ರಾಜ್ಯ
Trending
ಸ್ಥಳದಲ್ಲೇ ಸಲ್ಪ ಮಟ್ಟಿನ ಪರಿಹಾರ ಮಾಡಿ ರಸ್ತೆ ಗೆ ಗುದ್ದಲಿ ಪೂಜೆ ನೆರವೇರಿಸಿ ಕೆಲಸ ಪ್ರಾರಂಭ ಮಾಡಲು ಹೇಳಿದ ಶಾಸಕ ಸಿಮೆಂಟ್ ಮಂಜು

ತಾಲ್ಲೂಕಿನ ಯಸಳೂರು ಹೋಬಳಿ ಕೌಕೋಡಿ ತಡಕಲು ಗ್ರಾಮದ ರಸ್ತೆಗೆ ಎಸ್ ಸಿಪಿ/ ಟಿಎಸ್ ಪಿ ಹಣದಲ್ಲಿ ಒಂದು ಕೋಟಿ ರೂ ಅನುದಾನ ಕಾಮಗಾರಿ ಯನ್ನು ಶಾಸಕ ಸಿಮೆಂಟ್ ಮಂಜು ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ತಡಕಲು ಹಾಗು ಪರಿಶಿಷ್ಟ ಜಾತಿ ಕಾಲೂನಿಗೆ ಒಂದುಕೋಟಿ ಹಣದಲ್ಲಿ ಕಾಲೂನಿಗೆ 3ಮೀಟರ್ ರಸ್ತೆ ಮಾಡಲು 15 ದಿನಗಳಲ್ಲಿ ಕೆಲಸ ಪ್ರಾರಂಭ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೆಲಸ ಪ್ರಾರಂಭ ಆಗುತ್ತದೆ. ಅಂಬೇಡ್ಕರ್ ಭವನ ಸಮಸ್ಯೆ ಸರಿಪಡಿಸುವುದಾಗಿ ಹೇಳಿದರು.
ಶಾಸಕರ ನಿರ್ಧಾರದಿಂದ ಸ್ವಲ್ಪ ಮಟ್ಟಿಗೆ ಸಮಸ್ಯೆ ಪರಿಹಾರ ಆಗಿದೆ ಯಾವುದೇ ಶಾಸಕರು ನಮ್ಮ ಊರಿಗೆ ಬಂದಿರಲಿಲ್ಲ ನೀವು ಊರಿಗೆ ಬಂದು ಸಲ್ಪವಾದರೂ ರಸ್ತೆ ಮಾಡಲು ಕೆಲಸ ಪ್ರಾರಂಭಿಸಲು ಸೂಚನೆ ನೀಡಿರುವುದು ಸಂತಸ ತಂದಿದೆ ತಮಗೆ ಅಭಿನಂದನೆಗಳು ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾ ಅಧ್ಯಕ್ಷ ಅಶ್ವತ್ . ಮಾಜಿ ಅಧ್ಯಕ್ಷರು. ಶಿವಕುಮಾರ್, ಜಯಮ್ಮ ಗ್ರಾಮಸ್ಥರು ಉಪಸ್ಥಿತರಿದ್ದರು