ರಾಜ್ಯ
Trending

ಯೋಧರು ಖರೀದಿಸುವ ಮದ್ಯದ ತೆರಿಗೆ ಹೆಚ್ಚಿಸಲು ಮುಂದಾದ ಕಾಂಗ್ರೆಸ್ ಸರ್ಕಾರ

ಬೆಂಗಳೂರು, ಮೇ 19: ಕಾಂಗ್ರೆಸ್ ಸರ್ಕಾರ (Congress Govt) ಅಧಿಕಾರಕ್ಕೆ ಬಂದ ಮೇಲೆ ಈಗಾಗಲೇ ಕರ್ನಾಟಕದಲ್ಲಿ ಮೂರು ಬಾರಿ ಮದ್ಯದ ದರ ಏರಿಕೆ (Liquor Price Hike) ಮಾಡಲಾಗಿದೆ. ಇದರಿಂದ ಮದ್ಯಪ್ರಿಯರಿಗೆ ಶಾಕ್ ಎದುರಾಗಿದ್ದರೆ, ಮತ್ತೊಂದೆಡೆ, ಮದ್ಯ ಮಾರಾಟಗಾರರ ಪರವಾನಗಿ ದರ ಹೆಚ್ಚಳ ಮಾಡುವುದಕ್ಕೂ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಮದ್ಯ ಮಾರಾಟಗಾರರು ಕಂಗಲಾಗಿದ್ದಾರೆ. ಇಷ್ಟೇ ಸಾಲದು ಎಂದು ಇದೀಗ ಆರ್ಮಿ ಕ್ಯಾಂಟೀನ್​ಗೆ ಪೂರೈಕೆ ಮಾಡುವ ಮದ್ಯದ ತೆರಿಗೆ ಹೆಚ್ಚಳಕ್ಕೂ ಅಬಕಾರಿ ಇಲಾಖೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಮದ್ಯ ಮಾರಾಟಗಾರರು, ಆರ್ಮಿ ಕ್ಯಾಂಟೀನ್ ಹೆಸರಿನಲ್ಲಿ ಸಾಕಷ್ಟು ಮದ್ಯ ಬ್ಲಾಕ್​ನಲ್ಲಿ ಮಾರಾಟವಾಗುತ್ತಿದೆ. ಎಲ್ಲರೂ ಹೀಗೆ ಮಾಡುವುದಿಲ್ಲ. ಕೆಲವರು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ದರ ಏರಿಕೆ ಮಾಡಿದರೆ ಇದಕ್ಕೆ ಬ್ರೇಕ್ ಬೀಳಬಹುದು ಎಂದಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 70 ಆರ್ಮಿ ಕ್ಯಾಂಟೀನ್​​ಗಳಿವೆ. ಎಲ್ಲಾ ಆರ್ಮಿ ಕ್ಯಾಂಟೀನ್​ಗಳಿಗೂ ಅಬಕಾರಿ ಇಲಾಖೆ ರಿಯಾಯಿತಿ ದರದಲ್ಲಿ ಮದ್ಯವನ್ನು ಮಾರಾಟ ಮಾಡುತ್ತದೆ. ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಸ್ಟೋರ್ ಗಳಲ್ಲಿ, ಎಂಆರ್ಪಿಪಿ ಮತ್ತು ಎಂಎಸ್ಐಎಲ್ ಗಳಲ್ಲಿ ಒಂದು ಫುಲ್ ಬಾಟಲ್ ಗೆ 2300 ರಿಂದ 2500 ರುಪಾಯಿ ಇದ್ದರೆ, ಒಂದು ಫುಲ್ ಬಾಟಲ್ ಮದ್ಯ ಆರ್ಮಿ ಕ್ಯಾಂಟೀನ್ ನಲ್ಲಿ 500 ರಿಂದ 600 ರುಪಾಯಿಗೆ ದೊರೆಯುತ್ತದೆ. ಒಬ್ಬ ಯೋಧನಿಗೆ ಪ್ರತಿ ತಿಂಗಳು 2 ರಿಂದ 4 ಬಾಟಲ್ ಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.

ಯೋಧರ ಮದ್ಯದ ತೆರಿಗೆ ಹೆಚ್ಚಳ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಮದ್ಯಪ್ರಿಯರು, ಈಗಾಗಲೇ ನಾವು ಕುಡಿಯುವ ಮದ್ಯದ ದರವನ್ನು ಸರ್ಕಾರ ಏರಿಕೆ‌ ಮಾಡಿದೆ. ಇದೀಗ ದೇಶ ಕಾಯುವ ಯೋಧರಿಗೆ ನೀಡುವ ಮದ್ಯದ ದರವನ್ನು ಹೆಚ್ಚಿಸಲು ಚಿಂತನೆ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ‌‌.

ಈಗಾಗಲೇ ರಾಜ್ಯದಲ್ಲಿ ಮೂರು ಬಾರಿ ಮದ್ಯದ ದರವನ್ನು ಏರಿಕೆ ಮಾಡಲಾಗಿದೆ. ಯೋಧರಿಗೆ ಮತ್ತು ಮಾಜಿ ಯೋಧರಿಗೆ ರಿಯಾಯಿತಿ ದರದಲ್ಲಿ ನೀಡುವ ಮದ್ಯದ ತೆರಿಗೆಯನ್ನು ಹೆಚ್ಚಿಸಲು ಸರ್ಕಾರ ಈಗಾಗಲೇ ಚಿಂತನೆ ನಡೆಸಿದ್ದು,ಇದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button