ವಿದೇಶ

ಲಸಿಕೆ ಪಡೆದವರಿಗೆ ಕೆಲಸ..! ಆಸ್ಟ್ರೇಲಿಯಾ ನಿರ್ಧಾರದ ವಿರುದ್ಧ ಬೀದಿಗಿಳಿದ ಜನ

ಆಸ್ಟ್ರೇಲಿಯಾದಲ್ಲಿ, ಕಳೆದ 20 ದಿನಗಳಿಂದ ಪ್ರತಿದಿನ 1600 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ದಿನನಿತ್ಯ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ದೊಡ್ಡ ನಗರಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿಯಾಗಿದೆ. ಆದರೆ ಕೆಲವು ನಗರಗಳಲ್ಲಿ, ಲಸಿಕೆ ಪಡೆದ ಉದ್ಯೋಗಿಗಳಿಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ.

ನಿರ್ಮಾಣ ಸಂಸ್ಥೆಯ ಸಾವಿರಾರು ಉದ್ಯೋಗಿಗಳು ಸರ್ಕಾರದ ಈ ನಿರ್ಧಾರ ವಿರೋಧಿಸಿ ಬೀದಿಗಿಳಿದಿದ್ದಾರೆ. ಲಸಿಕೆಯ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ನಿರ್ಮಾಣ ಸಂಸ್ಥೆಯ ಸಾವಿರಾರು ಉದ್ಯೋಗಿಗಳು ಸರ್ಕಾರದ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಬೀದಿಗಿಳಿದ್ದರು. ಲಸಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಕೊರೊನಾ ಎರಡು ಲಸಿಕೆ ಪಡೆದವರಿಗೆ ಮಾತ್ರ ಕೆಲಸಕ್ಕೆ ಅವಕಾಶ ನೀಡಲಾಗಿದೆ. ಲಾಕ್ ಡೌನ್ ನಿಂದಾಗಿ ಅನೇಕರು ಸಮಸ್ಯೆಯಲ್ಲಿದ್ದಾರೆ. ಆರ್ಥಿಕ ನಷ್ಟ ಎದುರಿಸುತ್ತಿದ್ದಾರೆ. ಬುಧವಾರ ಮೆಲ್ಬೋರ್ನ್‌ನಲ್ಲಿ ಪ್ರತಿಭಟನೆ ತೀವ್ರಗೊಂಡ ನಂತ್ರ, ಪೊಲೀಸರು ರಬ್ಬರ್ ಗುಂಡುಗಳ ಪ್ರಯೋಗ ಮಾಡಿದ್ದರು. ಅನೇಕನ್ನು ಬಂಧಿಸಲಾಗಿದೆ.

ಇನ್ನು ಚೀನಾದ ಹರ್ಬಿನ್‌ನಲ್ಲಿ ಮೂರು ಪ್ರಕರಣ ವರದಿಯಾಗ್ತಿದ್ದಂತೆ ಜಿಮ್‌ಗಳು, ಅಂಗಡಿಗಳು ಮತ್ತು ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಡೆಲ್ಟಾ ರೂಪಾಂತರವು 185 ದೇಶಗಳಿಗೆ ಹರಡಿದೆ. ಇದು ಅಮೆರಿಕದಲ್ಲಿ ಅವಾಂತರಕ್ಕೆ ಕಾರಣವಾಗಿದೆ. ಇಲ್ಲಿ ಪ್ರತಿನಿತ್ಯ ಎರಡು ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button