ಇತ್ತೀಚಿನ ಸುದ್ದಿಸುದ್ದಿ
ಯಂಗ್ ಆಗಿ ಕಾಣಲು ಈ ʼಪೇಸ್ಟ್ʼ ಮುಖಕ್ಕೆ ಹಚ್ಚಿ
ಯಂಗ್ ಆಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಇದಕ್ಕಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡೋರು ಇದ್ದಾರೆ. ಆದರೆ ಇಂದು ನಾವು ಸುಲಭವಾದ ಉಪಾಯ ಹೇಳ್ತೇವೆ ಕೇಳಿ.
ಜಪಾನಿ ಮಹಿಳೆಯರು ಎಂದೂ ಮೇಕಪ್ ಮಾಡೋದಿಲ್ಲ. ಅವರು ಬಳಸೋದು ಅನ್ನದ ಪೇಸ್ಟ್. ಹೌದು ವಾರದಲ್ಲಿ ಒಂದು ದಿನ ಅನ್ನದ ಪೇಸ್ಟನ್ನು ಮುಖಕ್ಕೆ ಹಚ್ಚಿಕೊಂಡರೆ ನೀವು 10 ವರ್ಷ ಚಿಕ್ಕವರಾಗಿ ಕಾಣುತ್ತೀರಾ ನೆನಪಿರಲಿ.
ಅನ್ನದ ಪೇಸ್ಟ್
ಬೇಕಾಗುವ ಸಾಮಾನು : 3 ಚಮಚ ಅನ್ನ, 1 ಚಮಚ ಹಾಲು, 1 ಚಮಚ ಜೇನು ತುಪ್ಪ.
ಮಾಡುವ ವಿಧಾನ: ಅಕ್ಕಿಗೆ ನೀರು ಹಾಕಿ ಬೇಯಿಸಿ. ಬೆಂದ ನಂತರ ಅನ್ನದ ನೀರನ್ನು ಬಸಿದು ಬದಿಗಿಡಿ. ಈ ಅನ್ನಕ್ಕೆ ಬಿಸಿ ಹಾಲು ಹಾಗೂ ಜೇನುತುಪ್ಪವನ್ನು ಹಾಕಿ. ಈ ಮೂರನ್ನೂ ಸರಿಯಾಗಿ ಮಿಕ್ಸ್ ಮಾಡಿ ಮುಖಕ್ಕೆ ಪ್ಯಾಕ್ ಮಾಡಿಕೊಳ್ಳಿ. ನಂತರ ಅನ್ನದಿಂದ ಬಸಿದಿಟ್ಟಿರುವ ನೀರಿನಲ್ಲಿ ಮುಖ ತೊಳೆಯಿರಿ. ಇದು ನಿಮ್ಮ ಮುಖದ ಮೇಲಿರುವ ತೇವಾಂಶವನ್ನು ಹೀರಿಕೊಳ್ಳುತ್ತದೆ. ಮುಖದ ಮೇಲಿರುವ ಕಲೆಗಳು ಹೋಗುತ್ತವೆ. ಸುಕ್ಕುಗಳು ಕಡಿಮೆಯಾಗುತ್ತವೆ.