ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋನಲ್ಲಿ (Lucknow, Uttar Pradesh) ಯುವತಿಯರಿಬ್ಬರು ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್ (viral Video) ಆಗಿದೆ. ಲಕ್ನೋ ನಗರದ ಬಾರಾಬಿರ್ವಾ ಚೌರ್ಹೆ ಬಳಿಯಲ್ಲಿರುವ ಹೋಟೆಲ್ ಮುಂಭಾಗ ಯುವತಿಯರು ಜಗಳ ಮಾಡಿಕೊಂಡಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ವಿಡಿಯೋದಲ್ಲಿ ಒಬ್ಬರಿಗೊಬ್ಬರು ಒದೆಯೋದು, ಮುಖಕ್ಕೆ ಪಂಚ್ ಕೊಡುತ್ತಿರೋದನ್ನ ನೋಡಬಹುದಾಗಿದೆ. ತಮ್ಮ ಪ್ರೇಮಿಗಾಗಿ ಮಾಜಿ ಗೆಳತಿ ಮತ್ತು ಹಾಲಿ ಗೆಳತಿ ನಡುವೆ ಜಗಳ ನಡೆದಿದೆ. ಒಬ್ಬನಿಗಾಗಿ ಇಬ್ಬರು ಕಿತ್ತಾಡಿಕೊಂಡಿರುವ ವಿಡಿಯೋ ಸುನಾಮಿಯಂತೆ ವೈರಲ್ ಆಗುತ್ತಿದೆ.
ಕಾರ್ ನಲ್ಲಿ ಬಂದಿದ್ದ ಮಾಜಿ ಗೆಳತಿ:

ಸೋಮವಾರ ರಾತ್ರಿ ಕಾರ್ ನಲ್ಲಿ ಬಂದಿದ್ದ ಯುವತಿ (Ex-girlfriend)ಸ್ಕೈ ಹಿಲ್ಟನ್ ಹೋಟೆಲ್ ಮುಂಭಾಗದಲ್ಲಿಯೇ ಕಾಯುತ್ತಾ ನಿಂತಿದ್ದಳು. ಹೋಟೆಲ್ ನಿಂದ ರಾಬಿನ್ ಎಂಬಾತ ತನ್ನ ಗೆಳತಿ ಜೊತೆ ಹೊರಗೆ ಬಂದಿದ್ದಾನೆ. ಈ ವೇಳೆ ಇಬ್ಬರ ನಡುವೆ ಆರಂಭವಾದ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಶುರುವಾಯ್ತು ಹೊಡಿ ಬಡಿ, ಎಫ್ಐಆರ್ ದಾಖಲು
ಮೊದಲೇ ತನ್ನ ಪ್ರಿಯಕರ ಹೋಟೆಲ್ ನಲ್ಲಿರೋದು ಖಚಿತ ಪಡಿಸಿಕೊಂಡಿದ್ದ ಯುವತಿ, ಆತ ಹೊರಗೆ ಬರುತ್ತಲೇ ಕಾರ್ ನಿಂದ ಇಳಿದು ಗಲಾಟೆ ಶುರು ಮಾಡಿದ್ದಾಳೆ. ಜೊತೆಗೆ ಆತನ ಜೊತೆಯಲ್ಲಿದ್ದ ಯುವತಿಯನ್ನು ಸಹ ನಿಂದಿಸಿದ್ದಾಳೆ. ಈ ವೇಳೆ ಹಾಲಿ ಗೆಳತಿಯೊಂದಿಗೆ ಆಕೆಯ ಇಬ್ಬರು ಸ್ನೇಹಿತೆಯರು ಸಹ ಬಂದಿದ್ದರು. ಮೂವರು ಜೊತೆಗೂಡಿ ಮಾಜಿ ಗೆಳತಿ ಮೇಲೆ ದಾಳಿ ನಡೆಸಿದ್ದಾರೆ. ಮೂವರಿಂದ ಹಲ್ಲೆಗೊಳಗಾದ ಮಾಜಿ ಗೆಳತಿ ರಸ್ತೆಯಲ್ಲಿಯೇ ಕುಸಿದಿದ್ದಾಳೆ. ಎಚ್ಚರವಾದ ನಂತರ ಠಾಣೆಗೆ ತೆರಳಿ ಮೂವರ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಸಂಬಂಧ ಎಫ್ಐಆರ್ ಸಹ ದಾಖಲಾಗಿದೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಹಾಲಿ ಗೆಳತಿಯನ್ನು ಬಂಧಿಸಿದ್ದಾರೆ. ಮಾಜಿ ಗೆಳತಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.