ರಾಜ್ಯ ಪ್ರಶಸ್ತಿ ಪಡೆದ ಸ್ಥಳೀಯ ಸಾಧಕರಿಗೆ ಸನ್ಮಾನ
ಕೆಜಿಎಫ್:
ತಾಲ್ಲೂಕಿನ ಸ್ಥಳೀಯವಾಗಿ ಜಾನಪದ ಸಾಹಿತ್ಯ ಸಂಸ್ಕೃತಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ್ದು ಜಾನಪದ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಜಾನಪದ ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ್, ವಕೀಲರಾದ ಬಾಲನ್,ಕಲಾಶ್ರೀ ಪುರಸ್ಕಾರ ಪಡೆದ ಬೇತಮಂಗಲ ನಾದಸ್ವರ ವಿದ್ವಾನ್ ರಮೇಶ್, ಸಾಹಿತ್ಯ ಕ್ಷೇತ್ರದಲ್ಲಿ ಗಮಕ ವಾಚಕರಾದ ಸುವರ್ಣ ಸಂಭ್ರಮ ಪ್ರಶಸ್ತಿ ಪಡೆದ ಆರ್.ವೆಂಕಟರಮಣ ಗ್ರಾಮೀಣ ಕ್ಷೇತ್ರದಲ್ಲಿ ಸೇವೆಯನ್ನು ತಮ್ಮದೇ ಆದಂತಹ ಸೇವೆಯನ್ನು ಸಲ್ಲಿಸಿ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಇವರಿಗೆ ಕೆಜಿಎಫ್ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಬೇತಮಂಗಲ ಸ್ಥಳೀಯರಿಂದ ಗ್ರಾಮದ ವಾಸವಿ ಕಲ್ಯಾಣ ಮಂಟಪದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ರಂಗಸ್ವಾಮಯ್ಯ ಅವರು ಮಾತನಾಡಿ ಕೆಜಿಎಫ್ ತಾಲ್ಲೂಕಿನ ಪ್ರತಿಭೆಗಳು ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆಯುತ್ತಿರುವುದು ನಮ್ಮ ಪುಣ್ಯವಾಗಿದೆ ,ನಾನು ಸುಮಾರು 12 ವರ್ಷಗಳಿಂದ ಈ ಒಂದು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪ್ರತಿಯೊಂದು ಕ್ಷೇತ್ರದಲ್ಲಿಯೂ ದೊಡ್ಡ ದೊಡ್ಡ ಪ್ರತಿಭೆಗಳು ತಮ್ಮದೇ ಆದಂತಹ ಸಾಧನೆಯನ್ನು ಮಾಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆಯನ್ನು ಮಾಡಿರುವುದು ಸಂತೋಷದ ವಿಷಯವಾಗಿದೆ .ಯಾವುದೇ ಒಂದು ಪ್ರಶಸ್ತಿಯನ್ನು ಪಡೆಯುವುದು ಅಷ್ಟೊಂದು ಸುಲಭದ ಕೆಲಸವಲ್ಲ ಪಿಚ್ಚಳ್ಳಿ ಶ್ರೀನಿವಾಸ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇನ್ನು ಮುಂಚಿತವಾಗಿ ನೀಡಬೇಕಿತ್ತು ಅವರ ಸಾದನೆ ಅಪಾರವಾಗಿದೆ ಆದ್ದರಿಂದ ಈ ದಿನ ಅವರೊಂದಿಗೆ ನಾವು ಪಾಲ್ಗೊಂಡಿರುವುದು ನಮ್ಮ ಅದೃಷ್ಟ ಎನ್ನಬಹುದಾಗಿ ತಿಳಿಸಿದರು .
ಜೆ ಜಿ ಶ್ರೀನಿವಾಸ್ ಮೂರ್ತಿ ಅವರು ಮಾತನಾಡಿ ಪಿಚ್ಚಳ್ಳಿ ಶ್ರೀನಿವಾಸ್ ನಮ್ಮ ಭಾಗದ ಹೆಚ್ಚಿನ ಜಾನಪದ ಕಲಾವಿದರಿಗೆ ಮಾರ್ಗದರ್ಶಕರಾಗಿ ಅನೇಕ ಯುವ ಪ್ರತಿಭೆಗಳಿಗೆ ಮಾಲೂರಿನಲ್ಲಿ ಸಾರಂಗ ರಂಗ ಎಂಬ ಸಂಸ್ಥೆಯ ಮೂಲಕ ನಾಟಕ ಹಾಡುಗಾರಿಕೆ ಮುಂತಾದ ಜಾನಪದ ಕಲೆಗಳ ತರಬೇತಿಯನ್ನು ನೀಡುತ್ತಿದ್ದಾರೆ ಮತ್ತು ಹಿಂದಿನ ಅವಧಿಯಲ್ಲಿ ಅವರು ಜಾನಪದ ಅಕಾಡೆಮಿ ಅಧ್ಯಕ್ಷರ ಅವಧಿಯಲ್ಲಿ ನಮ್ಮ ಗ್ರಾಮೀಣ ಭಾಗದ ಅನೇಕ ಹಿರಿಯ ಪ್ರತಿಭೆಗಳಿಗೆ ಮಾಸಾಶನ ಯೋಜನೆ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿ. ಪ್ರಶಸ್ತಿಯನ್ನು ಪಡೆದುಕೊಂಡಿರುವ ಎಲ್ಲಾ ಸಾದಕರಿಗೂ ಅಭಿನಂದನಾ ಕಾರ್ಯಕ್ರಮವನ್ನು ಸರಳವಾಗಿ ಹಮ್ಮಿಕೊಂಡಿರುವುದು ವಿಶೇಷ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ವಿನೂ ಕಾರ್ತಿಕ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಹರಿ ಕರ್ನಾಟಕ ರಕ್ಷಣಾ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಕೋದಂಡರಾಮಯ್ಯ, ಕನ್ನಡ ಸಾಹಿತ್ಯ ಪರಿಷತ್ ಬೇತಮಂಗಲ ಹೋಬಳಿ ಅಧ್ಯಕ್ಷರಾದ ತ್ಯಾಗರಾಜ್, ಬಿ.ಆರ್.ಪಿ. ಶಂಕರ್,ನವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಜೆಜಿ ವಿಶ್ವನಾಥ್, ಶಿಕ್ಷಕರಾದ ಲಕ್ಷ್ಮೀನಾರಾಯಣ, ವೆಂಕಟೇಶ್, ಬಸವರಾಜ್, ಗೋವಿಂದಪ್ಪ, ನಾರಾಯಣಸ್ವಾಮಿ, ಕಂಗನಲ್ಲೂರು ದೇವರಾಜ್ ಮತ್ತು ಸ್ಥಳೀಯ ಮುಖಂಡರು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.