ಯುಕೆ ಪ್ರಧಾನಿ ಚುನಾವಣೆ: ಮೊದಲ ಹಂತದಲ್ಲಿ ಅತಿಹೆಚ್ಚು ಮತ ಗಳಿಸಿದ ರಿಷಿ ಸುನಕ್
ಯುನೈಟೆಡ್ ಕಿಂಗ್ಡಮ್ ಪ್ರಧಾನಮಂತ್ರಿ ಚುನಾವಣೆ ಅಖಾಡಕ್ಕೆ ಇಳಿದಿರುವ ಭಾರತೀಯ ಮೂಲದ ಬ್ರಿಟನ್ ಸಂಸದ ರಿಷಿ ಸುನಕ್ ಮೊದಲ ಸುತ್ತಿನಲ್ಲಿ ಅತಿಹೆಚ್ಚು ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.
ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಯುಕೆ ಪ್ರಧಾನ ಮಂತ್ರಿಯಾಗಿ ಬೋರಿಸ್ ಜಾನ್ಸನ್ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಮೊದಲ ಸುತ್ತಿನ ಮತಗಳ ಎಣಿಕೆ ನಂತರದಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಹೊರಹಾಕಲಾಗಿದೆ. ಹೊಸದಾಗಿ ನೇಮಕಗೊಂಡ ಚಾನ್ಸೆಲರ್ ನಧಿಮ್ ಜಹಾವಿ ಮತ್ತು ಮಾಜಿ ಕ್ಯಾಬಿನೆಟ್ ಸಚಿವ ಜೆರೆಮಿ ಹಂಟ್ ಕನಿಷ್ಠ 30 ಸಂಸದರ ಅಗತ್ಯ ಮತಗಳನ್ನು ಸೆಳೆಯಲು ಸಾಧ್ಯವಾಗದ ಕಾರಣ ರೇಸ್ನಿಂದ ಔಟ್ ಆಗಿದ್ದಾರೆ.
ಇದರ ಮಧ್ಯೆ, ಇತರ ಪ್ರಮುಖ ಸ್ಪರ್ಧಿಯಾಗಿರುವ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು 50 ಮತಗಳನ್ನು ಪಡೆದಿದ್ದಾರೆ. ಪ್ರಧಾನಮಂತ್ರಿ ಚುನಾವಣೆ ಸ್ಪರ್ಧೆಯ ಆರಂಭಿಕ ಹಂತದಲ್ಲಿ, ಸಂಸದ ರಿಷಿ ಸುನಾಕ್, ಸಚಿವ ಪೆನ್ನಿ ಮೊರ್ಡಾಂಟ್ ಮತ್ತು ಲಿಜ್ ಟ್ರಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ಸೆಪ್ಟೆಂಬರ್ 5ರಂದು ನೂತನ ಪ್ರಧಾನಿ ಆಯ್ಕೆ:
ಟೋರಿ ಪಕ್ಷದ ಸದಸ್ಯತ್ವವು ತಮ್ಮ ವಿಜೇತರನ್ನು ಆಯ್ಕೆ ಮಾಡುವ ಮೊದಲು ಕನ್ಸರ್ವೇಟಿವ್ ಸಂಸದರು ಸತತ ಸುತ್ತಿನ ಮತದಾನದ ಮೂಲಕ ಇಬ್ಬರು ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತದೆ. ಈ ಪೈಕಿ ಹೆಚ್ಚು ಮತಗಳನ್ನು ಪಡೆದುಕೊಳ್ಳುವ ಅಭ್ಯರ್ಥಿಯನ್ನೇ ಸೆಪ್ಟೆಂಬರ್ 5ರಂದು ಹೊಸ ಕನ್ಸರ್ವೇಟಿವ್ ಪಕ್ಷ ಮತ್ತು ಬ್ರಿಟಿಷ್ ಪ್ರಧಾನ ಮಂತ್ರಿ ನಾಯಕನಾಗಿ ಆಯ್ಕೆ ಮಾಡಲಾಗುತ್ತದೆ.