ಇತ್ತೀಚಿನ ಸುದ್ದಿರಾಜ್ಯ

ಯಾದಗಿರಿಗೆ ಇತಿಹಾಸ ನಿರ್ಮಿಸಿದ್ದೆ ಕೋಲೂರು ಮಲ್ಲಪ್ಪ: ಶರಣಪ್ಪ

ಯಾದಗಿರಿ: ಸ್ವರ್ಣಗಿರಿ ಟ್ರಸ್ಟ್ ಮತ್ತು ಕೆಎಂಎಂ ಪಿಯು ಕಾಲೇಜು ಸಹಯೋಗದಲ್ಲಿ ನಡೆದ ಕೋಲೂರು ಮಲ್ಲಪ್ಪನವರ ಪುಣ್ಯ ಸ್ಮರಣೆ ಹಾಗೂ ಕೋಲೂರು ಮಲ್ಲಪ್ಪನವರ ರಾಜಕೀಯ ವಿಚಾರಧಾರೆಗಳು ವಿಶೇಷ ಕಾರ್ಯಕ್ರಮವನ್ನು ಕುರಿತು ಶ್ರೀ ಶರಣಪ್ಪ ರಾಹುಲ್ ಪ್ರಾಂಶುಪಾಲರು, ಜವಾಹರ್ ಪದವಿ ಮಾರ್ವಿದ್ಯಾಲಯ ಇವರು ಕೊಲ್ಲೂರು ಮಲ್ಲಪ್ಪನವರ ರಾಜಕೀಯ ವಿಚಾರಗಳನ್ನು ಕುರಿತು ಉಪನ್ಯಾಸ ನೀಡಿದರು.

ಹೈದರಾಬಾದ್ ಕರ್ನಾಟಕದ ಗಾಂಧಿ ಎಂದು ಹೆಸರು ಪಡೆದಿರುವ ಕೋಳೂರು ಮಲ್ಲಪ್ಪನವರು ಮೂಲತ ನಮ್ಮ ಯಾದಗಿರಿ ಜಿಲ್ಲೆಯ ಕೊಯ್ಲೂರು ಗ್ರಾಮದವರು ಇವರ ತಂದೆ ಲಿಂಗಪ್ಪನವರು ತಮ್ಮ ಕೆಲಸ ಕಾರ್ಯಗಳ ಸಂದರ್ಭದಲ್ಲಿ ಮಲ್ಲಪ್ಪನವರನ್ನು ಸಹ ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದರಿಂದ ಮಲ್ಲಪ್ಪನವರಿಗೆ ಸಮಾಜದಲ್ಲಿರುವ ರಾಜಕೀಯ ಜ್ಞಾನ ಮತ್ತು ವ್ಯವಹಾರಿಕ ಜ್ಞಾನ ಅರ್ಥವಾಯಿತು ಹಾಗಾಗಿ ಅವರು ಚಿಕ್ಕವಯಸ್ಸಿನಲ್ಲೇ ಸಮಾಜದಲ್ಲಿ ಸಂಘಟನೆ ಮಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಅವರ ಸತತ ಪ್ರಯತ್ನದಿಂದ ಈ ಭಾಗದಲ್ಲಿ ನಿಜಾಮನ ಆಳ್ವಿಕೆಯನ್ನು ಅಂತ್ಯ ಮಾಡಲಿಕ್ಕೆ ಸಾಧ್ಯವಾಯಿತು ಇವರು ನಮ್ಮ ಜಿಲ್ಲೆಯ ಹೆಮ್ಮೆಯ ರಾಜಕಾರಣಿ ಎಂದು ಹೇಳಿದರೆ ತಪ್ಪಾಗಲಾರದು ನಮ್ಮ ಯಾದಗಿರಿ ಜಿಲ್ಲೆಗೆ ಒಂದು ಇತಿಹಾಸವಿದೆ ನಮ್ಮ ಯಾದಗಿರಿ ನಗರದಿಂದಲೇ ಕೋಲೂರು ಮಲ್ಲಪ್ಪನವರು ರಾಜಶೇಖರ ಕೋಲು ರವರು ಜಗನ್ ಹತ್ರ ಚಂದ್ರಿಕೆಯವರು ಮೂರು ಜನರು ಒಂದೇ ಜಿಲ್ಲೆಯಿಂದ ಎಂಪಿಯಾಗಿ ಭಾರತ ದೇಶದಲ್ಲಿ ಇತಿಹಾಸವನ್ನು ಸೃಷ್ಟಿಸಿದ ಕೀರ್ತಿ ಮಲ್ಲಪ್ಪನವರಿಗೆ ಸಲ್ಲುತ್ತದೆ ಮಲ್ಲಪ್ಪನವರು ಇಂದ್ರ ಗಾಂಧಿಯವರ ಒಡನಾಟದಲ್ಲಿದ್ದವರು ಅವರು ನೆಹರು ಕುಟುಂಬದೊಂದಿಗೆ ಅನನ್ಯ ಸಂಬಂಧವನ್ನು ಹೊಂದಿದಂತವರು ಹಾಗಾಗಿ ಅವರು ರಾಜಕೀಯದಲ್ಲಿ ಪ್ರಭಾವಿ ನಾಯಕರಾಗಿ ಈ ಭಾಗದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದಿರುವ ಮಲ್ಲಿಕಾರ್ಜುನ ಖರ್ಗೆ ಧರ್ಮಸಿಂಗ್ ಅಂತಹ ನಾಯಕರಿಗೆ ಟಿಕೆಟ್ ಕೊಡಿಸಿ ಈ ಭಾಗದ ಅಭಿವೃದ್ಧಿಗೆ ಪಣತೊಟ್ಟಂತವರು ದೇವರಾಜ್ ಅರಸ್ ಅವರು ಮುಖ್ಯಮಂತ್ರಿ ಮಾಡುವಲ್ಲಿ ಕೋಲೂರು ಮಲ್ಲಪ್ಪನವರ ಪಾತ್ರ ಬಹಳ ಮುಖ್ಯವಾಗಿತ್ತು ಅವರ ರಾಜಕೀಯ ಜೀವನದಲ್ಲಿ ಯಾವತ್ತೂ ಸಿದ್ಧಾಂತ ಮೌಲ್ಯಗಳನ್ನು ಬಿಟ್ಟು ಅವರು ರಾಜಕೀಯ ಮಾಡಲಿಲ್ಲ ಹಾಗಾಗಿ ಮುಂದೆ ತಮ್ಮ ಕುಟುಂಬದವರಿಗೆ ರಾಜಕೀಯದ ನೆರಳು ಸಹ ಬೆಳದಂತೆ ನೋಡಿಕೊಂಡರು ಅವರು ಯಾವಾಗಲೂ ವ್ಯಕ್ತಿ ಸ್ವತಂತ್ರವಾಗಿ ಬೆಳೆಯಬೇಕೆ ವಿನಹ ಮತ್ತೊಬ್ಬರ ಹೆಸರನ್ನು ಹೇಳಿಕೊಂಡು ಬೆಳೆಯಬಾರದೆಂದು ತಮ್ಮ ಆಪ್ತರಿಗೆ ಕುಟುಂಬದ ಸದಸ್ಯರಿಗೆ ಹೇಳಿಕೊಂಡು ಬರುತ್ತಿದ್ದರು. ಇಂತಹ ಪ್ರಾಮಾಣಿಕ ರಾಜಕಾರಣಿ ನಮಗೆ ಸಿಗುವುದು ಬಹಳ ಅಪರೂಪ ಇವರು ಅಕ್ಟೋಬರ್ 24 2004ರಲ್ಲಿ ಅಸ್ತಂಗತರಾದರು ಇವರು ದೈವಾಧೀನರಾಗಿ ಇಲ್ಲಿಗೆ 20 ವರ್ಷಗಳು ತುಂಬಿವೆ ಅದರ ಪ್ರಯುಕ್ತ ಇವತ್ತು ನಾವು ಕೋಲೂರು ಮಲ್ಲಪ್ಪನವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನ ನಾವು ಸ್ವರ್ಣ ಗಿರಿ ಟ್ರಸ್ಟ್ ಮತ್ತು ಕೆಎಮ್ ಪಿಯು ಕಾಲೇಜು ಸಹಯೋಗದಲ್ಲಿ ಮಾಡುವುದು ಬಹಳ ಸಂತೋಷದ ಸಂಗತಿ ಹೀಗೆ ಇಂತಹ ಮಹಾನ್ ನಾಯಕರ ಜೀವನ ಚರಿತ್ರೆಯನ್ನು ತಿಳಿವಂತಹ ಕಾರ್ಯಗಳು ಹೆಚ್ಚು ಹೆಚ್ಚು ಮಾಡಲಿ ಎಂದು ಹೇಳಿದರು.

ಸ್ವರ್ಣ ಗಿರಿ ಟ್ರಸ್ಟ್ ನ ಅಧ್ಯಕ್ಷರಾದ ಡಾಕ್ಟರ್ ಶ್ರೀಶೈಲ್ ಪೂಜಾರಿಯವರು ಕಾರ್ಯಕ್ರಮವನ್ನು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಲ್ಲಿಕಾರ್ಜುನ ಕರ್ಕಳ್ಳಿ ಅಧ್ಯಕ್ಷರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವಡಿಗೇರ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಹದೇವಪ್ಪ ಗುಂಡೂರಗಿ ಉಪಸ್ಥಿತರಿದ್ದರು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಮುಂಡರಗಿ ಪ್ರಾಂಶುಪಾಲರು ಕಾಲೇಜ್ ವಹಿಸಿಕೊಂಡಿದ್ದರು.
ಮಾಳಮ್ಮ ಮತ್ತು ಸಂಗಡಿಗರು ಪ್ರಾರ್ಥನ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಸಾಬಣ್ಣ ಉಳಗೋಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು ಭೀಮರಾಯ ಅನ್ಪೂರ್ ಸ್ವಾಗತಿಸಿದರು, ಪವಿತ್ರ ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button