ಇತ್ತೀಚಿನ ಸುದ್ದಿ

ರೈತರು ಪ್ರಕರಣ ವಾಪಸ್ ಪಡೆಯಲು ಮನವಿ: ಬಿಡಿಎ ಆಯುಕ್ತರಾದ ಕುಮಾರ್ ನಾಯ್ಕ. ಜಿ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಭೂ ಸ್ವಾಧೀನ ಪ್ರಕರಣದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ ಸುಮಾರು ಹತ್ತಕ್ಕೂ ಹೆಚ್ಚು ಜನರು ಪ್ರಕರಣವನ್ನು ವಾಪಸ್ ಪಡೆಯಲು ಮುಂದಾಗಿದ್ದಾರೆ, ಸಾಮಾನ್ಯ ಜನರ ಹಿತ ದೃಷ್ಟಿಯಿಂದ ರಿಯಾಯಿತಿ ದರದಲ್ಲಿ ಸೈಟುಗಳನ್ನು ಮಾಡುವ ಕನಸು ನನಸು ಮಾಡುವಲ್ಲಿ ಬಿಡಿಎ ಕೆಲಸ ಮಾಡುತ್ತಿದೆ, ಆದುದರಿಂದ ನ್ಯಾಯಾಲಯದ ಮೆಟ್ಟಿಲೇರಿದ್ದ ರೈತರು ಪ್ರಕರಣವನ್ನು ವಾಪಸ್ ಪಡೆಯಲು ಬಿಡಿಎ ಆಯುಕ್ತ ಕುಮಾರ್ ನಾಯಕ್.ಜಿ ಮನವಿ ಮಾಡಿದ್ದಾರೆ.
ಈಗಾಗಲೇ ಬಹಳ ರೈತರು ತಾವು ನ್ಯಾಯಾಲಯದಲ್ಲಿ ದಾಖಲು ಮಾಡಿರುವ ಪ್ರಕರಣವನ್ನು 60 : 40 ಅನುಪಾತದ ಲ್ಲಿ ನಿವೇಶನ ಪಡೆಯಲು ಒಪ್ಪಿ ಪ್ರಕರಣಗಳನ್ನು ವಾಪಸ್ ಪಡೆಯಲು ಮುಂದಾಗಿದ್ದಾರೆ,ನಾಡಪ್ರಭು ಕೆಂಪೇಗೌಡ ಬಡಾವಣೆಗಾಗಿ 4041 ಎಕರೆ ಭೂಮಿಯನ್ನು ಅಧಿಸೂಚಿಸಲಾಗಿದೆ. 2800 ನೂರು ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಚಂದ್ರಶೇಖರಯ್ಯ, ನಂಜುAಡೇಶ್, ಮರಿಯಮ್ಮ, ನರಸಮ್ಮ, ರಾಜಣ್ಣ, ದಾಸೇಗೌಡ ಹಾಗೂ ವಿಜಯ್ ಅವರು ನ್ಯಾಯಾಲಯದಲ್ಲಿರುವ ಪ್ರಕರಣವನ್ನು ವಾಪಸ್ ಪಡೆಯಲು ಪ್ರಕ್ರಿಯೆ ಆರಂಭಿಸಿದ್ದಾರೆ. ಅವರಿಗೆ ಬಿಡಿಎ ನಿಯಮಗಳಿವಂತೆ ಪರಿಹಾರ ಕಲ್ಪಿಸಲಾಗುವುದು ಎಂದರು. ರೈತರು ನ್ಯಾಯಾಲಯದಲ್ಲಿರುವ ಪ್ರಕರಣವನ್ನು ವಾಪಸ್ ಪಡೆದರೆ ಬಡವಣೆ ಅಭಿವೃದ್ಧಿ ವೇಗವಾಗಿ ಮಾಡಿ ಸಾರ್ವಜನಿಕರಿಗೆ ಬೇಗ ನಿವೇಶನವನ್ನು ನೀಡಬಹುದು ಎಂದು ಅವರು ತಿಳಿಸಿದರು.


ಕೆಂಪೇಗೌಡ ಬಡಾವಣೆಯ ಮೇಲಿನ ಕೇಸುಗಳನ್ನು ಒಬ್ಬೊಬ್ಬರೇ ಹಿಂತೆಗೆದುಕೊಳ್ಳುತ್ತಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಹಲವರು ಬಿಡಿಎಗೆ ಉತ್ತಮ ಹೆಸರು ಹಾಗೂ ಸಾರ್ವಜನಿಕರ ಪರದಾಟ ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಸು ಹಾಕಿದವರು ತಿಳಿಸಿದರೆ ಈಗಾಗಲೇ ಕೆಂಪೇಗೌಡ ಲೇಔಟ್ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಡಿಎಗೆ ದೊಡ್ಡ ತಲೆನೋವಾಗಿದ್ದ ಕೇಸುಗಳನ್ನು ಸಹ ರೈತರು/ಸಾರ್ವಜನಿಕರು ವಾಪಸ್ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಬಿಡಿಎ ಆಯುಕ್ತರಾದ ಕುಮಾರ್ ನಾಯಕ್ ಹಲವು ಭಿನ್ನರ ಶಾಂತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ರೀತಿಯಲ್ಲಿ ಕೇಸು ಹಾಕಿರುವ ಎಲ್ಲರನ್ನೂ ಕೇಸ್ ವಾಪಸ್ ಪಡೆಯುವಂತೆ ಮಾಡಿದರೆ ಜನರಿಗೆ ಅನುಕೂಲವಾಗಲಿದೆ ಎಂಬುದು ಇವರ ಅಭಿಪ್ರಾಯವಾಗಿದೆ.


ಕೆಂಪೇಗೌಡ ಬಡಾವಣೆಯಲ್ಲಿ 2,635.37 ಎಕರೆ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಲಾಗುತ್ತಿದೆ. 2015-16ರಿಂದ ಈವರೆಗೆ ನಿವೇಶನಗಳ ಹಂಚಿಕೆಯಿAದ 2,053.16 ಕೋಟಿ ಸಂಗ್ರಹಿಸಲಾಗಿದೆ. ಆದರೆ, ಸ್ವಾಧಿ?ನ ಪಡಿಸಿಕೊಂಡ ಭೂಮಿಗೆ 685.17 ಕೋಟಿ ಪರಿಹಾರ ಮತ್ತು ಮೂಲಸೌಕರ್ಯ ಒದಗಿಸಲು 1,854.50 ಕೋಟಿ ಸೇರಿದಂತೆ .2,539.67 ಕೋಟಿ ಖರ್ಚು ಮಾಡುವ ಮೂಲಕ ಬಿಡಿಎ ಅಭಿವೃದ್ಧಿ ಪತದತ್ತ ಹೆಜ್ಜೆ ಹಾಕುತ್ತಿದೆ.

Related Articles

Leave a Reply

Your email address will not be published. Required fields are marked *

Back to top button