ರಷ್ಯಾದಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತಿವೆ ನಾಯಿಗಳು – ಆತಂಕ ಶುರು..!
ರಷ್ಯಾದಲ್ಲಿ ನಾಯಿಗಳು ನೀಲಿ ಬಣ್ಣಕ್ಕೆ ತಿರುತ್ತಿದ್ದು, ಒಂದೆಡೆ ಆಶ್ಚರ್ಯ ಮತ್ತೊಂದೆಡೆ ಆತಂಕದ ವಾತಾವರಣ ನಿರ್ಮಾಣವಾಗ್ತಿದೆ. ಹೌದು ಮಾಸ್ಕೋದ ಸಮೀಪವಿರುವ ನಗರದ ಬೀದಿಗಳಲ್ಲಿ ಇಂತಹ ನೀಲಿ ಬಣ್ಣದ ನಾಯಿಗಳು ಕಾಣಿಸತೊಡಗಿವೆ. ಇನ್ನೂ ಪ್ಲೆಕ್ಸಿಗ್ಲಾಸ್ ಮತ್ತು ಹೈಡ್ರೋಸಯಾನಿಕ್ ಆಸಿಡ್ ಹಾನಿಕಾರಕ ರಾಸಾಯನಿಕಗಳಿಂದಾಗಿ ನಾಯಿಗಳು ನೀಲಿ ಬಣ್ಣಕ್ಕೆ ತಿರುಗುತ್ತಿವೆ ಎಂಬ ಶಂಕೆ ವ್ಯಕ್ತವಾಗಿದೆ.
ಹೈಡ್ರೋಜನ್ ಸೈನೈಡ್ ಅನ್ನು ನೀರಿನೊಂದಿಗೆ ಬೆರೆಸಿದಾಗ ಈ ಆಮ್ಲವು ರೂಪುಗೊಳ್ಳುತ್ತದೆ. ಹೈಡ್ರೋಜನ್ ಸೈನೈಡ್ ಅತ್ಯಂತ ವಿಷಕಾರಿ ಸಂಯುಕ್ತವಾಗಿದೆ. ಇದು ನಾಯಿಗಳ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಆದ್ರೂ ರಾಸಾಯನಿಕದ ಪರಿಣಾಮದ ಬಗ್ಗೆ ಕಳವಳ ವ್ಯಕ್ತವಾಗಿದೆ. ರಾಸಾಯನಿಕಗಳು ಚರ್ಮದ ಮೇಲೆ ಕಿರಿಕಿರಿಯುಂಟು ಮಾಡುತ್ತವೆ. ತುರಿಕೆಗೆ ಕಾರಣವಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿಲ್ಲವೆಂದ್ರೆ ಅನಾರೋಗ್ಯ ಪ್ರಾಣಕ್ಕೆ ಕುತ್ತು ತರಬಹುದು ಎಂದು ತಜ್ಞರು ಹೇಳಿದ್ದಾರೆ. ಅಂದ್ಹಾಗೆ ಭಾರತದಲ್ಲೂ ಇಂಥಹದ್ದೇ ಒಂದು ಪ್ರಕರಣ 2017 ಆಗಸ್ಟ್ ನಲ್ಲಿ ಬೆಳಕಿಗೆ ಬಂದಿತ್ತು. ಮುಂಬೈನ ಕಾರ್ಖಾನೆಯೊಂದು, ತ್ಯಾಜ್ಯ ಮತ್ತು ಬಣ್ಣವನ್ನು ಹತ್ತಿರದ ನದಿಗೆ ಎಸೆಯುತ್ತಿದ್ದ ಪರಿಣಾಮ 11 ನಾಯಿಗಳ ಬಣ್ಣ ನೀಲಿಯಾಗಿತ್ತು.