ಲವ್ ಮಾಕ್ಟೈಲ್ 2 ಕೇವಲ ಸಿನಿಮಾವಲ್ಲ, ಜೀವನದ ಪಾಠ!
ಸ್ಯಾಂಡಲ್ವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಸೀಕ್ವೆಲ್ ಸಿನಿಮಾಗಳು ಬಂದಿವೆ. ಆದರೆ, ಸೀಕ್ವೆಲ್ ಮಾಡಿ ಗೆದ್ದ ಸಿನಿಮಾಗಳು ಮಾತ್ರ ಬೆರಳಣಿಕೆಯಷ್ಟು. ಹೌದು, ಮೊದಲ ಭಾಗಕ್ಕೂ, ಎರಡನೇ ಭಾಗಕ್ಕೂ ಕೊಂಚ ವ್ಯತ್ಯಾಸ ಇದ್ದರೂ ಸಿನಿಮಾ ಸಕ್ಸಸ್ ಕಾಣುವುದಿಲ್ಲ. ಸದ್ಯ ಕನ್ನಡದಲ್ಲಿ ರಿಲೀಸ್ ಆಗಿರುವ ‘ಲವ್ ಮಾಕ್ಟೇಲ್ 2’ ಸಿನಿಮಾ ಕೂಡ ಸೀಕ್ವೆಲ್ ಎಂಬ ಕಾರಣಕ್ಕೆ ಹೆಚ್ಚು ಹೈಪ್ ಸೃಷ್ಟಿಸಿತ್ತು. ಮೊದಲನೇ ಪಾರ್ಟ್ನಲ್ಲಿ ಇದ್ದ ಬಹುತೇಕ ಎಲ್ಲ ಪಾತ್ರಗಳು ಈಗ ಎರಡನೇ ಪಾರ್ಟ್ನಲ್ಲಿ ಮುಂದುವರಿದಿತ್ತು. ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಕೂಡ ಪಡೆದುಕೊಂಡಿತ್ತು. ಫೆಬ್ರವರಿ 11 ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಇದೀಗ ಒಂದು ತಿಂಗಳಅಂತರದಲ್ಲೇ ಅಮೇಜಾನ್ ಪ್ರೈಮ್ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಮಾರ್ಚ 15 ರಿಂದ ಈ ಸಿನಿಮಾ ಅಮೇಜಾನ್ ಪ್ರೈಮ್ನಲ್ಲಿ ಲಭ್ಯವಿದೆ.
ದಿಢೀರ್ ಅಮೇಜಾನ್ ಪ್ರೈಮ್ಗೆ ಬಂದ ಲವ್ ಮಾಕ್ಟೈಲ್ 2!
ಹೌದು, ಯಾರಿಗೂ ಇಷ್ಟು ಬೇಗ ಈ ಸಿನಿಮಾ ಒಟಿಟಿಗೆ ಬರುತ್ತೆ ಅಂತ ತಿಳಿದಿರಲಿಲ್ಲ. ಅದರಲ್ಲೂ ಚಿತ್ರದ ನಾಯಕ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಹಾಗೂ ನಾಯಕ ನಟಿ ಮತ್ತು ನಿರ್ಮಾಪಕಿ ಮಿಲನ ನಾಗರಾಜ್ ಕೂಡ ಯಾವುದೇ ಮಾಹಿತಿ ಬಿಟ್ಟು ಕೊಟ್ಟಿರಲಿಲ್ಲ. ಮಾರ್ಚ್ 14 ರಂದು ಈ ಘೋಷಣೆ ಮಾಡಲಾಗಿದೆ. ಇನ್ನೂ ಈ ವಿಚಾರ ತಿಳಿದು ಎಲ್ಲರೂ ಬೆಳ್ಳಂಬೆಳಿಗ್ಗೆ ಟಿವಿ ಮುಂದೆ ಕೂತಿದ್ದಾರೆ. ಅಮೇಜಾನ್ ಪ್ರೈಮ್ನಲ್ಲಿ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಲವ್ ಮಾಕ್ಟೈಲ್ 1ರಲ್ಲಿ ಮಾಡಿದ್ದ ಮೋಡಿಯನ್ನೇ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಲವ್ ಮಾಕ್ಟೈಲ್ 2 ಸಿನಿಮಾದಲ್ಲಿ ಮಾಡಿದ್ದರು. ಕೇವಲ ಒಂದು ತಿಂಗಳ ಅಂತರದಲ್ಲಿ ಓಟಿಟಿಗೆ ಈ ಸಿನಿಮಾ ಬಂದಿದೆ.
ಲವ್ ಮಾಕ್ಟೈಲ್ 2 ನಲ್ಲಿದೆ ಜೀವನದ ಪಾಠ!
ಪ್ರಪಂಚದಲ್ಲಿ ಎಲ್ಲರಿಗೂ ಪ್ರೀತಿಯ ಅನುಭವವಾಗಿರುತ್ತೆ. ಆದರೆ, ನಾವು ಪ್ರೀತಿಸಿದವರು ಒಪ್ಪದಿದ್ದಾಗ, ಅಥವಾ ಬೇರೆ ಕಾರಣಗಳಿಂದ ದೂರಾದಾಗ ಬೇಸರಗೊಳ್ಳುತ್ತಾರೆ. ತಮ್ಮ ಜೀವನವನ್ನೇ ಮುಗಿಸಿಕೊಳ್ಳುವಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಂಥವರಿಗೆ ಈ ಲವ್ ಮಾಕ್ಟೈಲ್ 2 ಸಿನಿಮಾ ಒಳ್ಳೆ ಪಾಠ ಎಂದರೆ ತಪ್ಪಾಗಲಾರದು. ಲವ್ ಮಾಡೋದು ಅಷ್ಟೇ ಅಲ್ಲ. ಬ್ರೇಕಪ್ ಆದಮೇಲೆ ಬದುಕುವುದನ್ನು ಲವ್ ಮಾಕ್ಟೈಲ್ ಚಿತ್ರ ತೋರಿಸಿಕೊಟ್ಟಿದೆ. ಇನ್ನು ಲವ್ ಮಾಕ್ಟೈಲ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ರೇಚೆಲ್ ಡೇವಿಡ್, ಸುಷ್ಮಿತಾ ಗೌಡ, ಅಭಿಲಾಷ್, ಖುಷಿ, ಅಮೃತಾ ಬಣ್ಣ ಹಚ್ಚಿದ್ದಾರೆ. ಎಲ್ಲರೂ ಕೂಡ ನಟನೆಯಿಂದ ಗಮನ ಸೆಳೆಯುತ್ತಾರೆ.
ಕಮಾಲ್ ಮಾಡಿದ್ದ ಲವ್ ಮಾಕ್ಟೈಲ್ 1!
2020ರ ಆರಂಭದಲ್ಲಿ ರಿಲೀಸ್ ಆದ ‘ಲವ್ ಮಾಕ್ಟೇಲ್’ಸಿನಿಮಾ ಸೂಪರ್ ಹಿಟ್ ಆಗಿತ್ತು. ರಿಲೀಸ್ ಆದ ದಿನ ಚಿತ್ರಮಂದಿರಗಳಿಗೆ ಜನ ಬರಲಿಲ್ಲ. ದಿನಗಳೆದಂತೆ ಈ ಸಿನಿಮಾ ಮಾಡಿದ ಕ್ರೇಜ್ ಇದೆಯಲ್ಲಾ, ಯಾವ ಕನ್ನಡ ಸಿನಿಮಾಗೂ ಆಗಿಲ್ಲ. ಸಿನಿಮಾ ಸೋತೇ ಹೋಯಿತು ಅಂದುಕೊಳ್ಳುವಾಗಲೇ ಲವ್ಮಾಕ್ಟೈಲ್ ಸೂಪರ್ ಡೂಪರ್ ಹಿಟ್ ಆಗಿತ್ತು. ನೋಡ ನೋಡುತ್ತಲೇ ಚಿತ್ರ ಬಾಕ್ಸಾಫೀಸ್ನಲ್ಲಿ ಕಮಾಲ್ ಮಾಡಿತ್ತು. ಲವ್ ಮಾಕ್ಟೈಲ್ 2 ಸಿನಿಮಾ ಕೂಡ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಮಾಲ್ ಮಾಡಿತ್ತು.