ಇತ್ತೀಚಿನ ಸುದ್ದಿರಾಜಕೀಯಸುದ್ದಿ

ಲೋಕಸಭಾ ಚುನಾವಣೆ ಬಹಿಷ್ಕಾರ ಹಾಕಲು ಗ್ರಾಮಸ್ಥರು ನಿರ್ಧಾರ

ಮಾಲೂರು:- ಗ್ರಾಮಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ತೊರ‍್ನಹಳ್ಳಿ, ಬೈರನಹಳ್ಳಿ, ಸೊಣ್ಣನಾಯಕನಹಳ್ಳಿ ಹಾಗೂ ಬಂಡೆಗುಡಿಸಲು ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಘೋಷಣೆಗಳನ್ನು ಕೂಗುತ್ತಾ ತೊರ‍್ನಹಳ್ಳಿಯಲ್ಲಿ ಮೆರವಣಿಗೆ ನಡೆಸಿದರು.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ತೊರ‍್ನಹಳ್ಳಿ, ಬೈರನಹಳ್ಳಿ, ಸೊಣ್ಣನಾಯಕನಹಳ್ಳಿ ಗ್ರಾಮದಲ್ಲಿ ಹೆಚ್ಚಾಗಿ ರೈತರು ಇದ್ದು, ಕೆ ಸಿ ವ್ಯಾಲಿ ನೀರನ್ನು ಈ ಗ್ರಾಮಗಳ ಕೆರೆಗಳಿಗೆ ಹರಿಸಬೇಕು ಎಂದು ಟಿ.ಎಂ.ಶ್ರೀನಿವಾಸ್ ತಿಳಿಸಿದ್ದಾರೆ.

ಈ ಗ್ರಾಮಗಳಲ್ಲಿ ರೈತರು ಹೆಚ್ಚಾಗಿ ಹೂವುಗಳು, ತರಕಾರಿಗಳನ್ನು ಬೆಳೆಯುತ್ತಿದ್ದು, ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಕೆಸಿ ವ್ಯಾಲಿ ಯೋಜನೆ ಕೋಲಾರ ಜಿಲ್ಲೆಯ ನಮಗೆ ಏಕಿಲ್ಲ, ನಮ್ಮ ಗ್ರಾಮಗಳಿಗೆ ಹತ್ತಿರದಲ್ಲೇ ಕೆಸಿ ವ್ಯಾಲಿ ಪೈಪ್ ಲೈನ್ ಹಾದು ಹೋಗಿದ್ದು ಕೂಡಲೇ ನಮ್ಮ ಗ್ರಾಮಗಳ ಕೆರೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಇಲ್ಲವಾದರೆ ಶುಕ್ರವಾರ ನಡೆಯುವ ಲೋಕಸಭಾ ಚುನಾವಣೆ-2024 ಅನ್ನು ಬಹಿಷ್ಕಾರ ಮಾಡುವುದಾಗಿ ತಿಳಿಸಿದರು. ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಸಹ ಯಾರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದರು.

ಪ್ರಗತಿಪರ ರೈತ ರೋಜ ರಾಜಪ್ಪ ಮಾತನಾಡಿ
ಭೂಮಿಯಲ್ಲಿ ಸಾವಿರಾರು ಅಡಿ ತೋಡಿದರು ಅಂತರ್ಜಲ ಇಲ್ಲವಾಗಿದೆ. ಬೆಳೆ ಬೆಳೆಯಲು ರೈತರು ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಕೋಲಾರ ಜಿಲ್ಲೆಯಲ್ಲಿ ರೈತರಿಗಾಗಿ ಕೆಸಿ ವ್ಯಾಲಿ ಯೋಜನೆ ಇರುವುದು. ಅದನ್ನು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ತೊರ‍್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬೈರನಹಳ್ಳಿ, ಸೊಣ್ಣನಾಯಕನಹಳ್ಳಿ ಕೆರೆಗಳಿಗೆ ಇಲ್ಲವಾಗಿದೆ. ಮಳೆ ಇಲ್ಲದೆ ಈ ಪ್ರದೇಶದಲ್ಲಿ ರೈತರು ತಮ್ಮ ಬೆಳೆಗಳಿಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ ಎಂದರು. ತೊರ‍್ನಹಳ್ಳಿ ಗ್ರಾಮದಿಂದ ಚಿಕ್ಕನಹಳ್ಳಿ ಗೇಟ್ 2.ಕಿ.ಮೀ ದೂರದಲ್ಲಿದೆ. ತಾವರೆಕೆರೆ 2.5.ಕಿ.ಮೀ ದೂರದಲ್ಲಿದ್ದು ಕೆಸಿ ವ್ಯಾಲಿ ನೀರನ್ನು ಹರಿಸಬಹುದಿತ್ತು ಎಂದರು.

ಸಂಬಂದಧಪಟ್ಟ ಅಧಿಕಾರಿಗಳು, ಜಿಲ್ಲಾಡಳಿತ ಶೀಘ್ರವಾಗಿ ಕೆಸಿ ವ್ಯಾಲಿ ನೀರನ್ನು ತೊರ‍್ನಹಳ್ಳಿ, ಬೈರನಹಳ್ಳಿ, ಸೊಣ್ಣನಾಯಕನಹಳ್ಳಿ ಹಾಗೂ ಬಂಡೆಗುಡಿಸಲು ಕೆರೆಗಳಿಗೆ ಹರಿಸಬೇಕು ಎಂದು ಒತ್ತಾಯಿಸಿ ಕಳೆದ ಸುಮಾರು 10 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರು ಯಾವೊಬ್ಬ ಅಧಿಕಾರಿಯು ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ 3 ಗ್ರಾಮಗಳ ಗ್ರಾಮಸ್ಥರುಗಳು ಶುಕ್ರವಾರ ನಡೆಯಲಿರುವ ಮತದಾನವನ್ನು ಬಹಿಷ್ಕಾರ ಮಾಡಲು ನಿರ್ಧಾರ ಮಾಡಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಜೆ.ಎನ್.ನಾರಾಯಣಪ್ಪ, ಟಿ.ಆರ್ ರಮೇಶ್ ಬಾಬು, ಬಿ.ಎಂ.ಶ್ರೀನಿವಾಸ್, ರೋಜರಾಜಪ್ಪ, ಚಿಕ್ಕ ಮಲ್ಲೇಶ್, ಬಿ.ಎಂ.ಶ್ರೀನಿವಾಸ್. ಶ್ರನಿವಾಸ್, ನಾರಾಯಣಪ್ಪ, ಆನಂದ್, ಪೆರುಮಾಳಪ್ಪ, ಸಿ.ಮುನಿರಾಜು, ಶಶಿಕುಮಾರ್, ಶಿವಶಂಕರ್, ಪುರಿ ಮಂಜು, ಮಂಜುನಾಥ್.ಸಿ ಸೇರಿದಂತೆ ಗ್ರಾಮಸ್ಥರು ಇದ್ದರು.

Related Articles

Leave a Reply

Your email address will not be published. Required fields are marked *

Back to top button