ರಾಮ, ಕೃಷ್ಣ, ಶಿವ ಮುಸ್ಲಿಮರ ಪೂರ್ವಜರು; ಅವರು ‘ಭಾರತೀಯ ಸಂಸ್ಕೃತಿ’ಗೆ ತಲೆಬಾಗಲೇಬೇಕು: ಉತ್ತರ ಪ್ರದೇಶ ಸಚಿವ
ಬಲ್ಲಿಯಾ: ರಾಮ, ಕೃಷ್ಣ, ಶಿವ ಭಾರತೀಯ ಮುಸ್ಲಿಮರ ಪೂರ್ವಜರು,ಹೀಗಾಗಿ ಅವರು ಭಾರತೀಯ ಸಂಸ್ಕೃತಿಗೆ ತಲೆಬಾಗಲೇಬೇಕು ಎಂದು ಉತ್ತರ ಪ್ರದೇಶ ಸಚಿವ ಆನಂದ ಸ್ವರೂಪ್ ಶುಕ್ಲಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿಂದುತ್ವ ಮತ್ತು “ಭಾರತೀಯ ಸಂಸ್ಕೃತಿ” ಯ ಧ್ವಜವನ್ನು ಎತ್ತಿ ಹಿಡಿಯುವ ಮೂಲಕ ದೇಶದಲ್ಲಿ ಇಸ್ಲಾಮಿಕ್ ರಾಜ್ಯವನ್ನು ರಚಿಸುವ ಉದ್ದೇಶವನ್ನು ತಡೆ ಹಿಡಿದಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಭಾರತದ ಮುಸ್ಲಿಮರ ಪೂರ್ವಜರು ರಾಮ, ಕೃಷ್ಣ ಮತ್ತು ಶಂಕರ (ಶಿವ). ಹೀಗಾಗಿ ಕಾಬಾ ಭೂಮಿಯನ್ನು ನೋಡುವ ಅಗತ್ಯವಿಲ್ಲ. ಮುಸ್ಲಿಮರು ಭಾರತದ ಭೂಮಿ ಮತ್ತು ಸಂಸ್ಕೃತಿಗೆ ತಲೆಬಾಗಲೇಬೇಕು ಎಂದು ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ, ಕಳೆದ ನಾಲ್ಕೂವರೆ ವರ್ಷಗಳ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಸಾಧನೆ ಕುರಿತು ವಿವರವಾದ ಮಾಹಿತಿ ನೀಡಿದರು.
ಸಿರಿಯಾ ಮತ್ತು ಅಫ್ಘಾನಿಸ್ತಾನದ ನಂತರ, ವಿವಿಧ ದೇಶಗಳ ಕೆಲವು ಜನರು ಜಗತ್ತನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡಲು ಬಯಸುತ್ತಿದ್ದಾರೆ ಭಾರತದಲ್ಲಿ ಕೆಲವರಿಗೆ ಈ ಮನಸ್ಥಿತಿ ಇದೆ. ಪಿಎಂ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅರು ಹಿಂದುತ್ವ ಬಾವುಟ ಹಾರಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಕಾಪಾಡುತ್ತಿದ್ದಾರೆ ಎಂದು ಆನಂದ್ ಸ್ವರೂಪ್ ಶುಕ್ಲಾ ಹೇಳಿದ್ದಾರೆ.