ಇತ್ತೀಚಿನ ಸುದ್ದಿ

ಚಿಕ್ಕ ಮಂಡ್ಯದಲ್ಲಿ ಹೆಲಿಕಾಪ್ಟರ್ ರೈಡ್ : ಬೂದನೂರು ಉತ್ಸವ

ಜಿಲ್ಲೆಯ ಯುವ ಜನತೆಯು ನಗರದ ಚಿತ್ರಣವನ್ನು ಪ್ರದರ್ಶನ ಮಾಡುವ ನಿಟ್ಟಿನಲ್ಲಿ ಹೆಲಿಪ್ಯಾಡ್ ಸವಾರಿ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಗಿದ್ದು ಮೂರು ದಿನಗಳ ಕಾಲ ಸವಾರಿ ಪ್ರದರ್ಶನ ಕಾರ್ಯಕ್ರಮ ಇರುತ್ತದೆ ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ರವರು ಹೇಳಿದರು.

ಬೂದನೂರು ಉತ್ಸವ 2026ರ ಪ್ರಯುಕ್ತ ಚಿಕ್ಕ ಮಂಡ್ಯದಲ್ಲಿ ಹೆಲಿಕಾಪ್ಟರ್ ರೈಡ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಜೊತೆಗೆ ಜಿಲ್ಲೆಯ ಸಾರ್ವಜನಿಕರ ನೂತನವಾಗಿ ಕಾರ್ಯಕ್ರಮವನ್ನು ಮಾಡುವ ನಿಟ್ಟಿನಲ್ಲಿ ಬೂದನೂರು ಉತ್ಸವ ಪ್ರಯುಕ್ತ ಹೆಲಿ ಟೂರಿಸಂ ಹೆಲಿಪ್ಯಾಡ್ ಸವಾರಿ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಬೂದನೂರು ಉತ್ಸವವನ್ನು ಮೊದಲನೇ ವರ್ಷ ತುಂಬಾ ಯಶಸ್ವಿಯಾಗಿ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ನೂತನ ವರ್ಷ ಬಹಳ ವಿಭಿನ್ನವಾಗಿ ಮಾಡಬೇಕು ಎಂದು ಹೇಳಿದರು

ಜಿಲ್ಲೆಯಲ್ಲಿ ಬೂದನೂರು ಉತ್ಸವ -2026 ರ ಪ್ರಯುಕ್ತ ಏರ್ಪಡಿಸಲಗಿದ್ದ ವಿವಿಧ ರೀತಿಯ ಕ್ರೀಡೆ ಮತ್ತು ರಂಗೋಲಿ ಸ್ಪರ್ಧೆಗಳ ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿ ಪೂರ್ಣಗೊಂಡವೆ ಎಂದು ಹೇಳಿದರು.

ಮಾರ್ಚ್ 7 ರಂದು ಜಿಲ್ಲಾಡಳಿತ ವತಿಯಿಂದ “ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು ಮತ್ತು ಅಸ್ಪೃಶ್ಯತಾ ನಿವಾರಣಾ ಕಾಯ್ದೆ ” ಯ ಅರಿವು ಕಾರ್ಯಾಗಾರವನ್ನು ನಗರದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ಸಮಾಜದ ಎಲ್ಲಾ ವರ್ಗದವರು ಮತ್ತು ಮುಖಂಡರುಗಳು ಕಾರ್ಯಗಾರ ಕಾರ್ಯಕ್ರಮಕ್ಕೆ ಭಾವಹಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಸಂದರ್ಭದಲ್ಲಿ ಜಿಲ್ಲಾ ಶಾಸಕರಾದ ಪಿ ರವಿಕುಮಾರ್, ಮದ್ದೂರು ಶಾಸಕರಾದ ಕೆ. ಎಂ ಉದಯ್,ಜಿಲ್ಲಾಧಿಕಾರಿಗಳಾದ ಡಾ. ಕುಮಾರ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕೆ ಆರ್.ನಂದಿನಿ, ಪೊಲೀಸ್ ಅಧೀಕ್ಷಕರಾದ ವಿ ಜೆ ಶೋಭಾ ರಾಣಿ, ಉಪ ವಿಭಾಗ ಅಧಿಕಾರಿಯಾದ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್ ಇನ್ನಿತರರಿದ್ದರು.

ವರದಿ ಅನಿಲ್ ಕುಮಾರ್ ಕೆ ಟಿ

Related Articles

Leave a Reply

Your email address will not be published. Required fields are marked *

Back to top button