ಗೌಟೆಂಗ್ ವಿಭಾಗದಲ್ಲಿ ಕಂಡು ಬಂದ ಹೊಸ ರೂಪಾಂತರಿಯ ಬಗ್ಗೆ ಡೇಟಾ ಕಲೆಕ್ಟ್ ಮಾಡಿದ ತಜ್ಞರ ಗುಂಪು, ಪ್ರಾಥಮಿಕ ಪುರಾವೆಗಳ ಪ್ರಕಾರ ಹೊಸ ರೂಪಾಂತರಿ ಇತರ ರೂಪಾಂತರಿಗಿಂತ ಅಪಾಯಕಾರಿ ಎಂಬುದನ್ನು ಕಂಡುಕೊಂಡಿದ್ದಾರೆ. ಇದು ಭಾರಿ ಅಪಾಯಕಾರಿ ಎಂದೂ ಸಹ ಗುರುತಿಸಿದ್ದಾರೆ.
ಇನ್ನು ಆಘಾತಕಾರಿ ವಿಷಯ ಎಂದರೆ ಕೋವಿಡ್ಗೆ ಒಳಗಾಗಿ ಚೇತರಿಸಿಕೊಂಡ ಜನರಲ್ಲಿ ಈ ಹೊಸ ರೂಪಾಂತರಿ ಮತ್ತೆ ಅನಾರೋಗ್ಯಕ್ಕೆ ಒಳಗಾಗುವಂತೆ ಮಾಡಬಹುದು. ಈ ರೂಪಾಂತರವು ಕೊರೊನಾ ವೈರಸ್ ಸ್ಪೈಕ್ ಪ್ರೋಟೀನ್‌ನಲ್ಲಿ ಸುಮಾರು 30 ಹೆಚ್ಚಿನ ಸಂಖ್ಯೆಯ ರೂಪಾಂತರಗಳನ್ನು ಹೊಂದಿರುವಂತೆ ತೋರುತ್ತಿದೆ. ಇದು ಜನರಿಗೆ ಎಷ್ಟು ಸುಲಭವಾಗಿ ಹರಡುತ್ತದೆ ಎಂಬುದರ ಮೇಲೆ ಇದರ ಕೆಟ್ಟ ಪರಿಣಾಮ ಗೊತ್ತಾಗುತ್ತದೆ.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಶರೋನ್ ಪೀಕಾಕ್, ಈ ಬಗ್ಗೆ ಮಾತನಾಡಿದ್ದು, ಇದುವರೆಗಿನ ಡೇಟಾವು ಹೊಸ ರೂಪಾಂತರವು ವರ್ಧಿತ ಪ್ರಸರಣಕ್ಕೆ ಸ್ಥಿರವಾದ ರೂಪಾಂತರಗಳನ್ನು ಹೊಂದಿದೆ ಎಂದು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಆದರೆ, ಈ ರೂಪಾಂತರಗಳ ಅಪಾಯದ ಬಗ್ಗೆ ಸ್ಪಷ್ಟವಾದ ಪರಿಣಾಮ ಗೊತ್ತಾಗಿಲ್ಲ ಎಂದೂ ಇದೇ ವೇಳೆ ಅವರು ಹೇಳಿದ್ದಾರೆ.
ವಾರ್ವಿಕ್ ವಿಶ್ವವಿದ್ಯಾನಿಲಯದ ವೈರಾಲಜಿಸ್ಟ್ ಲಾರೆನ್ಸ್ ಯಂಗ್, ಒಮಿಕ್ರೋನ್ ನಾವು ನೋಡಿದ ವೈರಸ್‌ನ ಅತ್ಯಂತ ಹೆಚ್ಚು ರೂಪಾಂತರಿತ ಆವೃತ್ತಿ ಎಂದು ವಿವರಿಸಿದ್ದಾರೆ. ಒಂದೇ ವೈರಸ್‌ನಲ್ಲಿ ಹಿಂದೆಂದೂ ನೋಡಿರದ ಸಂಭಾವ್ಯ ಆತಂಕಕಾರಿ ಬದಲಾವಣೆಗಳು ಕಂಡು ಬಂದಿವೆ ಎಂದು ಅವರು ಹೇಳಿದ್ದಾರೆ.
ರೂಪಾಂತರದ ಬಗ್ಗೆ ನಿಮಗೆಷ್ಟು ಗೊತ್ತು?
ಒಮಿಕ್ರೋನ್ ಬೀಟಾ ಮತ್ತು ಡೆಲ್ಟಾ ರೂಪಾಂತರಗಳು ಸೇರಿದಂತೆ ಹಿಂದಿನ ರೂಪಾಂತರಗಳಿಂದ ತಳೀಯವಾಗಿ ಇದು ಭಿನ್ನವಾಗಿದೆ ಎಂದು ವಿಜ್ಞಾನಿಗಳು ತಿಳಿದಿದ್ದಾರೆ. ಆದರೆ, ಈ ಆನುವಂಶಿಕ ಬದಲಾವಣೆಗಳು ಅದನ್ನು ಹೆಚ್ಚು ಹರಡುವ ಅಥವಾ ಅಪಾಯಕಾರಿಯಾಗಿಸುತ್ತದೆಯೇ ಎಂಬ ಬಗ್ಗೆ ತಿಳಿದಿಲ್ಲ. ಇಲ್ಲಿಯವರೆಗೆ, ರೂಪಾಂತರವು ಹೆಚ್ಚು ತೀವ್ರವಾದ ರೋಗವನ್ನು ಉಂಟುಮಾಡುವ ಯಾವುದೇ ಸೂಚನೆಯನ್ನೂ ಕೊಟ್ಟಿಲ್ಲ ಎಂದಿದ್ದಾರೆ.
ಒಮಿಕ್ರೋನ್ ಹೆಚ್ಚು ಸಾಂಕ್ರಾಮಿಕವಾಗಿದ್ದರೆ ಮತ್ತು ಅದರ ವಿರುದ್ಧ ಲಸಿಕೆಗಳು ಇನ್ನೂ ಪರಿಣಾಮಕಾರಿಯಾಗಿದೆಯಾ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಲು ಹೆಚ್ಚಿನ ಸಮಯಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು.
ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ಪ್ರಾಯೋಗಿಕ ಔಷಧದ ಪ್ರಾಧ್ಯಾಪಕ ಪೀಟರ್ ಓಪನ್‌ಶಾ ಮಾತನಾಡಿ, ಪ್ರಸ್ತುತ ಲಸಿಕೆಗಳು ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಈಗಲೇ ಹೇಳಲು ಆಗಲ್ಲ ಎಂದಿದ್ದಾರೆ. ಅವುಗಳು ಹಲವಾರು ಇತರ ರೂಪಾಂತರಗಳ ವಿರುದ್ಧ ಪರಿಣಾಮಕಾರಿ ಆಗಲೂ ಬಹುದು ಎಂದಿದ್ದಾರೆ.
ಒಮಿಕ್ರೋನ್ ನಲ್ಲಿನ ಕೆಲವು ಆನುವಂಶಿಕ ಬದಲಾವಣೆಗಳು ಚಿಂತಾಜನಕ ಎಂಬಂತೆ ಕಂಡು ಬಂದರೂ, ಅವು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬೀಟಾ ರೂಪಾಂತರದಂತಹ ಕೆಲವು ಹಿಂದಿನ ರೂಪಾಂತರಗಳು ಆರಂಭದಲ್ಲಿ ವಿಜ್ಞಾನಿಗಳನ್ನು ಗಾಬರಿಗೊಳಿಸಿದವು. ಆದರೆ, ಅವುಗಳು ಹೆಚ್ಚೇನು ಪ್ರಭಾವ ಬೀರಲಿಲ್ಲ. ಅಂದುಕೊಂಡಷ್ಟು ವ್ಯಾಪಕವಾಗಿ ಹರಡಲೂ ಇಲ್ಲ ಎಂಬುದನ್ನು ಇಲ್ಲಿ ನಾವು ಗಮನಿಸಬೇಕಿದೆ.
ಈ ಹೊಸ ರೂಪಾಂತರವು ಡೆಲ್ಟಾ ಇರುವ ಪ್ರದೇಶಗಳಲ್ಲಿ ಟೋಹೋಲ್ಡ್ ಅನ್ನು ಪಡೆಯಬಹುದೇ ಎಂದು ನಮಗೆ ಇನ್ನೂ ತಿಳಿದು ಬಂದಿಲ್ಲ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ತಜ್ಞ ಪೀಕಾಕ್ ಹೇಳಿದ್ದಾರೆ.
ಈ ಹೊಸ ರೂಪಾಂತರವು ಹುಟ್ಟಿಕೊಂಡಿದ್ದು ಹೇಗೆ?
ಕೊರೊನಾ ವೈರಸ್ ಹರಡಿದಂತೆ ರೂಪಾಂತರಗೊಳ್ಳುತ್ತಾ ಸಾಗುತ್ತೆ. ಆತಂಕಕಾರಿ ಆನುವಂಶಿಕ ಬದಲಾವಣೆಗಳನ್ನು ಒಳಗೊಂಡಂತೆ ಅನೇಕ ಹೊಸ ರೂಪಾಂತರಗಳು ಸಾಮಾನ್ಯವಾಗಿ ಸಾಯುತ್ತವೆ. ರೋಗ ಹೆಚ್ಚು ಹರಡುವ ಅಥವಾ ಮಾರಕವಾಗಿಸುವ ರೂಪಾಂತರಗಳಿಗಾಗಿ ವಿಜ್ಞಾನಿಗಳು ಆಗಾಗಾ ಮೇಲ್ವಿಚಾರಣೆ ಮಾಡುತ್ತಲೇ ಇರುತ್ತಾರೆ. ಆದರೆ, ವೈರಸ್ ನೋಡಿದಾಕ್ಷಣ ಆ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲ.
ಕೋವಿಡ್ ಸೋಂಕಿಗೆ ಒಳಗಾದವರಲ್ಲಿ ಈ ರೂಪಾಂತರವು ವಿಕಸನಗೊಂಡಿರಬಹುದು. ಆದರೆ, ನಂತರ ವೈರಸ್ ಅನ್ನು ತೆರವುಗೊಳಿಸಲು ಸಾಧ್ಯವಾಗದೇ ಇರಬಹುದು, ವೈರಸ್ ತಳೀಯವಾಗಿ ವಿಕಸನಗೊಳ್ಳುವ ಅವಕಾಶವನ್ನು ನೀಡುತ್ತದೆ. ಇಂಗ್ಲೆಂಡ್‌ನಲ್ಲಿ ಮೊದಲು ಗುರುತಿಸಲಾದ ಆಲ್ಫಾ ರೂಪಾಂತರವು ಇದೇ ರೀತಿಯದ್ದಾಗಿದೆ. ಆ್ಯಂಟಿ ಬಾಡಿ ಹೊಂದಿರುವ ವ್ಯಕ್ತಿಯಲ್ಲಿ ಈ ವೈರಸ್ ರೂಪಾಂತರ ಹೊಂದಿ ಮಾರಕವಾಗಲೂ ಬಹುದು.