ಸುದ್ದಿ

ರಾಜ್ಯದಲ್ಲಿ ಒಂದೇ ದಿನ 149 ಮಂದಿಗೆ ಒಮಿಕ್ರೋನ್!

ಬೆಂಗಳೂರು (ಜ. 05): ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ (Covid 19) ಹೆಚ್ಚಾಗುತ್ತಿದೆ. ಮಂಗಳವಾರ ಒಂದೇ ದಿನ 3047 ಕೇಸ್ ಪತ್ತೆಯಾಗಿದೆ. 

ರಾಜ್ಯದಲ್ಲಿ ಮೊದಲೆರಡು ಅಲೆಗಳು ಸೃಷ್ಟಿಯಾದ ಸಂದರ್ಭದಲ್ಲಿ ಆಗಿರುವಂತೆ ಈ ಬಾರಿಯೂ ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾಗುತ್ತಿದೆ.ರಾಜ್ಯದ ಒಟ್ಟು ಪ್ರಕರಣದಲ್ಲಿ ಬೆಂಗಳೂರಿನ ಪಾಲು ಶೇ.80 ರಷ್ಟಿದೆ. ರಾಜ್ಯದ ಒಟ್ಟು 13,532 ಸಕ್ರಿಯ ಪ್ರಕರಣಗಳಲ್ಲಿ 11,423 ಸಕ್ರಿಯ ಪ್ರಕರಣಗಳು ರಾಜ್ಯ ರಾಜಧಾನಿಯಲ್ಲೇ ಇದೆ. ಇನ್ನು ಡಿ. 1 ರಿಂದ ಜನವರಿ 3 ರವರೆಗೆ 77 ಒಮಿಕ್ರೋನ್ ಪ್ರಕರಣಗಳು ದಾಖಲಾಗಿದೆ. ಮಂಗಳವಾರ ಒಂದೇ ದಿನ 149 ಹೊಸ ಪ್ರಕರಣಗಳು ಪತ್ತೆಯಾಗಿವೆ. 

Related Articles

Leave a Reply

Your email address will not be published. Required fields are marked *

Back to top button