಡೆಸಿದ್ದೇನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನೀಡಿದ್ದಾರೆ ಎಂದು ತಿಳಿಸಿದರು.

ಲೋಕಸರ ನಾಲೆಯ ಕೊನೆಯ ಭಾಗದ ರೈತರಿಗೆ ನೀರು ಸರಬರಾಜುಯಾಗದೆ ಬಹಳಷ್ಟು ತೊಂದರೆ ಉಂಟಾಗುತ್ತಿದ್ದು ರೈತರು ಹಾಗೂ ಕೊನೆಯ ಭಾಗದ ಗ್ರಾಮಸ್ಥರ ಸಾಕಷ್ಟು ಬಾರಿ ನನಗೆ ಮನವಿ ನೀಡಿದ್ದು ಅವರ ಸಂಕಷ್ಟವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಾಲಾ ಅಧುನಿಕರಣ ಕಾಮಗಾರಿಗೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ಧಿ ಪಡಿಸುತ್ತಿದ್ದೇನೆ.

ಈ ಕಾಮಗಾರಿ ಪೂರ್ಣಗೊಂಡ ನಂತರ, ಈಭಾಗದ ರೈತರಿಗೆ ಹಾಗೂ ಕೊನೆಯ ಭಾಗದ ರೈತರಿಗೆ ಸರಾಗವಾಗಿ ನೀರು ಸರಬರಾಜಾಗಿ ಕೃಷಿ ಚಟುವಟಿಕೆಯಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಅಲ್ಲದೆ ಗ್ರಾಮಸ್ಥರಿಗೆ ಮುಕ್ತ ಜಲವಿತರಣೆಯಿಂದ ಕೃಷಿಗೆ ಸುಧಾರಿತ ಬೆಂಬಲ ಲಭಿಸಲಿದೆ. ಜಲಾನಯನ ವ್ಯವಸ್ಥೆ ಸುಧಾರಿತವಾಗುವ ಮೂಲಕ, ಉತ್ಪಾದಕತೆ ಹೆಚ್ಚಳ ಮತ್ತು ನೀರಿನ ಸಮರ್ಪಕ ಬಳಕೆ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರಾದ ರಾಘುರಾಮನ್, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಣ್ಣೂರು ರಾಜೀವ್,ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚೆಲುವರಾಜು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಬಿ.ಬಸವರಾಜು,ಕಾವೇರಿ ನೀರಾವರಿ ನಿಗಮದ ಎಇಇ ರಾಜೇಶ್, ಎಇ ನವೀನ್ ,ಗುತ್ತಿಗೆದಾರ ಹರೀಶ್,ಮುಖಂಡರಾದ ಕರಡಕೆರೆ ಮನು,ಯಡಗನಹಳ್ಳಿ ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button