ಸಿನಿಮಾ
‘ರೈಡರ್‘ ಚಿತ್ರಕ್ಕೆ ಪೈರಸಿ ಕಾಟ..!
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಚಿತ್ರಕ್ಕೆ ಬಿಡುಗಡೆಯಾಗಿ ಎರಡನೇ ದಿನಕ್ಕೆ ಪೈರಸಿ ಕಾಟ ಎದುರಾಗಿದೆ.
ಡಿಸೆಂಬರ್ 24ರಂದು ರೈಡರ್ ಚಿತ್ರ ರಿಲೀಸ್ ಆಗಿದ್ದು, ರಾಜ್ಯಾದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೌಸ್ ಫುಲ್ ಪ್ರದರ್ಶನದ ಖುಷಿಯ ನಡುವೆ ಚಿತ್ರ ಪೈರಸಿಯಾಗಿರುವ ಕಹಿ ವಿಚಾರ ಕೂಡ ಬೆಳಕಿಗೆ ಬಂದಿದೆ.
ಮರಾಠಿ ಹಾಗೂ ತಮಿಳ್ ರಾಕರ್ಸ್ ಹೆಸರಿನಲ್ಲಿ ಕಿಡಿಗೇಡಿಗಳು ಚಿತ್ರ ಪೈರಸಿ ಮಾಡಿದ್ದು, ಟೆಲಿಗ್ರಾಂ ಸೇರಿ ವಿವಿಧ ವೆಬ್‌ಸೈಟ್‌ನಲ್ಲಿ ಹರಿ ಬಿಟ್ಟಿದ್ದಾರೆ. ಪೈರಸಿ ಬಗ್ಗೆ ಇಡೀ ಚಿತ್ರತಂಡ ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದು, ಉತ್ತಮ ರೆಸ್ಪಾನ್ಸ್ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿಜಯ ಯಾತ್ರೆ ಕೂಡ ನಡೆಸುತ್ತಿದ್ದಾರೆ.